ETV Bharat / science-and-technology

ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಯ್ತು ಹೊಸ ಜಾತಿಯ ಮರ ; ಹೆಚ್ಚಿದ ಕುತೂಹಲ - ಪರಿಸರ ಮತ್ತು ಸಸ್ಯ ಸಂಕುಲಗಳು ಸಂಪತ್ತ

ಭಾರತ ಅಪರೂಪದ ಸಸ್ಯ ಸಂಕುಲದಲ್ಲಿ ಸಂಪತ್ತನ್ನು ಹೊಂದಿದ್ದು, ಅದರಲ್ಲಿ ಇದೇ ಮೊದಲ ಬಾರಿಗೆ ಮಿಯೋಜಿನ್ ಅರುಣಾಚಲನೆಸಿಸ್ ಜಾತಿ ಮರ ಪತ್ತೆಯಾಗಿದೆ.

A new species of tree discovered in Arunachal Pradesh

author img

By

Published : May 25, 2023, 12:41 PM IST

ಇಟಾನಗರ (ಅರುಣಾಚಲ ಪ್ರದೇಶ) : ಭಾರತದ ಜೀವ ವಿವೈಧ್ಯತೆ ಅಗಾಧವಾಗಿದೆ. ಇಲ್ಲಿನ ಪರಿಸರ ಮತ್ತು ಸಸ್ಯ ಸಂಕುಲಗಳು ಸಂಪತ್ಬರಿತವಾಗಿದ್ದು, ಸಮೃದ್ಧಿಯಾಗಿದೆ. ಪಶ್ಚಿಮ ಘಟ್ಟಗಳು, ಹಿಮಾಲಯನ್​ ಶ್ರೇಣಿಗಳಲ್ಲಿನ ಅರಣ್ಯ ಸಂಪತ್ತುಗಳು ಅಗಾಧವಾಗಿದ್ದು, ಹಲವು ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. ಔಷಧಿ ಸಸ್ಯದಿಂದ ಹಿಡಿದು, ಕೋಟ್ಯಂತರ ರೂಪಾಯಿ ಬೆಲೆಬಾಳುವ ವನ ಸಂಪತ್ತು ಭಾರತದ ವಿವಿಧ ಮೂಲೆಗಳಲ್ಲಿ ಹರಡಿದೆ. ಇಂತಹ ಜೀವ ವೈವಿಧ್ಯತೆಯ ತಾಣವಾಗಿರುವ ನಮ್ಮ ದೇಶದಲ್ಲಿ ಹೊಸ ಜಾತಿ ಮರವೊಂದು ಪತ್ತೆಯಾಗಿದೆ. ಅರುಣಾಚಲ ಪ್ರದೇಶದ ಅರಣ್ಯ ಸಂಪತ್ತಿನಲ್ಲಿ ಈ ಹೊಸ ತಳಿಯ ಮರ ಪತ್ತೆಯಾಗಿದ್ದು, ಈ ಕುರಿತು ಎಡಿನ್​ ಬರ್ಗ್​ ಜರ್ನಲ್​ ಆಫ್​ ಬೊಟ್ನಿಯ ಮೇ 19ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಅರಣಾಚಲ ಕಾಡಿನಲ್ಲಿ ಪತ್ತೆ: ಮಿಯೋಜಿನ್ ಅರುಣಾಚಲನೆಸಿಸ್ (Meiogyne Arunachalensis) ಎಂಬ ಹೊಸ ಜಾತಿಯ ಮರ ಇದಾಗಿದೆ. ಆದಿ ಹಿಲ್ಸ್​​ ಆಫ್​ ಅರುಣಾಚಲ ಪ್ರದೇಶದ ಜೀವ ವೈವಿಧ್ಯತೆಯ ಅನ್ವೇಷಣೆ ವೇಳೆ ಈ ಮರ ಪತ್ತೆಯಾಗಿದೆ ಎಂದು ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಭಾರತದ ವನ್ಯಜೀವಿ ಸಂಸ್ಥೆಯಾದ ಹೇಮ್​ ಚಂದ್​ ಮಹೀಂದ್ರ ಫೌಂಡೇಷನ್​ ಮತ್ತು ಅರುಣಾಚಲ ಪ್ರದೇಶ ಅರಣ್ಯ ಇಲಾಖೆ ಬೆಂಬಲದೊಂದಿಗೆ ಈ ಕಾರ್ಯ ನಡೆಸಲಾಗಿದೆ.

