ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಗಂಭೀರವಾದ ಭದ್ರತಾ ದೋಷಗಳು ಎದುರಾದ ಬಗ್ಗೆ ಆಪಲ್ ಕಂಪನಿ ಬಹಿರಂಗಪಡಿಸಿದೆ. ಕೆಲ ಸಾಫ್ಟ್‌ವೇರ್ ನ್ಯೂನತೆಗಳು ದಾಳಿಕೋರರಿಗೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಿವೆ. ದಾಳಿಕೋರರು ಈ ಸಮಸ್ಯೆಯನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಲ್ ಎರಡು ಭದ್ರತಾ ವರದಿಗಳಲ್ಲಿ ಹೇಳಿದೆ.
ಪೀಡಿತ ಸಾಧನಗಳನ್ನು iPhones6S ಮತ್ತು ನಂತರದ ಮಾದರಿಗಳನ್ನು ನವೀಕರಿಸಲು ಭದ್ರತಾ ತಜ್ಞರು ಬಳಕೆದಾರರಿಗೆ ಸಲಹೆ ನೀಡಿದ್ದಾರೆ. 5 ನೇ ತಲೆಮಾರಿನ ಮತ್ತು ನಂತರದ ಎಲ್ಲ ಐಪ್ಯಾಡ್ ಪ್ರೊ ಮಾದರಿಗಳು ಮತ್ತು ಐಪ್ಯಾಡ್ ಏರ್ 2 ಸೇರಿದಂತೆ iPad ನ ಹಲವಾರು ಮಾದರಿಗಳು ಮತ್ತು Mac ಕಂಪ್ಯೂಟರ್‌ಗಳನ್ನು ಚಲಾಯಿಸುವ MacOS Monterey ಅಪ್ಡೇಟ್ ಮಾಡಲು ಬಳಕೆದಾರರಿಗೆ ಆಪಲ್ ಕಂಪನಿ ಎಚ್ಚರಿಕೆ ನೀಡಿದೆ.
ಓದಿ: ಆರ್ಡರ್ ಮಾಡಿದ್ದು iPhone 12... ಮನೆಗೆ ಬಂದಿದೆಯಂತೆ ನಿರ್ಮಾ ಸೋಪ್, ಇದು ಫ್ಲಿಪ್ಕಾರ್ಟ್ ಎಡವಟ್ಟಾ?