ETV Bharat / science-and-technology

ನಾಸಾದ ಮೊದಲ ಬಾಹ್ಯಾಕಾಶ ಮಿಷನ್​​​​​​​​ನ ಗಗನಯಾತ್ರಿ ಕನ್ನಿಂಗ್​​​​ಹ್ಯಾಮ್​ ಇನ್ನಿಲ್ಲ - ನಾಸಾದ ಅಪೊಲೊ ಕಾರ್ಯಕ್ರಮ

ನಾಸಾದ ಅಪೊಲೊ ಗಗನಯಾತ್ರಿ ವಾಲ್ಟರ್ ಕನ್ನಿಂಗ್​​ಹ್ಯಾಮ್​ ಮಂಗಳವಾರ ಹೂಸ್ಟನ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಪೊಲೊ 7 ಮಿಷನ್​​ನ ಪ್ರಮುಖ ಗಗನಯಾತ್ರಿಯಾಗಿದ್ದ ಕನ್ನಿಂಗ್​​ಹ್ಯಾಮ್​

Apollo 7 astronaut Walter Cunningham dead at 90
ನಾಸಾದ ಮೊದಲ ಬಾಹ್ಯಾಕಾಶ ಮಿಷನ್​​​​​​​​ನ ಗಗನಯಾತ್ರಿ ಕನ್ನಿಂಗ್​​​​ಹ್ಯಾಮ್​ ಇನ್ನಿಲ್ಲ
author img

By

Published : Jan 4, 2023, 12:57 PM IST

ವಾಷಿಂಗ್ಟನ್( ಅಮೆರಿಕ): ನಾಸಾದ ಅಪೊಲೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಗನಯಾತ್ರಿ ವಾಲ್ಟರ್​ ಕನ್ನಿಂಗ್​ ಹ್ಯಾಮ್​​​ ಮಂಗಳವಾರ ನಿಧನರಾಗಿದ್ದಾರೆ. ಇವರು ಮೊದಲ ಬಾಹ್ಯಾಕಾಶ ಮಿಷನ್​​ನಲ್ಲಿ ಕೆಲಸ ಮಾಡಿದ ತಂತ್ರಜ್ಞರಾಗಿದ್ದು ಮತ್ತು ಬದುಕುಳಿದಿದ್ದ ಕೊನೆಯ ಗಗನಯಾತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಇಂತಹ ಖ್ಯಾತ ನಾಮ ಕನ್ನಿಂಗ್​​ಹ್ಯಾಮ್ ತಮ್ಮ​ 90ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ನಾಸಾ ಕನ್ನಿಂಗ್‌ಹ್ಯಾಮ್‌ ಅವರ ನಿಧನವನ್ನು ದೃಢಪಡಿಸಿದೆ. ಆದರೆ ಅವರ ಸಾವಿನ ಕಾರಣವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನೀಡಿರುವ ತನ್ನ ಹೇಳಿಕೆಯಲ್ಲಿ ದೃಢಪಡಿಸಿಲ್ಲ. ಕನ್ನಿಂಗ್​​ ಹ್ಯಾಮ್​ ಅವರು ಅವರ ಸಂಪೂರ್ಣ ಜೀವನವನ್ನು ಕಳೆದು ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬದ ವಕ್ತಾರರಾದ ಜೆಫ್ ಕಾರ್ ಹೇಳಿದ್ದಾರೆ ಎಂದು ವರದಿಯಾಗಿದೆ.

1968 ರ ಅಪೊಲೊ 7 ಮಿಷನ್‌ನಲ್ಲಿದ್ದ ಮೂವರು ಗಗನಯಾತ್ರಿಗಳಲ್ಲಿ ಕನ್ನಿಂಗ್‌ಹ್ಯಾಮ್ ಕೂಡಾ ಒಬ್ಬರಾಗಿದ್ದರು. 11 ದಿನಗಳ ಕಾಲ ಬಾಹ್ಯಾಕಾಶಯಾನ ಕೈಗೊಂಡಿದ್ದು ಅಪೊಲೊ ಮಿಷನ್​​ನ ಭಾಗವಾಗಿದ್ದರು. ಒಂದು ವರ್ಷದ ನಂತರ ಚಂದ್ರನಲ್ಲಿಗೆ ನಾಸಾ ಪದಾರ್ಪಣೆ ಮಾಡಿತ್ತು. ಅಂದಿನ ಬಾಹ್ಯಾಕಾಶ ಯಾನದ ತಂಡದಲ್ಲಿ ಕನ್ನಿಂಗ್‌ಹ್ಯಾಮ್, ನೌಕಾಪಡೆಯ ಕ್ಯಾಪ್ಟನ್ ವಾಲ್ಟರ್ ಎಂ. ಸ್ಕಿರಾ ಮತ್ತು ಏರ್ ಫೋರ್ಸ್ ಮೇಜರ್ ಡಾನ್ ಎಫ್. ಕನ್ನಿಂಗ್ಹ್ಯಾಮ್ ಚಂದ್ರನ ಮಾಡ್ಯೂಲ್ ಪೈಲಟ್ ಆಗಿದ್ದರು, 1968 ಅಕ್ಟೋಬರ್ 11 ರಂದು ಫ್ಲೋರಿಡಾದ ಕೇಪ್ ಕೆನಡಿ ಏರ್ ಫೋರ್ಸ್ ಸ್ಟೇಷನ್‌ನಿಂದ ಇವರಿದ್ದ ಬಾಹ್ಯಾಕಾಶ ನೌಕೆ ಉಡಾವಣೆಗೊಂಡಿತ್ತು.

