ETV Bharat / science-and-technology

ವರ್ಷಾಂತ್ಯದೊಳಗೆ ಎಲೆಕ್ಟ್ರಿಕಲ್ ಕಾರು ಪರಿಚಯಿಸಲು ಮುಂದಾದ ಹುವಾಯಿ - Huawei plans to make electric cars before the end of this year

ಹುವಾಯಿ ಸರ್ಕಾರಿ ಸ್ವಾಮ್ಯದ ಚಂಗನ್ ಆಟೋಮೊಬೈಲ್ ಮತ್ತು ಇತರ ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರ ಕಾರು ತಯಾರಿಕಾ ಪ್ಲಾಂಟ್​ಗಳನ್ನು ಬಳಸಿಕೊಂಡು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗಿದೆ.

Huawei plans to make electric cars before the end of this year
ಎಲೆಕ್ಟ್ರಿಕಲ್ ಕಾರು ಪರಿಚಯಿಸಲು ಮುಂದಾದ ಹುವಾಯಿ
author img

By

Published : Mar 1, 2021, 8:13 PM IST

ಬೀಜಿಂಗ್ : ಚೀನಾದ ಟೆಕ್ ದೈತ್ಯ ಹುವಾಯಿ ತನ್ನದೇ ಆದ ಬ್ರಾಂಡ್ ಅಡಿಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಯೋಜಿಸುತ್ತಿದ್ದು, ಕೆಲವು ಮಾದರಿಗಳು ಈ ವರ್ಷದ ಅಂತ್ಯದೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಜಿಎಸ್​ಎಂ ಅರೆನಾ ಮತ್ತು ರಿಚರ್ಡ್ ಯು ಪ್ರಕಾರ, ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಉತ್ತಮ ಹಿಡಿತ ಸಾಧಿಸಿರುವ ಹುವಾಯಿ, ವಿದ್ಯು​ಚ್ಚಾಲಿತ ವಾಹನಗಳ ಕಡೆಗೆ ಗಮನ ಹರಿಸಲಿದ್ದು, ಇದು ಸಾಮೂಹಿಕ ಮಾರುಕಟ್ಟೆ ವಿಭಾಗವನ್ನು ಗುರಿಯಾಗಿಸಿದೆ.

ಕಂಪನಿಯ ಮೂಲಗಳ ಪ್ರಕಾರ, ಹುವಾಯಿ ಸರ್ಕಾರಿ ಸ್ವಾಮ್ಯದ ಚಂಗನ್ ಆಟೋಮೊಬೈಲ್ ಮತ್ತು ಇತರ ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅವರ ಕಾರು ತಯಾರಿಕಾ ಪ್ಲಾಂಟ್​ಗಳನ್ನು ಬಳಸಿಕೊಂಡು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗಿದೆ. ಜೊತೆಗೆ ಬೀಜಿಂಗ್ ಮೂಲದ ಬಿಎಐಸಿ ಗ್ರೂಪ್‌ನ ಬ್ಲೂಪಾರ್ಕ್ ನ್ಯೂ ಎನರ್ಜಿ ಟೆಕ್ನಾಲಜಿಯೊಂದಿಗೂ ಚರ್ಚೆ ನಡೆಸಿದೆ.

ಈ ನಡುವೆ, ಚೀನಾದ ಮತ್ತೊಂದು ಟೆಕ್ ಕಂಪನಿ ಶಿಯೋಮಿ ಕೂಡ ತನ್ನದೇ ಆದ ಕಾರನ್ನು ನಿರ್ಮಿಸಲು ಯೋಜಿಸುತ್ತಿದೆ. ಆದರೆ, ಈ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಶಿಯೋಮಿ ವಿದ್ಯು​ತ್ ಚಾಲಿತ ವಾಹನ ತಯಾರಿಸಲು ಮುಂದಾದರೆ, ಕಂಪನಿಯ ಸಿಇಒ ಲೀ ಜುನ್​ ಅದರ ನಾಯಕತ್ವ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. 2013 ರಲ್ಲಿ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಲು ಲೀ ಜುನ್ ಎರಡು ಬಾರಿ ಯುಎಸ್​ಗೆ ಭೇಟಿ ನೀಡಿದ್ದರು ಮತ್ತು ಈಗ ಈ ಕ್ಷೇತ್ರದಲ್ಲಿ ಅವರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಟಾಟಾ, ಮಹೀಂದ್ರಾ ಮತ್ತು ಇತರ ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.