ETV Bharat / science-and-technology

ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ ChatGPT! - ಈಟಿವಿ ಭಾರತ ಕನ್ನಡ

ವಿದ್ಯಾರ್ಥಿಗಳಿಗೆ ಈ ಹಿಂದೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳ ಪಟ್ಟಿಯಲ್ಲಿ ಕಾನೂನು ಪ್ರಾಧ್ಯಾಪಕರೊಬ್ಬರ ಹೆಸರನ್ನು ಸೇರಿಸಿ ಚಾಟ್​ಜಿಪಿಟಿ ಪ್ರಮಾದವೆಸಗಿದೆ ಎನ್ನಲಾಗಿದೆ. ವಾಸ್ತವದಲ್ಲಿ ಆ ಪ್ರಾಧ್ಯಾಪಕರು ಅಂಥ ಯಾವುದೇ ಘಟನೆಯಲ್ಲಿ ಭಾಗಿಯಾಗಿರಲಿಲ್ಲವಾದರೂ, ಚಾಟ್​ಜಿಪಿಟಿ ತಪ್ಪಾಗಿ ಅವರ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದೆ ಎಂದು ವರದಿಯಾಗಿದೆ.

ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ ChatGPT!

author img

By

Published : Apr 6, 2023, 3:57 PM IST

ಸ್ಯಾನ್ ಫ್ರಾನ್ಸಿಸ್ಕೋ: ಈ ಹಿಂದೆ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮೆರಿಕದ ಕಾನೂನು ವಿದ್ವಾಂಸರ ಪಟ್ಟಿಯಲ್ಲಿ, ಅಂಥ ಯಾವುದೇ ಕೃತ್ಯ ಎಸಗದ ಅಮಾಯಕ ಹಾಗೂ ಗೌರವಾನ್ವಿತ ಸ್ಥಾನ ಪಡೆದ ಕಾನೂನು ಪ್ರಾಧ್ಯಾಪಕರೊಬ್ಬರ ಹೆಸರನ್ನು AI ಚಾಟ್‌ಬಾಟ್ ಚಾಟ್‌ಜಿಪಿಟಿ ಸೇರಿಸಿದ ವಿಲಕ್ಷಣ ಘಟನೆ ಜರುಗಿದೆ. ಸಂಶೋಧನಾ ಅಧ್ಯಯನವೊಂದರ ಭಾಗವಾಗಿ ನಡೆದ ಪ್ರಕ್ರಿಯೆಯಲ್ಲಿ ಇಂಥದೊಂದು ಘಟನೆ ಜರುಗಿರುವುದು ಕಂಡು ಬಂದಿದೆ. ಆ ಪ್ರಾಧ್ಯಾಪಕರ ಹೆಸರನ್ನು ಚಾಟ್​ಜಿಪಿಟಿ ಪಟ್ಟಿಯಲ್ಲಿ ತಪ್ಪಾಗಿ ಸೇರಿಸಿದೆ ಎನ್ನಲಾಗಿದೆ. ಜಾರ್ಜ್ ವಾಷಿಂಗ್ಟನ್​ ಯುನಿವರ್ಸಿಟಿಯ ಪಬ್ಲಿಕ್ ಇಂಟೆರೆಸ್ಟ್​ ಲಾ ವಿಭಾಗದ ಮುಖ್ಯಸ್ಥರಾಗಿರುವ ಜೋನಾಥನ್ ಟರ್ಲಿ, ಲೈಂಗಿಕ ದೌರ್ಜನ್ಯ ಎಸಗಿರುವವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಆಗಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ನಾನು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಚಾಟ್‌ಜಿಪಿಟಿ ಇತ್ತೀಚೆಗೆ ಸುಳ್ಳು ಕಥೆಯನ್ನು ಬಿಡುಗಡೆ ಮಾಡಿದೆ ಎಂದು ಟರ್ಲಿ ಟ್ವೀಟ್‌ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕದ ದಿನಪತ್ರಿಕೆಯೊಂದರಲ್ಲಿ ತಮ್ಮ ಅಭಿಪ್ರಾಯ ಬರೆದಿರುವ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಚಾಟ್​ಜಿಪಿಟಿಯ ಬಗ್ಗೆ ತಾವು ನಡೆಸಿರುವ ಸಂಶೋಧನೆಯ ಬಗ್ಗೆ ಮಿತ್ರರಾಗಿರುವ ಕಾನೂನು ಪ್ರಾಧ್ಯಾಪಕರೊಬ್ಬರು ನನಗೆ ಇಮೇಲ್ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಅಲಾಸ್ಕಾಗೆ ಟ್ರಿಪ್​ಗೆ ತೆರಳಿದ ಸಮಯದಲ್ಲಿ ಕಾನೂನು ವಿದ್ಯಾರ್ಥಿನಿಯರನ್ನು ನಾನು ಅಪ್ಪಿಕೊಂಡಿರುವ ಬಗ್ಗೆ 2018ರಲ್ಲಿ ವಾಷಿಂಗ್ಟನ್​ ಪೋಸ್ಟ್​ನಲ್ಲಿ ವರದಿ ಪ್ರಕಟವಾಗಿದೆ ಎಂದು ಚಾಟ್​ಜಿಪಿಟಿ ಹೇಳಿದೆ.

