ETV Bharat / science-and-technology

Covid-19 deaths: ಕೋವಿಡ್​ ಲಸಿಕೆಗಳ ಅಸಮಾನ ಹಂಚಿಕೆಯಿಂದ ಶೇ 50ರಷ್ಟು ಸಾವು- ಅಧ್ಯಯನ ವರದಿ - ವ್ಯಾಕ್ಸಿನ್ ಸಿಗುವುದು ವಿಳಂಬ

ಕೋವಿಡ್-19 ಅಲೆ ಉತ್ತುಂಗದಲ್ಲಿರುವಾಗ ಬಡರಾಷ್ಟ್ರಗಳಿಗೂ ಮುಂದುವರಿದ ರಾಷ್ಟ್ರಗಳ ಮಾದರಿಯಲ್ಲೇ ಸಾಕಷ್ಟು ಲಸಿಕೆಗಳು ಸಿಕ್ಕಿದ್ದರೆ ಶೇ 50ರಷ್ಟು ಸಾವುಗಳನ್ನು ತಪ್ಪಿಸಬಹುದಿತ್ತೆಂದು ವಿಜ್ಞಾನಿಗಳು ಹೇಳಿದ್ದಾರೆ.

Vaccine inequity behind 50% of global Covid deaths: Study

author img

By

Published : Jun 14, 2023, 4:47 PM IST

ನ್ಯೂಯಾರ್ಕ್ (ಅಮೆರಿಕ) : ಮತ್ತಷ್ಟು ಸುಲಭವಾಗಿ ಮತ್ತು ಇನ್ನಷ್ಟು ಹೆಚ್ಚಿನ ಜನರಿಗೆ ಲಸಿಕೆಗಳು ಲಭ್ಯವಾಗಿದ್ದಲ್ಲಿ, 20 ಬಡ ರಾಷ್ಟ್ರಗಳಲ್ಲಿ ಕೋವಿಡ್-19ನಿಂದ ಸಂಭವಿಸಿದ ಮರಣ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಬಹುದಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇತ್ತೀಚೆಗೆ ನಡೆಸಲಾದ ಅಧ್ಯಯನವೊಂದರಲ್ಲಿ ವಿಜ್ಞಾನಿಗಳು ಈ ವಿಷಯವನ್ನು ಕಂಡುಕೊಂಡಿದ್ದಾರೆ. ಅಮೆರಿಕದ ಜನತೆಗೆ ಸಿಕ್ಕಷ್ಟು ಪ್ರಮಾಣದ ಲಸಿಕೆಗಳು ಕೀನ್ಯಾ, ಅಫ್ಘಾನಿಸ್ತಾನ ಮತ್ತು ಬೊಲಿವಿಯಾ ಸೇರಿದಂತೆ 20 ಬಡ ರಾಷ್ಟ್ರಗಳ ಜನರಿಗೆ ಸಿಕ್ಕಿದ್ದರೆ ಅಂದಾಜು 5,18,000 ಸಾವುಗಳನ್ನು ತಪ್ಪಿಸಬಹುದಾಗಿತ್ತು ಎಂದು ನೇಚರ್ ಕಮ್ಯುನಿಕೇಷನ್ಸ್ (Nature Communications) ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.

ವ್ಯಾಕ್ಸಿನ್ ಸಿಗುವುದು ವಿಳಂಬವಾದ ಕಾರಣದಿಂದ ಹಲವಾರು ದೇಶಗಳು ಔಷಧರಹಿತವಾಗಿ ರೋಗ ನಿರ್ಮೂಲನೆ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಶಾಲೆ, ರೆಸ್ಟೊರೆಂಟ್​ ಮತ್ತು ವ್ಯಾಪಾರಗಳನ್ನು ದೀರ್ಘಾವಧಿಯವರೆಗೆ ಬಂದ್ ಮಾಡುವುದು ಈ ಕ್ರಮಗಳಲ್ಲಿ ಸೇರಿವೆ. ಮುಂದುವರಿದ ದೇಶಗಳಿಗಿಂತ ಬಡ ದೇಶಗಳಲ್ಲಿ ಈ ಲಾಕ್​ಡೌನ್ ಅವಧಿ ಹೆಚ್ಚಾಗಿತ್ತು ಎಂದು ಅಮೆರಿಕದ ನಾರ್ತ್ ಈಸ್ಟರ್ನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲೆಸ್ಸಾಂಡ್ರೊ ವೆಸ್ಪಿಗ್ನಾನಿ ಹೇಳಿದರು.

