ETV Bharat / science-and-technology

ಭಾರತದಲ್ಲಿ ಪ್ರತಿವರ್ಷ 50 ಮಿಲಿಯನ್​ ಐಫೋನ್​ ಉತ್ಪಾದನೆಗೆ ಮುಂದಾದ ಆ್ಯಪಲ್​

author img

By ETV Bharat Karnataka Team

Published : Dec 8, 2023, 4:26 PM IST

ಆ್ಯಪಲ್​ ಕಂಪನಿ ಈ ಗುರಿ ಸಾಧಿಸಿದ್ದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದಿಂದಲೇ ಕಾಲು ಭಾಗದಷ್ಟು ಐಫೋನ್​ ಉತ್ಪಾದನೆ ಆಗಲಿದೆ.

Apple is aiming to manufacture more than 50 million iPhones

ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ 50 ಮಿಲಿಯನ್​ ಐಫೋನ್​ ಉತ್ಪಾದನೆ ಗುರಿಯನ್ನು ಆ್ಯಪಲ್​​ ಹೊಂದಿದೆ. ಇದರ ಜೊತೆಗೆ, ಚೀನಾದ ಹೊರಗೂ ಕೆಲವು ಉತ್ಪಾದನೆಗಳನ್ನು ಸ್ಥಳಾಂತರಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ವರದಿ ತಿಳಿಸಿದೆ. ಮುಂದಿನ ಮೂರು ಮತ್ತು ನಾಲ್ಕು ವರ್ಷದಲ್ಲಿ​ ಘಟಕಗಳಲ್ಲಿ ಮಿಲಿಯನ್‌ಗಟ್ಟಲೆ ಫೋನ್​ ತಯಾರಿಸುವ ಗುರಿಯನ್ನು ಟೆಕ್​ ದೈತ್ಯ ಸಂಸ್ಥೆ ಹೊಂದಿದೆ ಎಂದು ವಾಲ್​ ಸ್ಟ್ರೀಟ್​ ಜರ್ನಲ್​ ವರದಿ ಮಾಡಿದೆ. ಆ್ಯಪಲ್​ ಈ ಗುರಿಯನ್ನು ಸಾಧಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದಿಂದಲೇ ಕಾಲು ಭಾಗದಷ್ಟು ಐಫೋನ್​ ಉತ್ಪಾದನೆ ಆಗಲಿದೆ. ಚೀನಾ ಐಫೋನ್​ ಉತ್ಪಾದನೆಯ ದೊಡ್ಡ ದೇಶವಾಗಿಯೇ ಉಳಿಯಲಿದೆ.

ಚೀನಾದ ಹೊರಗೆ ತನ್ನ ಉತ್ಪಾದನೆಯನ್ನು ಸ್ಥಳಾಂತರ ಮಾಡಲು ಆ್ಯಪಲ್​ ಯೋಜನೆ ಹೊಂದಿದ್ದರೂ ಇದಕ್ಕೆ ದೊಡ್ಡ ಮಟ್ಟದ ಹೋರಾಟ ಎದುರಿಸುತ್ತಿದೆ. ಆ್ಯಪಲ್​ನ ಪ್ರಮುಖ ಪೂರೈಕೆದಾರ ಫಾಕ್ಸ್​​ಕಾನ್​ ಭಾರತದಲ್ಲಿ ಹೆಚ್ಚಿನ ಫ್ಯಾಕ್ಟರಿಯನ್ನು ತೆರೆಯಲು ಯೋಜನೆ ರೂಪಿಸಿದೆ. ಟಾಟಾ ಗ್ರೂಪ್​ ಇದಕ್ಕಾಗಿ ಭಾರತದಲ್ಲಿ ಅತಿದೊಡ್ಡ ಐಫೋನ್​ ಸ್ಥಾವರ ರೂಪಿಸಲು ಸಜ್ಜಾಗಿದೆ ಎಂದು ವರದಿ ತಿಳಿಸಿದೆ.