ಆದರೆ, ವಾಸ್ತವ ಏನೆಂದರೆ ನಾನು ಯಾವತ್ತೂ ಅಂಥದೊಂದು ಟ್ರಿಪ್​ಗೆ ಹೋಗಿಲ್ಲ ಮತ್ತು ಅಂಥ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಎಂದು ಟರ್ಲಿ ಹೇಳಿದ್ದಾರೆ. ಇಂಥದೊಂದು ಸುಳ್ಳು ಆರೋಪವನ್ನು ಚಾಟ್​ಜಿಪಿಟಿ ಮಾಡಿದ್ದು ಮಾತ್ರವಲ್ಲದೇ, ಇಂಥ ಆರೋಪ ಮಾಡಲು ಅದು ಎಂದೂ ಪ್ರಕಟವೇ ಆಗಿರದ ಪತ್ರಿಕಾ ಸುದ್ದಿಯೊಂದನ್ನು ಉಲ್ಲೇಖಿಸಿದ್ದು ಮತ್ತೂ ಆಘಾತಕಾರಿ ಎಂದು ಟರ್ಲಿ ತಿಳಿಸಿದ್ದಾರೆ.

ಏತನ್ಮಧ್ಯೆ, ಆಸ್ಟ್ರೇಲಿಯಾದ ಹೆಪ್‌ಬರ್ನ್ ಶೈರ್‌ನ ಪ್ರಾದೇಶಿಕ ಮೇಯರ್ ಬ್ರಿಯಾನ್ ಹುಡ್, ಮೈಕ್ರೋಸಾಫ್ಟ್ ಮಾಲೀಕತ್ವದ ಕಂಪನಿಯು ತನ್ನ ಬಗ್ಗೆ ತಪ್ಪು ಮಾಹಿತಿಯನ್ನು ಸರಿಪಡಿಸದಿದ್ದರೆ OpenAI ವಿರುದ್ಧ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ (RBA) ನಲ್ಲಿ ಹಿಂದಿನ ಮತ್ತು ನಿಜವಾದ ಲಂಚ ಹಗರಣದಲ್ಲಿ ಭಾಗಿಯಾಗಿರುವ ಹುಡ್ ಅವರನ್ನು ಶಿಕ್ಷೆಗೊಳಗಾದ ಅಪರಾಧಿ ಎಂದು ChatGPT ವರದಿ ಮಾಡಿದೆ. ಟರ್ಲಿ ಪ್ರಕಾರ, AI ಮತ್ತು ಅಲ್ಗಾರಿದಮ್‌ಗಳ ಬಳಕೆಯು ಸೆನ್ಸಾರ್‌ಶಿಪ್‌ಗೆ ವಿಜ್ಞಾನ ಮತ್ತು ವಸ್ತುನಿಷ್ಠತೆಯ ಸುಳ್ಳು ಮಾಹಿತಿಯನ್ನು ನೀಡುತ್ತದೆ. ನನ್ನ ಪ್ರಕರಣದಂತೆ, ಒಂದು ಕಥೆಯನ್ನು ಸುಳ್ಳು ಎಂದು ಜನರು ಸಾಬೀತುಪಡಿಸಬಹುದಾದರೂ, ಕಂಪನಿಗಳು ಅದನ್ನು ಬಾಟ್​ ಮೇಲೆ ಹಾಕಿ ಸುಮ್ಮನಾಗಬಹುದು ಮತ್ತು ವ್ಯವಸ್ಥೆಯನ್ನು ಸುಧಾರಿಸುವುದಾಗಿ ಪೊಳ್ಳು ಭರವಸೆಗಳನ್ನು ಮಾತ್ರ ನೀಡಬಹುದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಾಟ್‌ಜಿಪಿಟಿ ಎಂಬುದು ಜಿಪಿಟಿ (ಜನರೇಟಿವ್ ಪ್ರಿಟ್ರೇನ್ಡ್ ಟ್ರಾನ್ಸ್‌ಫಾರ್ಮರ್) ಭಾಷಾ ಮಾದರಿಯನ್ನು ಆಧರಿಸಿದ, ಓಪನ್ ಎಐ ಹೆಸರಿನ ಕಂಪನಿಯು ಅಭಿವೃದ್ಧಿಪಡಿಸಿದ ಎಐ-ಚಾಲಿತ ಚಾಟ್‌ಬಾಟ್ ಆಗಿದೆ. ಸಂಭಾಷಣೆಯ ರೀತಿಯಲ್ಲಿ ಪಠ್ಯ ಇನ್‌ಪುಟ್‌ಗಳಿಗೆ ಮಾನವ ತರಹದ ಪ್ರತಿಕ್ರಿಯೆಗಳನ್ನು ಸೃಷ್ಟಿಸಲು ಇದು ಡೀಪ್ ಲರ್ನಿಂಗ್ ತಂತ್ರಗಳನ್ನು ಬಳಸುತ್ತದೆ.

ಇದನ್ನೂ ಓದಿ : ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ತಂತ್ರಜ್ಞಾನಕ್ಕೆ ನಿರ್ಬಂಧ ವಿಧಿಸಲ್ಲ: ಕೇಂದ್ರ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.