ETV Bharat / science-and-technology

ಎಐ ಕೌಶಲದಿಂದ ವೃತ್ತಿಜೀವನದಲ್ಲಿ ಏಳಿಗೆ: ಯುವ ಉದ್ಯೋಗಿಗಳ ಅಭಿಪ್ರಾಯ

ಎಐ ತಂತ್ರಜ್ಞಾನವನ್ನು ಕಲಿಯುವುದರಿಂದ ವೃತ್ತಿಜೀವನದಲ್ಲಿ ಏಳಿಗೆ ಹೊಂದಬಹುದು ಎಂಬುದು ಬಹುತೇಕ ಯುವ ಉದ್ಯೋಗಿಗಳ ಅಭಿಪ್ರಾಯವಾಗಿದೆ.

7 in 10 Indian Gen-Z workers believe AI skills

author img

By ETV Bharat Karnataka Team

Published : Aug 24, 2023, 1:28 PM IST

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ಕಲಿಯುವುದರಿಂದ ತಮ್ಮ ಭವಿಷ್ಯದ ವೃತ್ತಿಜೀವನದಲ್ಲಿ ಏಳಿಗೆ ಸಾಧಿಸಲು ಸಹಾಯಕವಾಗುತ್ತವೆ ಎಂದು ಭಾರತದ ಪ್ರತಿ 10 ರಲ್ಲಿ 7 Gen-Z (ನವಪೀಳಿಗೆಯ ಯುವ ಉದ್ಯೋಗಸ್ಥರು) ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

2016 ರ ಜನವರಿಗೆ ಹೋಲಿಸಿದರೆ 2023 ರ ಜೂನ್​ನಲ್ಲಿ ಭಾರತದಲ್ಲಿ ಎಐನಲ್ಲಿ ಪರಿಣತಿ ಹೊಂದಿದ ಉದ್ಯೋಗಿಗಳ ಸಂಖ್ಯೆ 14 ಪಟ್ಟು ಹೆಚ್ಚಾಗಿದೆ. ಗುರುವಾರ ಬಿಡುಗಡೆಯಾದ ಲಿಂಕ್ಡ್ಇನ್​ನ ಮೊದಲ ಜಾಗತಿಕ 'ಫ್ಯೂಚರ್ ಆಫ್ ವರ್ಕ್: ಸ್ಟೇಟ್ ಆಫ್ ವರ್ಕ್ @AI' (Future of Work: State of Work @AI) ವರದಿಯ ಪ್ರಕಾರ, ಎಐ ನುರಿತ ಉದ್ಯೋಗಿಗಳನ್ನು ಹೊಂದಿರುವ ಅಗ್ರ 5 ರಾಷ್ಟ್ರಗಳಲ್ಲಿ ಸಿಂಗಾಪುರ್, ಫಿನ್ಲೆಂಡ್​, ಐರ್ಲೆಂಡ್, ಭಾರತ ಮತ್ತು ಕೆನಡಾಗಳು ಸ್ಥಾನ ಪಡೆದಿವೆ.

ಕೆಲಸದ ಸ್ಥಳದಲ್ಲಿ ಎಐ ಬಳಕೆ: ಕಳೆದ ಒಂದು ವರ್ಷದಲ್ಲಿ, ಶೇಕಡಾ 43 ರಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಎಐ ಬಳಕೆಯನ್ನು ಹೆಚ್ಚಿಸಿದ್ದಾರೆ. ಎಐ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವುದರಿಂದ ತಮ್ಮ ಭವಿಷ್ಯದ ವೃತ್ತಿಜೀವನ ಸುಧಾರಿಸಲು ಸಹಾಯಕವಾಗಲಿದೆ ಎಂದು ಭಾರತದ ಎಲ್ಲ ಕಾರ್ಮಿಕರ ಪೈಕಿ ಶೇಕಡಾ 60ರಷ್ಟು ನೌಕರರು ಮತ್ತು Gen-Z ಪೀಳಿಗೆಯ ಶೇ 71 ರಷ್ಟು ಉದ್ಯೋಗಿಗಳು ನಂಬಿದ್ದಾರೆ.

ಮೂವರಲ್ಲಿ ಇಬ್ಬರಿಂದ ಡಿಜಿಟಲ್​ ಕೌಶಲ್ಯ ಕಲಿಕೆ: ಇದಲ್ಲದೆ, ಮೂವರು ಭಾರತೀಯರಲ್ಲಿ ಇಬ್ಬರು 2023 ರಲ್ಲಿ ಕನಿಷ್ಠ ಒಂದು ಡಿಜಿಟಲ್ ಕೌಶಲ್ಯವನ್ನು ಕಲಿಯುವುದಾಗಿ ಹೇಳಿದ್ದಾರೆ. ಎಐ ಮತ್ತು ಯಂತ್ರ ಕಲಿಕೆ ಅವರು ಕಲಿಯಲು ಬಯಸುವ ಉನ್ನತ ಕೌಶಲ್ಯಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2022 ರಲ್ಲಿ, ಎಐ ಪ್ರತಿಭೆಗಳನ್ನು ನೇಮಿಸಿಕೊಳ್ಳುವಲ್ಲಿನ ಬೆಳವಣಿಗೆಯು ಎಪಿಎಸಿಯಲ್ಲಿ ಒಟ್ಟಾರೆ ನೇಮಕವನ್ನು ಮೀರಿಸಿದೆ.