ಲಸಿಕೆಯ ಅಸಮಾನ ಹಂಚಿಕೆಯಿಂದ ಸಾವಿರಾರು ಲಕ್ಷ ಜೀವಗಳು ಕಳೆದುಹೋದವು ಎಂಬುದು ಬಹಳ ಕರುಣಾಜನಕ ಎಂದು ವೆಸ್ಪಿಗ್ನಾನಿ ಹೇಳಿದರು. ಅಧ್ಯಯನದಲ್ಲಿ, ವಿಜ್ಞಾನಿಗಳ ತಂಡವು ಕಂಪ್ಯೂಟೇಶನಲ್ ಎಪಿಡೆಮಿಕ್ ಮಾದರಿಯನ್ನು ಬಳಸಿಕೊಂಡು, ಯುಎಸ್ ಮತ್ತು ಇತರ ಹೆಚ್ಚಿನ ಆದಾಯದ ದೇಶಗಳು ಕೋವಿಡ್​-19 ಲಸಿಕೆಯನ್ನು ಪಡೆದ ಸಮಯದಲ್ಲಿಯೇ 20 ಬಡರಾಷ್ಟ್ರಗಳಿಗೆ ಲಸಿಕೆ ಸಿಕ್ಕಿದ್ದಲ್ಲಿ ಈ ರಾಷ್ಟ್ರಗಳಲ್ಲಿ ಎಷ್ಟು ಸಾವುಗಳನ್ನು ತಪ್ಪಿಸಬಹುದಿತ್ತು ಎಂಬುದನ್ನು ಅಂದಾಜಿಸಿದೆ.

ಅಗತ್ಯವಿರುವಷ್ಟು ಲಸಿಕೆಗಳು ಲಭ್ಯವಾಗಿದ್ದರೆ ವಿಶ್ಲೇಷಿಸಿದ ದೇಶಗಳಲ್ಲಿ ಸಂಭವಿಸಿದ ಶೇಕಡಾ 50 ಕ್ಕಿಂತ ಹೆಚ್ಚು ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಅರ್ಧಕ್ಕಿಂತ ಹೆಚ್ಚು ದೇಶಗಳಲ್ಲಿ ಸಾವಿನ ಶೇಕಡಾವಾರು ಶೇಕಡಾವಾರು ಪ್ರಮಾಣ 70 ಕ್ಕಿಂತ ಹೆಚ್ಚಿದೆ. ಅಫ್ಘಾನಿಸ್ತಾನ ಮತ್ತು ಉಗಾಂಡಾದಲ್ಲಿ ಇದು ಶೇಕಡಾ 90 ಕ್ಕಿಂತ ಹೆಚ್ಚು ಎಂದು ವರದಿ ಹೇಳಿದೆ.

ಅಧ್ಯಯನದ ಮತ್ತೊಂದು ಹಂತದಲ್ಲಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಅಲ್ಲದೇ ಹೋದರೂ ತ್ವರಿತವಾಗಿ ಲಸಿಕೆಗಳು ಲಭ್ಯವಾಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಕೂಡ ಅಧ್ಯಯನ ಮಾಡಲಾಯಿತು. ಲಸಿಕೆಯ ಡೋಸ್ ಹೆಚ್ಚಾಗಿ ಸಿಗದಿದ್ದರೂ ಬೇಗನೆ ಲಸಿಕೆ ಸಿಕ್ಕಿದ್ದರೆ ಶೇ 6 ರಿಂದ ಶೇ 50ರಷ್ಟು ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಕಂಡು ಬಂದಿದೆ.

ಆರೋಗ್ಯ ರಕ್ಷಣಾ ಏಜೆನ್ಸಿಗಳ ಪೈಕಿ ಒಂದಾದ ಕೋವಿಡ್-19 ಗ್ಲೋಬಲ್ ವ್ಯಾಕ್ಸಿನ್ ಆ್ಯಕ್ಸೆಸ್ (Global Vaccine Access -COVAX) ಯೋಜನೆಯು ಈ ಸಮಸ್ಯೆಯನ್ನು ಮೊದಲೇ ಗ್ರಹಿಸಿತ್ತು ಹಾಗೂ ಇದರ ಪರಿಹಾರಕ್ಕಾಗಿಯೂ ಪ್ರಯತ್ನಿಸಿತ್ತು. ಆದರೆ ಅದು ವಿಫಲವಾಯಿತು ಎಂದು ವಿಜ್ಞಾನಿಗಳ ತಂಡ ಹೇಳಿದೆ. ಇದರ ಜೊತೆಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಕೊರತೆ, ಸೀಮಿತ ಹಣಕಾಸು ಮತ್ತು ಲಸಿಕೆ ವಿತರಣೆಗೆ ಮೂಲಸೌಕರ್ಯಗಳ ಕೊರತೆಯು ಕಡಿಮೆ ಮತ್ತು ಕಡಿಮೆ ಮಧ್ಯಮ ಆದಾಯದ ದೇಶಗಳಲ್ಲಿ ವೇಗವರ್ಧಿತ ಲಸಿಕೆ ವಿತರಣೆಗೆ ತಡೆಗೋಡೆಯಾಗಿ ಪರಿಣಮಿಸಿತು.

ಸಕಾಲಿಕವಾಗಿ ಲಸಿಕೆ ಡೋಸ್‌ಗಳು ಲಭ್ಯವಾಗುವಂತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಮತ್ತೊಂದು ಸಾಂಕ್ರಾಮಿಕ ಎದುರಾದಲ್ಲಿ ಲಾಜಿಸ್ಟಿಕ್ ಮತ್ತು ಉತ್ಪಾದನಾ ಸಾಮರ್ಥ್ಯದ ವಿತರಣೆಯನ್ನು ಸರಳಗೊಳಿಸುವುದು ಅಗತ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ : AI technology:ಎಲ್ಲ 800 ಕೋಟಿ ಜನ AI ಬಳಸಬೇಕೆಂಬುದು ನನ್ನಾಸೆ: ಸತ್ಯಾ ನಾಡೆಲ್ಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.