ETV Bharat / science-and-technology

ಫೋನ್​​ ಚಾರ್ಜಿಂಗ್ ಹಾಕಿಟ್ಟು, ಪಕ್ಕ ಮಲಗುವುದು ಅಪಾಯಕಾರಿ: ಆ್ಯಪಲ್ ಎಚ್ಚರಿಕೆ - ಈಟಿವಿ ಭಾರತ ಕನ್ನಡ

ಫೋನ್​ ಚಾರ್ಜಿಂಗ್ ಇಟ್ಟು ಅದರ ಪಕ್ಕದಲ್ಲಿಯೇ ಮಲಗುವುದು ಅಪಾಯಕಾರಿ ಎಂದು ಆ್ಯಪಲ್ ಕಂಪನಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

Do not sleep next to your iPhones while charging

author img

By ETV Bharat Karnataka Team

Published : Aug 23, 2023, 5:05 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಮಲಗುವ ಸಮಯದಲ್ಲಿ ತಮ್ಮ ಐಫೋನ್ ಚಾರ್ಜ್​ ಹಾಕಿಟ್ಟು ಮಲಗುವವರಿಗೆ ಆ್ಯಪಲ್ ಮಹತ್ವದ ಎಚ್ಚರಿಕೆ ನೀಡಿದೆ. ಚಾರ್ಜಿಂಗ್​ ಹಾಕಿಟ್ಟ ಫೋನ್​ ಪಕ್ಕಕ್ಕೆ ಮಲಗಬೇಡಿ ಎಂದು ಅದು ಬಳಕೆದಾರರಿಗೆ ಸೂಚನೆ ನೀಡಿದೆ. ಫೋನ್ ಚಾರ್ಜಿಂಗ್​ ಇಟ್ಟು ಅದರ ಪಕ್ಕಕ್ಕೆ ಮಲಗುವುದರಿಂದ ಅನಾರೋಗ್ಯ ಕಾಡಬಹುದು ಮತ್ತು ಗಾಯಗಳೂ ಉಂಟಾಗಬಹುದು ಎಂದು ಕಂಪನಿ ಹೇಳಿದೆ.

ತಮ್ಮ ತ್ವಚೆಯು ಮೊಬೈಲ್ ಸಾಧನ ಅಥವಾ ಚಾರ್ಜರ್​ನೊಂದಿಗೆ ನೇರ ಸಂಪರ್ಕಕ್ಕೆ ಬರದಿರುವಂತೆ ಸಾಮಾನ್ಯ ಜ್ಞಾನ ಬಳಸುವಂತೆ ಕಂಪನಿ ಗ್ರಾಹಕರನ್ನು ಕೇಳಿದೆ. "ಸಾಧನ, ಪವರ್ ಅಡಾಪ್ಟರ್ ಅಥವಾ ವೈರ್​ಲೆಸ್​​ ಚಾರ್ಜರ್​ ಮೇಲೆ ಮಲಗಬೇಡಿ ಅಥವಾ ವಿದ್ಯುತ್ ಮೂಲಕ್ಕೆ ಸಂಪರ್ಕಿಸಿದಾಗ ಅವುಗಳನ್ನು ಕಂಬಳಿ, ದಿಂಬು ಅಥವಾ ನಿಮ್ಮ ದೇಹದ ಕೆಳಗೆ ಇಡಬೇಡಿ. ನಿಮ್ಮ ಐಫೋನ್, ಪವರ್ ಅಡಾಪ್ಟರ್ ಮತ್ತು ಯಾವುದೇ ವೈರ್​ಲೆಸ್​ ಚಾರ್ಜರ್ ಅನ್ನು ಬಳಕೆಯಲ್ಲಿರುವಾಗ ಅಥವಾ ಚಾರ್ಜ್ ಮಾಡುವಾಗ ಚೆನ್ನಾಗಿ ಗಾಳಿಯಾಡುವ ಪ್ರದೇಶದಲ್ಲಿ ಇರಿಸಿ" ಎಂದು ಕಂಪನಿ ಸಲಹೆ ನೀಡಿದೆ.

ದೇಹವು ಶಾಖದ ಪರಿಣಾಮವನ್ನು ಗ್ರಹಿಸುವ ಸಾಮರ್ಥ್ಯವಿಲ್ಲದ ವ್ಯಕ್ತಿಗಳಾಗಿದ್ದರೆ ಅಂಥವರು ವಿಶೇಷ ಕಾಳಜಿ ವಹಿಸುವಂತೆ ಸಲಹೆಯಲ್ಲಿ ಬಳಕೆದಾರರನ್ನು ಕೇಳಲಾಗಿದೆ. ಇದಲ್ಲದೆ, ಐಫೋನ್​ಗಳನ್ನು ಚಾರ್ಜ್ ಮಾಡಲು ಸರಿಯಾದ ಪ್ರಮಾಣದ ವೋಲ್ಟೇಜ್ ನೀಡದ ಅಸುರಕ್ಷಿತ ಥರ್ಡ್-ಪಾರ್ಟಿ ಚಾರ್ಜರ್​ಗಳನ್ನು ಬಳಸಬೇಡಿ ಎಂದು ಕಂಪನಿಯು ತನ್ನ ಬಳಕೆದಾರರಿಗೆ ಮನವಿ ಮಾಡಿದೆ. ಕಟ್​ ಆದ, ಹರಿದ ಚಾರ್ಜಿಂಗ್​ ವೈರ್​ ಬಳಸದಂತೆಯೂ ಸಲಹೆ ನೀಡಲಾಗಿದೆ.

