ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಗೂಗಲ್ ಮೀಟಿಂಗ್ ಮಾಡಲು ಜೂಮ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಲು ಗೂಗಲ್ ಹೇಳಿದೆ. ಜೂಮ್ ರೂಮ್‌ಗಳು ಮತ್ತು ಗೂಗಲ್ ಮೀಟ್ಗಳನ್ನು ಬಳಸಿ ನಾವು ಗೂಗಲ್ ಮೀಟಿಂಗ್ ಮಾಡಬಹುದಾಗಿದೆ. ನಾವು ಈ ಮೀಟ್ಗಳನ್ನು ಒಂದೋ ನೇರವಾಗಿ ಜೂಮ್ ರೂಮ್ ಕ್ಯಾಲೆಂಡರ್ನಿಂದ ಅಥವಾ ಗೂಗಲ್ ಮೀಟ್ ಅಲ್ಲಿ ಮೀಟಿಂಗ್ ಕೋಡ್ನ್ನು ಅಳವಡಿಸುವ ಮೂಲಕ ಮೀಟಿಂಗ್ಗೆ ಸೇರಬಹುದು ಎಂದು ಸರ್ಚ್ ಇಂಜಿನ್ ದೈತ್ಯ ಗೂಗಲ್ ಹೇಳಿದೆ.
ಎಲ್ಲಾ ಕ್ರೋಮ್ ಒಎಸ್ ಆಧಾರಿತ ಮೀಟ್ ಸಾಧನಗಳಲ್ಲಿ ಜೂಮ್ ಇಂಟರ್ ಆಪ್ ಲಭ್ಯವಿರುತ್ತದೆ. ಜೂಮ್ ರೂಮ್‌ಗಳಲ್ಲಿನ ಗೂಗಲ್ ಮೀಟ್ನಲ್ಲಿ ಇಂಟರ್‌ಆಪ್ ಸಕ್ರಿಯಗೊಳ್ಳುತ್ತದೆ. ಇನ್ನು, ನೋಂದಾಯಿತ ಸಾಧನಗಳ ಇಂಟರ್ ಆಪ್ಗಳನ್ನು ನಿರ್ವಾಹಕರು ಸಕ್ರಿಯಗೊಳಿಸಬಹುದು.
ಹೈಬ್ರಿಡ್ ಕೆಲಸದ ಸ್ಥಳದಲ್ಲಿ ಪ್ಲಾಟ್‌ಫಾರ್ಮ್ ಇಂಟರ್‌ಆಪರೇಬಿಲಿಟಿ ಸವಾಲುಗಳಿಂದಾಗಿ ಸಂಸ್ಥೆಗಳು ತಮ್ಮ ಕಾನ್ಫರೆನ್ಸ್ ಕೊಠಡಿಗಳನ್ನು ಸಂಸ್ಥೆಗಳಲ್ಲಿನ ಸಹೋದ್ಯೋಗಿಗಳಿಗೆ ಸಂಪರ್ಕಿಸಲು ಹೆಣಗಾಡುತ್ತಿವೆ. ಇದನ್ನು ನಿವಾರಿಸಲು, ಗ್ರಾಹಕ ಸ್ನೇಹಿಯಾದ ತಂತ್ರಜ್ಞಾನವನ್ನು ನೀಡಲು ಕಂಪೆನಿಯು ಮುಂದಾಗಿದೆ.
ಪೊಲಿ(poly) ಮತ್ತು ಲಾಜಿಟೆಕ್ (Logitech) ಆಂಡ್ರಾಯಿಡ್ ಆಧಾರಿತ ಉಪಕರಣಗಳ ಕಾನ್ಫರೆನ್ಸಿಂಗ್ ಪಾಲುದಾರರು ಆಗಿರುತ್ತಾರೆ. ಈಗಾಗಲೇ ಆಂಡ್ರಾಯಿಡ್ ಆಧಾರಿತ Poly ಅಥವಾ Logitech ಸಾಧನಗಳನ್ನು ಹೊಂದಿರುವ ಗ್ರಾಹಕರು ಈ ಸಾಧನಗಳಿಗೆ ಮೀಟ್ ಪರವಾನಗಿಯನ್ನು ಖರೀದಿಸುವ ಮೂಲಕ Meet ಗೆ ಬದಲಾಯಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಐಒಎಸ್ 16 ಅಪ್ಡೇಟ್ ಬಯಸದ ಬಳಕೆದಾರರಿಗಾಗಿ ಆ್ಯಪಲ್ನಿಂದ ಹೊಸ ಪ್ಯಾಚ್ ಬಿಡುಗಡೆ