ETV Bharat / science-and-technology

ಗೂಗಲ್​ AI ಚಾಟ್​ಬಾಟ್​ Bard ಈಗ 9 ಭಾರತೀಯ ಭಾಷೆಗಳಲ್ಲಿ ಲಭ್ಯ.. ನೀವೂ ಒಮ್ಮೆ ಟ್ರೈ ಮಾಡಿ! - ಈಟಿವಿ ಭಾರತ ಕನ್ನಡ

ಗೂಗಲ್​ ತನ್ನ ಎಐ ಚಾಟ್​ಬಾಟ್​ ಬಾರ್ಡ್​ನ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಈಗ ಬಾರ್ಡ್​ ಒಂಬತ್ತು ಭಾರತೀಯ ಭಾಷೆಗಳಲ್ಲಿಯೂ ಲಭ್ಯವಿದೆ.

Google's AI chatbot 'Bard' now available in 9 Indian languages

author img

By

Published : Jul 13, 2023, 6:18 PM IST

ನವದೆಹಲಿ : ಗೂಗಲ್ ತನ್ನ AI experiment 'Bard' ನ ಹೊಸ ಅಪ್ಡೇಟ್​ ಒಂದನ್ನು ಬಿಡುಗಡೆ ಮಾಡಿದೆ. ಇದು ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳನ್ನು ಬೆಂಬಲಿಸಲಿದೆ. "ಇಂದಿನಿಂದ ಬಾರ್ಡ್ ಹಿಂದಿ, ತಮಿಳು, ತೆಲುಗು, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ ಮತ್ತು ಉರ್ದು ಸೇರಿದಂತೆ ಒಂಬತ್ತು ಭಾರತೀಯ ಭಾಷೆಗಳು ಸೇರಿದಂತೆ 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುತ್ತದೆ" ಎಂದು ಗೂಗಲ್ ಹೇಳಿದೆ. ಬ್ರೆಜಿಲ್ ಮತ್ತು ಯುರೋಪಿನಾದ್ಯಂತ ಹಲವಾರು ಪ್ರದೇಶಗಳಿಗೆ ಗೂಗಲ್ ತನ್ನ ಬಾರ್ಡ್​ ಲಭ್ಯತೆಯನ್ನು ವಿಸ್ತರಿಸಿದೆ.

ಬಾರ್ಡ್ ಈಗ 230 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಲಭ್ಯವಿದೆ. ಬಳಕೆದಾರರು ತಮಗೆ ಬೇಕಾದಂತೆ ಉತ್ತಮವಾಗಿ ಕಸ್ಟಮೈಸ್ ಮಾಡಲು, ತಮ್ಮ ಸೃಜನಶೀಲತೆಯನ್ನು ಹೆಚ್ಚಿಸಲು ಗೂಗಲ್ ಹೊಸ ವೈಶಿಷ್ಟ್ಯಗಳನ್ನು ಬಾರ್ಡ್​ ಗೆ ಸೇರಿಸುತ್ತಿದೆ. ಪ್ರಾಂಪ್ಟ್​ಗಳಲ್ಲಿ ಇಮೇಜ್ ಸೇರಿಸಲು, ಬಾರ್ಡ್​ನ ಪ್ರತಿಕ್ರಿಯೆಗಳನ್ನು ಜೋರಾಗಿ ಕೇಳುವಂತೆ ಮಾಡಲು ಮತ್ತು ಬಾರ್ಡ್​ನ ಪ್ರತಿಕ್ರಿಯೆ ಎಷ್ಟು ದೊಡ್ಡದಾಗಿರಬೇಕೆಂಬುದನ್ನು ಕಸ್ಟಮೈಸ್ ಮಾಡುವ ಹಾಗೆ ಹಲವಾರು ವೈಶಿಷ್ಟ್ಯಗಳನ್ನು ಕೂಡ ಸೇರಿಸಿದೆ.

"ಇಂದಿನಿಂದ ಬಳಕೆದಾರರು 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಬಾರ್ಡ್‌ನ ಪ್ರತಿಕ್ರಿಯೆಗಳನ್ನು ಕೇಳಬಹುದು. ಬಳಕೆದಾರರು ಪದದ ಸರಿಯಾದ ಉಚ್ಚಾರಣೆಯನ್ನು ಕೇಳಲು ಅಥವಾ ಕವಿತೆ ಅಥವಾ ಸ್ಕ್ರಿಪ್ಟ್ ಅನ್ನು ಕೇಳಲು ಬಯಸಿದರೆ ಇದು ವಿಶೇಷವಾಗಿ ಸಹಾಯಕವಾಗಿರುತ್ತದೆ. ಸರಳವಾಗಿ ಪ್ರಾಂಪ್ಟ್ ಅನ್ನು ನಮೂದಿಸಿ ಮತ್ತು ಬಾರ್ಡ್‌ನ ಧ್ವನಿಯನ್ನು ಕೇಳಲು ಧ್ವನಿ ಐಕಾನ್ ಆಯ್ಕೆಮಾಡಿ" ಎಂದು ಕಂಪನಿ ಹೇಳಿದೆ.