ಇನ್ನು, ಈ ಮರದ ಕುರಿತು ವಿವರಣೆ ನೀಡಿರುವ ಸಂಶೋಧಕರ ಗುಂಪಿನಲ್ಲಿ ಒಬ್ಬರಾಗಿರುವ ನವೆಂಡು ಪೇಜ್​, ಭಾರತದಲ್ಲಿ ಪತ್ತೆಯಾಗುತ್ತಿರುವ ಮೂರನೇ ಮತ್ತು ಪೂರ್ವ ಹಿಮಾಲಯ ಮತ್ತು ಈಶಾನ್ಯ ಭಾರತದ ಮೊದಲ ಜಾತಿ ಮರ ಇದಾಗಿದೆ ಎಂದಿದ್ದಾರೆ. ಮಿಯೋಜಿನ್​ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹರಡಿದೆ ಎಂದಿದ್ದಾರೆ.

ಅತಿ ದೊಡ್ಡ ಮರ: ಈ ಮರವೂ ಮಿಯೋಜಿನ್ ಥೈಲ್ಯಾಂಡ್​​ನ​ ಮ್ಯಾಕ್ಸಿಫ್ಲೋರಾದೊಂದಿಗೆ ಹೋಲಿಕೆಯನ್ನು ಹೊಂದಿದೆ. ಆದರೆ ಇದು ಸಸ್ಯದ ಮತ್ತು ಸಂತಾನೋತ್ಪತ್ತಿಯ ಗುಣಲಕ್ಷಣದಲ್ಲಿ ಭಿನ್ನವಾಗಿದೆ. ಈ ಹಿಂದೆ ತಿಳಿಸಲಾಗಿದ್ದ ಈ ಜಾತಿಯ ಮರ ಮತ್ತು ಮರದ ಕಾಂಡದ ಸುತ್ತಳತೆಗಿಂತ ಈ ಮಿಯೋಜಿನ್ ಅರುಣಾಚಾಲೆನ್ಸಿಸ್ ಮರ ಅತಿದೊಡ್ಡ ಜಾತಿಯಾಗಿದೆ ಎಂದು ಪೇಜ್​ ಮಾಹಿತಿ ನೀಡಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಮರ ಜಾತಿಯ ಆವಿಷ್ಕಾರವು ಈಶಾನ್ಯ ಭಾರತ ಮತ್ತು ಪೂರ್ವ ಹಿಮಾಲಯದ ಜೀವವೈವಿಧ್ಯದ ಹಾಟ್‌ಸ್ಪಾಟ್‌ನಿಂದ ತಳಿಯ ಮೊದಲ ದಾಖಲೆಯಾಗಿದೆ. ಈ ಮರವು ಲೋವರ್ ದಿಬಾಂಗ್ ಕಣಿವೆ ಮತ್ತು ಲೋಹಿತ್‌ನ ಮಧ್ಯಂತರ ಜಿಲ್ಲೆಗಳಲ್ಲಿ ಮತ್ತು ಮ್ಯಾನ್ಮಾರ್‌ನ ಉತ್ತರ ಭಾಗಗಳಲ್ಲಿ ನಾಮದಾಫಾ ರಾಷ್ಟ್ರೀಯ ಉದ್ಯಾನವನದಲ್ಲೂ ಕಂಡು ಬರುವ ಸಾಧ್ಯತೆ ಇದೆ ಎಂದು ಜರ್ನಲ್​ ತಿಳಿಸಿದೆ.

ಈ ಮಿಯೋಜಿನ್ ಅರುಣಾಚಲನೆಸಿಸ್ ಮರವು 200 ಸೆಂ. ಮೀಗಿಂತ ಹೆಚ್ಚಿನ ಕಾಂಡದ ಸುತ್ತಳತೆ ಹೊಂದಿದ್ದು, 30 ಮೀಟರ್​ ಎತ್ತರವರೆಗೆ ಬೆಳೆಯುತ್ತದೆ. ಇದು ಸೀತಾಫಲ ಕುಟುಂಬಕ್ಕೆ ಸೇರಿದ ಮರವಾಗಿದೆ. ಮಿಯೋಜಿನ್ ತಳಿಗೆ ಸೇರಿದ ಒಟ್ಟು ಮೂರು ಜಾತಿ ಮರ ಇದುವರೆಗೆ ಪತ್ತೆಯಾಗಿದ್ದು, ಇದು ಭಾರತದ ಸಸ್ಯ ಸಂಪತ್ತಿನ ಕುರಿತು ಹೆಚ್ಚಿನ ಬೆಳಕು ಚೆಲ್ಲಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಖಾಲಿಯಾಗುತ್ತಿವೆ ಸರೋವರಗಳು; 200 ಕೋಟಿ ಜನರಿಗೆ ನೀರಿನ ಕೊರತೆ ಸಂಭವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.