ಇದಲ್ಲದೆ ಸಿಂಕ್, ಬಾತ್ ಟಬ್ ಅಥವಾ ಶವರ್ ಸ್ಟಾಲ್ ನಂತಹ ಒದ್ದೆಯಾದ ಸ್ಥಳಗಳಲ್ಲಿ ಪವರ್ ಅಡಾಪ್ಟರ್ ಅನ್ನು ಬಳಸದಂತೆ ಮತ್ತು ಒದ್ದೆಯಾದ ಕೈಗಳಿಂದ ಪವರ್ ಅಡಾಪ್ಟರ್ ಅನ್ನು ಮುಟ್ಟದಂತೆ ಅಥವಾ ಸಂಪರ್ಕ ಕಡಿತಗೊಳಿಸದಂತೆ ಆ್ಯಪಲ್ ಹೇಳಿದೆ. ಕಾರಣಗಳು ಹೀಗಿವೆ..

ಅತಿಯಾಗಿ ಬಿಸಿಯಾಗುವುದು: ಫೋನ್ ಚಾರ್ಜ್ ಆಗುತ್ತಿರುವಾಗ ನೀವು ಅದನ್ನು ಬಳಸುತ್ತಿದ್ದರೆ ಫೋನ್​ ಅತಿಯಾಗಿ ಬಿಸಿಯಾಗಬಹುದು. ಬ್ಯಾಟರಿಯಲ್ಲಿರುವ ಹಾನಿಕಾರಕ ರಾಸಾಯನಿಕಗಳು ಸೋರಿಕೆಯಾಗಬಹುದು ಹಾಗೂ ಇದೇ ಕಾರಣದಿಂದ ಬ್ಯಾಟರಿ ಸ್ಫೋಟವಾಗಬಹುದು ಅಥವಾ ಫೋನ್ ಶಾಶ್ವತವಾಗಿ ಸ್ವಿಚ್ ಆಫ್ ಆಗಬಹುದು.

ಬ್ಯಾಟರಿ ಹಿಗ್ಗಬಹುದು: ಫೋನ್ ಚಾರ್ಜ್ ಆಗುತ್ತಿರುವಾಗ ಅದನ್ನು ಬಳಸುವುದರಿಂದ ಬ್ಯಾಟರಿ ಗಾತ್ರದಲ್ಲಿ ವಿಸ್ತರಿಸಲು ಕಾರಣವಾಗಬಹುದು. ಇದು ಅಂತಿಮವಾಗಿ ಬ್ಯಾಟರಿ ಸ್ಫೋಟಕ್ಕೆ ಕಾರಣವಾಗುತ್ತದೆ. ನಿಮ್ಮ ಫೋನ್​​ ಹಿಂಭಾಗದಲ್ಲಿ ಸ್ವಲ್ಪ ಉಬ್ಬು ಕಂಡು ಬಂದರೆ ಅದರ ಬ್ಯಾಟರಿ ಈಗಾಗಲೇ ಉಬ್ಬಲು ಪ್ರಾರಂಭಿಸಿರುವ ಸಾಧ್ಯತೆಗಳಿವೆ.

ಚಾರ್ಜಿಂಗ್ ಸಾಮರ್ಥ್ಯ ಕಡಿಮೆಯಾಗಬಹುದು: ನಿಮ್ಮ ಫೋನ್​ನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ 18 ಗಂಟೆಗಳ ಕಾಲ ಉಳಿಯಬಹುದಾದರೂ, ಚಾರ್ಜ್ ಮಾಡುವಾಗ ಅದನ್ನು ಬಳಸುವುದರಿಂದ ಬ್ಯಾಟರಿ ಹಾಳಾಗುತ್ತದೆ.

ಚಾರ್ಜರ್ ದುರ್ಬಲ : ಫೋನ್ ಚಾರ್ಜ್ ಆಗುತ್ತಿರುವಾಗ ನೀವು ಅದನ್ನು ನಿರಂತರವಾಗಿ ಬಳಸಿದರೆ ಚಾರ್ಜರ್ ಹಾಳಾಗುವ ಸಾಧ್ಯತೆಗಳಿರುತ್ತವೆ.

ಇದನ್ನೂ ಓದಿ : ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದತ್ತ ಪಯಣದ ಕಾಲಾನುಕ್ರಮ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.