ಇದಲ್ಲದೇ ಬಳಕೆದಾರರು ಈಗ ಬಾರ್ಡ್‌ನ ಪ್ರತಿಕ್ರಿಯೆಗಳ ಟೋನ್ ಮತ್ತು ಶೈಲಿಯನ್ನು ಐದು ವಿಭಿನ್ನ ಆಯ್ಕೆಗಳಿಗೆ ಬದಲಾಯಿಸಬಹುದು. ಸರಳ, ಉದ್ದ, ಚಿಕ್ಕ, ವೃತ್ತಿಪರ ಅಥವಾ ಸಾಂದರ್ಭಿಕ ಹೀಗೆ 5 ಆಯ್ಕೆಗಳು ಲಭ್ಯವಿವೆ. ಈ ವೈಶಿಷ್ಟ್ಯವು ಇಂಗ್ಲಿಷ್‌ನಲ್ಲಿ ಲೈವ್ ಆಗಿದೆ ಮತ್ತು ಶೀಘ್ರದಲ್ಲೇ ಹೊಸ ಭಾಷೆಗಳಿಗೆ ಬರಲಿದೆ. ಅಲ್ಲದೇ ಬಳಕೆದಾರರು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯಕವಾಗುವಂತೆ 40 ಭಾಷೆಗಳಲ್ಲಿ ಬಾರ್ಡ್‌ನೊಂದಿಗಿನ ಸಂಭಾಷಣೆಗಳನ್ನು ಪಿನ್ ಮಾಡಲು ಮತ್ತು ರಿನೇಮ್ ಮಾಡಲು ಕಂಪನಿಯು ಹೊಸ ಆಯ್ಕೆಗಳನ್ನು ಸೇರಿಸುತ್ತಿದೆ.

ಕೆಲ ವಿಶೇಷತೆಗಳು ಹೀಗಿವೆ: ಬಳಕೆದಾರರು ಸಂವಾದವೊಂದನ್ನು ಪ್ರಾರಂಭಿಸಿದಾಗ, ಸೈಡ್‌ಬಾರ್‌ನಲ್ಲಿ ಇತ್ತೀಚಿನ ಸಂಭಾಷಣೆಗಳನ್ನು ಪಡೆದುಕೊಳ್ಳುವ, ಪಿನ್ ಮಾಡುವ, ಮರುಹೆಸರಿಸುವ ಆಯ್ಕೆಗಳು ಅವರಿಗೆ ಕಾಣಿಸುತ್ತವೆ. ಇದಲ್ಲದೆ, ಗೂಗಲ್ ತನ್ನ ಲೆನ್ಸ್‌ನ ಸಾಮರ್ಥ್ಯಗಳನ್ನು ಬಾರ್ಡ್‌ಗೆ ತರುತ್ತಿದೆ. ಬಳಕೆದಾರರು ಈಗ ಪ್ರಾಂಪ್ಟ್‌ಗಳೊಂದಿಗೆ ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಬಳಕೆದಾರರಿಗೆ ಸಹಾಯ ಮಾಡಲು ಬಾರ್ಡ್ ಫೋಟೋವನ್ನು ವಿಶ್ಲೇಷಿಸಲಿದೆ.

ಏನಿದು ಗೂಗಲ್​ ಬಾರ್ಡ್​​: Google Bard ಎಂಬುದು AI-ಚಾಲಿತ ಚಾಟ್‌ಬಾಟ್ ಸಾಧನವಾಗಿದ್ದು, ನೈಸರ್ಗಿಕ ಭಾಷಾ ಸಂಸ್ಕರಣೆ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ಮಾನವ ಸಂಭಾಷಣೆಗಳನ್ನು ಅನುಕರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಗೂಗಲ್​​ ಸರ್ಚ್ ಮಾಡುವುದರ ಜೊತೆಗೆ, ಬಳಕೆದಾರರ ಪ್ರಶ್ನೆಗಳಿಗೆ ವಾಸ್ತವಿಕ, ನೈಸರ್ಗಿಕ ಭಾಷೆಯ ಪ್ರತಿಕ್ರಿಯೆಗಳನ್ನು ಒದಗಿಸಲು ಬಾರ್ಡ್ ಅನ್ನು ವೆಬ್‌ಸೈಟ್‌ಗಳು, ಸಂದೇಶ ಕಳುಹಿಸುವ ವೇದಿಕೆಗಳು ಅಥವಾ ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಬಹುದು.

ಇದನ್ನೂ ಓದಿ : ಕೊನೆಗೂ ಸಿಕ್ತು 3 ಬಿಲಿಯನ್ ಡಾಲರ್ IMF ಸಾಲ; ನಿಟ್ಟುಸಿರು ಬಿಟ್ಟ ಪಾಕಿಸ್ತಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.