ಎಐ ನೇಮಕಗಳಲ್ಲಿ ಹೆಚ್ಚಳ: 2023ನೇ ವರ್ಷದಲ್ಲಿ ಭಾರತದಲ್ಲಿ ಎಐ ನೇಮಕಾತಿಗಳು ನಿರಂತರವಾಗಿ ನಡೆಯಲಿವೆ ಎಂದು ಹೇಳಲಾಗಿದೆ. ಭಾರತದ ಅರ್ಧದಷ್ಟು ಉನ್ನತ ಕಾರ್ಯನಿರ್ವಾಹಕರು ಈ ವರ್ಷ ಉದ್ಯೋಗಿಗಳ ಎಐ ಕೌಶಲ್ಯವನ್ನು ಹೆಚ್ಚಿಸುವ ಅಥವಾ ಇದಕ್ಕಾಗಿ ಹೊಸಬರನ್ನು ನೇಮಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಸುಮಾರು 57 ಪ್ರತಿಶತದಷ್ಟು ಕಾರ್ಯನಿರ್ವಾಹಕರು ಮುಂದಿನ ವರ್ಷ ತಮ್ಮ ಸಂಸ್ಥೆಗಳಲ್ಲಿ ಎಐ ಬಳಕೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಸುಮಾರು 91 ಪ್ರತಿಶತದಷ್ಟು ಭಾರತೀಯ ಕಾರ್ಯನಿರ್ವಾಹಕರು ಸಾಫ್ಟ್​​ ಸ್ಕಿಲ್​ಗಳು ಈ ಹಿಂದೆಂದಿಗಿಂತಲೂ ಪ್ರಾಮುಖ್ಯತೆ ಪಡೆದಿವೆ ಎಂದು ಹೇಳುತ್ತಾರೆ.

ಮಾನವ ಬುದ್ಧಿಮತ್ತೆಯನ್ನು ವಿವಿಧ ರೀತಿಯಲ್ಲಿ ಅನುಕರಿಸುವ ಕಂಪ್ಯೂಟರ್​ಗಳು ಅಥವಾ ಕಂಪ್ಯೂಟರ್ - ನಿಯಂತ್ರಿತ ಯಂತ್ರಗಳನ್ನು ಕೃತಕ ಬುದ್ಧಿಮತ್ತೆ ಸಾಧನಗಳೆಂದು ಕರೆಯಲಾಗುತ್ತದೆ. ಲ್ಯಾಪ್ ಟಾಪ್ ಅಥವಾ ಸೆಲ್​ಫೋನ್ ನಿಂದ ಹಿಡಿದು ಕಂಪ್ಯೂಟರ್ ನಿಯಂತ್ರಿತ ರೊಬೊಟಿಕ್ಸ್ ವರೆಗೆ ಯಾವುದಾದರೂ ಯಂತ್ರಕ್ಕೆ ಎಐ ಸಾಮರ್ಥ್ಯ ನೀಡಬಹುದು. ಯಂತ್ರದ ನಡವಳಿಕೆಯನ್ನು ನಿಯಂತ್ರಿಸಲು ನಿರ್ದೇಶನಗಳನ್ನು ನೀಡುವ ಸಾಫ್ಟ್​ವೇರ್​ ಪ್ರೊಗ್ರಾಮ್​ಗಳು ಮಾನವ ಬುದ್ಧಿಮತ್ತೆ ಮತ್ತು ಸಾಮರ್ಥ್ಯಗಳನ್ನು ಅನುಕರಿಸುತ್ತವೆ. ಹಾರ್ಡ್ ವೇರ್ ಮತ್ತು ಈ ಸಾಫ್ಟ್ ವೇರ್ ನ ಸಂಯೋಜನೆಯು ಕೃತಕ ಬುದ್ಧಿಮತ್ತೆಯನ್ನು ಸಾಧಿಸುತ್ತದೆ.

ಇದನ್ನೂ ಓದಿ : ಸ್ಯಾಮ್​ಸಂಗ್​ ಮಡಚುವ ಫೋನ್​ಗಳಿಗೆ 1.5 ಲಕ್ಷ ಪ್ರಿ-ಆರ್ಡರ್; ಇಎಂಐ ಮೂಲಕವೂ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.