ಶ್ರೀಹರಿಕೋಟಾ: ಪಿಎಸ್ಎಲ್ವಿ, ಜಿಎಸ್ಎಲ್ವಿ ವಾಹಕದ ಮೂಲಕ ಭಾರಿ ಗಾತ್ರದ ಉಪಗ್ರಹಗಳನ್ನು ಕಕ್ಷೆ ಸೇರಿಸಿರುವ ಭಾರತದ ಹೆಮ್ಮೆಯ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಹೊಸ ಶಕೆಗೆ ನಾಂದಿ ಹಾಡಲಿದೆ. ಇದೇ ಮೊದಲ ಬಾರಿಗೆ ಸಣ್ಣ ಗಾತ್ರದ ಎಸ್ಎಸ್ಎಲ್ವಿ(ಸ್ಮಾಲ್ ಸ್ಯಾಟಲೈಟ್ ವೆಹಿಕಲ್ ಲಾಂಚ್) ವಾಹಕದ ಮೂಲಕ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಬೆಳಗ್ಗೆ 9.18 ಗಂಟೆಗೆ ರಾಕೆಟ್ ನಭಕ್ಕೆ ಜಿಗಿಯಲಿದೆ.
-
SSLV-D1/EOS-02 Mission: the launch is scheduled at 9:18 am (IST). Watch LIVE from 08:30 am here: https://t.co/V1Bk6GZoCF pic.twitter.com/ZTYo8NFXac
— ISRO (@isro) August 7, 2022 " class="align-text-top noRightClick twitterSection" data="
">SSLV-D1/EOS-02 Mission: the launch is scheduled at 9:18 am (IST). Watch LIVE from 08:30 am here: https://t.co/V1Bk6GZoCF pic.twitter.com/ZTYo8NFXac
— ISRO (@isro) August 7, 2022SSLV-D1/EOS-02 Mission: the launch is scheduled at 9:18 am (IST). Watch LIVE from 08:30 am here: https://t.co/V1Bk6GZoCF pic.twitter.com/ZTYo8NFXac
— ISRO (@isro) August 7, 2022
ಚೆನ್ನೈನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಉಡಾವಣೆಯಾಗಲಿದ್ದು, ಭಾನುವಾರ ನಸುಕಿನ 2.26 ನಿಮಿಷದಿಂದ ರಾಕೆಟ್ ಉಡಾವಣೆಯ ಕಾರ್ಯ ಶುರುವಾಗಿದೆ. ಇದರಲ್ಲಿ 2 ಸಣ್ಣ ಗಾತ್ರದ ಉಪಗ್ರಹಗಳಿದ್ದು, ಒಂದನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ ಎಂದು ಇಸ್ರೋ ತಿಳಿಸಿದೆ.
ವಿಶೇಷತೆಯೇನು?: ಇದವರೆಗೂ ಇಸ್ರೋ ಬೃಹತ್ ಪ್ರಮಾಣದ ಸ್ವದೇಶಿ ನಿರ್ಮಿತ ಮತ್ತು ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿತ್ತು. ಇಂದು ಉಡಾಯಿಸಲಾಗುವ ಎಸ್ಎಸ್ಎಲ್ವಿ ಮೂಲಕ ಚಿಕ್ಕ ರಾಕೆಟ್ಗಳ ಜಗತ್ತಿಗೂ ತನ್ನನ್ನು ತೆರೆದುಕೊಳ್ಳಲಿದೆ. ಇವುಗಳ ಪರಿಭ್ರಮಣ ಅವಧಿ ಕಡಿಮೆ. ಭೂಮಿಯಿಂದ ಕಡಿಮೆ ಎತ್ತರದ ಕಕ್ಷೆಗಳಲ್ಲಿ ಇವು ಕಾರ್ಯಾಚರಣೆ ಮಾಡುತ್ತವೆ. ಇವುಗಳನ್ನು ನಭಕ್ಕೆ ಸೇರಿಸುವ ಮೂಲಕ ಬಾಹ್ಯಾಕಾಶ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ.
ವಿದ್ಯಾರ್ಥಿಗಳಿಂದ ನಿರ್ಮಾಣ: ಇಸ್ರೋ ಇಂದು ಉಡಾಯಿಸಲಿರುವ 2 ಚಿಕ್ಕ ಉಪಗ್ರಹಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಇದು 8 ಕೆಜಿ ತೂಕವಿದ್ದು, ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ 75 ಶಾಲೆಗಳ 750 ವಿದ್ಯಾರ್ಥಿಗಳು ಇದನ್ನು ರೂಪಿಸಿದ್ದಾರೆ. ಇದಕ್ಕೆ ಆಜಾದಿ ಸ್ಯಾಟ್ ಎಂದು ಹೆಸರಿಸಲಾಗಿದೆ. ಇಸ್ರೋ ನಿರ್ಮಿತ ಭೂ ಪರಿವೀಕ್ಷಣಾ ಉಪಗ್ರಹವೂ ನಭಕ್ಕೆ ಹಾರಲಿದೆ.
ಇದಲ್ಲದೇ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಕಾರಣ ಈ ವಾಹಕದಲ್ಲಿ ತ್ರಿವರ್ಣ ಧ್ವಜವನ್ನೂ ನಭಕ್ಕೆ ಕಳುಹಿಸಲಾಗುತ್ತಿದೆ. ಉದ್ದೇಶಿತ ರಾಕೆಟ್ ಅನ್ನು 13 ನಿಮಿಷಗಳಲ್ಲಿ ಕಕ್ಷೆಗೆ ಸೇರಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹೈಟೆಕ್ ಯುದ್ಧಗಳಿಗೆ ಭಾರತ ಸನ್ನದ್ಧ: ಹೊಸ ತಂತ್ರಗಳಿಗೆ ಸೇನೆ ಮುನ್ನುಡಿ