ಕನ್ನಿಂಗ್‌ಹ್ಯಾಮ್, ಐಸೆಲೆ ಮತ್ತು ಶಿರ್ರಾ' ಅವರು ಪರಿಪೂರ್ಣವಾದ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಾಸಾ ಕೈಗೊಂಡ ಮೊದಲ ಬಾಹ್ಯಾಕಾಶ ಯಾನ ಎಷ್ಟು ಯಶಸ್ವಿ ಆಗಿತ್ತು ಎಂದರೆ ಇದು, ನಾಸಾದ ಎಲ್ಲ ಬಾಹ್ಯಾಕಾಶ ಯಾನಗಳಿಗೆ ಮಾದರಿ ಎಂಬಂತೆ ಇತ್ತು ಎಂದು ನೆನಪಿಸಿಕೊಂಡಿದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ. ಕನ್ನಿಂಗ್‌ಹ್ಯಾಮ್ ಒಬ್ಬ ಪಕ್ಕಾ ಪರಿಶೋಧಕ ಎಂದು NASA ಆಡಳಿತಾಧಿಕಾರಿ ಬಿಲ್ ನೆಲ್ಸನ್ ಸ್ಮರಿಸಿಕೊಂಡಿದ್ದಾರೆ. ನಾಸಾದ ಆರ್ಟೆಮಿಸ್ ಮೂನ್ ಕಾರ್ಯಕ್ರಮಕ್ಕೆ ಕನ್ನಿಂಗ್​​ ಹ್ಯಾಮ್​ ಅಡಿಪಾಯ ಹಾಕಿದ್ದರು ಎಂದು ಸ್ಮರಿಸಲಾಗಿದೆ.

ಅಮೆರಿಕದ ಮೊದಲ ಅಪೊಲೊ -7 ಬಾಹ್ಯಾಕಾಶ ಯಾನದಲ್ಲಿದ್ದ ಗಗನಯಾನಿಗಳು, ಈ ಯಾನದ ಬಗ್ಗೆ ಮಾಡಿರುವ ವಿಶೇಷ ವರದಿಗಳಿಗಾಗಿ ಎಮ್ಮಿ ಪ್ರಶಸ್ತಿಯನ್ನೂ ಸಹ ಪಡೆದುಕೊಂಡಿರುವುದು ವಿಶೇಷ. ಅವರು ಬಾಹ್ಯಾಕಾಶದಲ್ಲಿದ್ದಾಗ ಸಹವರ್ತಿಗಳೊಂದಿಗೆ ನಡೆಸುತ್ತಿದ್ದ ಹಾಸ್ಯಮಯ ಸಂಗತಿಗಳನ್ನು ಸೆರೆ ಹಿಡಿದು, ಓದುಗರಿಗೆ ನೀಡಿದ್ದರು. ಅಷ್ಟೇ ಅಲ್ಲ ಜನ ಸಾಮಾನ್ಯನಿಗೆ ಬಾಹ್ಯಾಕಾಶದ ವಿಶೇಷತೆಗಳು, ಅಲ್ಲಿನ ಸಂಕಷ್ಟ ಹಾಗೂ ರೋಚಕತೆಗಳ ಬಗ್ಗೆ ಶಿಕ್ಷಣ ನೀಡಿ, ಎಲ್ಲರಿಗೂ ಬಾಹ್ಯಾಕಾಶ ಜ್ಞಾನ ದಾರೆ ಎರೆದಿದ್ದರು ಎಂದು ನಾಸಾ ಹೇಳಿದೆ.

ಅಂದ ಹಾಗೆ ಅಪೊಲೊ ಯಶಸ್ವಿ ಕಾರ್ಯಾಚರಣೆಗೆ ಮುನ್ನ ನಡೆದ ಪ್ರಯತ್ನದಲ್ಲಿ ಮೂವರು ಗಗನ ಯಾತ್ರೆಗಳು ಮೃತಪಟ್ಟಿದ್ದರು. ಆದರೂ ಛಲ ಬಿಡಿದ ನಾಸಾ ಮರು ಪ್ರಯತ್ನ ಮಾಡಿ, ಅಪೊಲೊ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿತ್ತು. ಈ ಬಗ್ಗೆ 2017 ರಲ್ಲಿ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕನ್ನಿಂಗ್​​​ಹ್ಯಾಮ್​ ಅಪೊಲೊ 7 ಅನ್ನು ನೆನಪಿಸಿಕೊಂಡಿದ್ದರು. ಈ ಘಟನೆಯೇ "ಎಲ್ಲವನ್ನೂ ಜಯಿಸಲು ನಮಗೆ ಸಹಕಾರಿಯಾಯಿತು‘‘ ಎಂದು ಕನ್ನಿಂಗ್​ ಹ್ಯಾಮ್​​ ಹೇಳಿಕೊಂಡಿದ್ದರು.

ಇದನ್ನು ಓದಿ: 2023ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತಷ್ಟು ಸಾಧನೆ.... ಸಿದ್ಧವಾಗ್ತಿವೆ ಮಹತ್ವದ ಯೋಜನೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.