ಭಾರತ ಪ್ರಸ್ತುತ ಆರ್ಥಿಕ ವರ್ಷದಲ್ಲಿ, ಏಪ್ರಿಲ್,​ ಆಗಸ್ಟ್​​ ಅವಧಿಯಲ್ಲಿ 5.5 ಬಿಲಿಯನ್​ ಡಾಲರ್​​ ಐಫೋನ್ ರಫ್ತು ಕಾಣುತ್ತಿದೆ ಎಂದು ಸರ್ಕಾರ ಮತ್ತು ಉದ್ಯಮದ ದತ್ತಾಂಶ ತಿಳಿಸಿದೆ. ಐಸಿಇಎ ಅಂದಾಜಿಸಿದಂತೆ, 2022-23ರ ಆರ್ಥಿಕ ವರ್ಷದಲ್ಲಿ ಅವಧಿಯಲ್ಲಿ ಭಾರತದ ಮೊಬೈಲ್​ ರಫ್ತು 25 ಸಾವಿರ ಕೋಟಿ ನಡೆಸಿದರೆ, 2023-24ರಲ್ಲಿ 45 ಸಾವಿರ ಕೋಟಿ ರಫ್ತು ನಡೆಸಿದೆ.

ಆ್ಯಪಲ್​ನ ಒಟ್ಟಾರೆ ಉತ್ಪಾದನೆಯಲ್ಲಿ ಭಾರತ ನಿರ್ಮಿತ ಐಫೋನ್​ ಶೇ 50ರಷ್ಟಿದೆ. ಅಂದರೆ ದೇಶದಲ್ಲಿ ಒಟ್ಟಾರೆ 12 ಮಿಲಿಯನ್​ ಸ್ಮಾರ್ಟ್​​ಫೋನ್​ಗಳು ರಫ್ತಾಗಿವೆ. ನಂತರದ ಸ್ಥಾನದಲ್ಲಿ ಸ್ಯಾಮ್​ಸಂಗ್​​ ಇದೆ. ಸ್ಯಾಮ್​ಸಂಗ್​​ ಶೇ 45ರಷ್ಟು ರಫ್ತು ಮಾಡಿದೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ ಭಾರತ 1,20,000 ಕೋಟಿ ಮೊಬೈಲ್​​ ಫೋನ್​ ರಫ್ತು ನಡೆಸಿದ್ದು, ಆ್ಯಪಲ್​ ಮುಂಚೂಣಿಯಲ್ಲಿದೆ. ಐಫೋನ್​ ಸರಣಿಯ ಮೊಬೈಲ್​ಗಳು ಮೇಡ್​ ಇನ್​ ಇಂಡಿಯಾ ಆಗಿದೆ. ಟಾಟಾ ಗ್ರೂಪ್ ತೈವಾನ್‌ನ ವಿಸ್ಟ್ರಾನ್ ಕಂಪನಿಯ ಕರ್ನಾಟಕದ ಪ್ಲಾಂಟ್ ಅನ್ನು ಐಫೋನ್‌ಗಳ ತಯಾರಿಕೆಗಾಗಿ ಸ್ವಾಧೀನಪಡಿಸಿಕೊಂಡಿದೆ. ಇದರೊಂದಿಗೆ ಟಾಟಾ ಗ್ರೂಪ್ ಐಫೋನ್‌ಗಳನ್ನು ತಯಾರಿಸಿದ ಮೊದಲ ಭಾರತೀಯ ಕಂಪನಿಯಾಗಲಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಸ್ವೀವ್ ಜಾಬ್ಸ್ ಸಹಿ ಮಾಡಿದ 4 ಡಾಲರ್ ಮೊತ್ತದ ಚೆಕ್ 36 ಸಾವಿರ ಡಾಲರ್​ಗೆ ಮಾರಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.