ETV Bharat / science-and-technology

ಈ ವರ್ಷ ಟೆಕ್​ ಸಂಸ್ಥೆ, ಸ್ಟಾರ್ಟ್​​ಅಪ್​ಗಳಲ್ಲಿ ಉದ್ಯೋಗ ವಜಾ:  ಕೆಲಸ ಕಳೆದುಕೊಂಡ 2.5 ಲಕ್ಷ ಮಂದಿ

ನವೆಂಬರ್​ 11ರವರೆಗೆ ಈ ವರ್ಷ 1.106 ಟೆಕ್​ ಕಂಪನಿಗಳು 2,48,974 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

author img

By ETV Bharat Karnataka Team

Published : Nov 11, 2023, 3:57 PM IST

2.5 lakh people lost their jobs due to job layoffs in tech firms and startups

ನವದೆಹಲಿ: ಜಾಗತಿಕ ಮಟ್ಟದಲ್ಲಿ ಕಳೆದ ಎರಡು ವರ್ಷದಿಂದ ಐಟಿ ಉದ್ಯಮದಲ್ಲಿ ಆಗುತ್ತಿರುವ ಉದ್ಯೋಗ ವಜಾ ಪ್ರಕ್ರಿಯೆಯಿಂದ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕಳೆದೊಂದು ವರ್ಷದಿಂದ ಈ ಉದ್ಯೋಗ ವಜಾದಿಂದಾಗಿ ಸರಿಸುಮಾರು 1.5 ಲಕ್ಷ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. Layoffs.fyi. ವೆಬ್​ಸೈಟ್​​ ನೀಡಿರುವ ದತ್ತಾಂಶ ಪ್ರಕಾರ, ನವೆಂಬರ್​ 11ರವರೆಗೆ ಈ ವರ್ಷ 1.106 ಟೆಕ್​ ಕಂಪನಿಗಳು 2,48,974 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಕಳೆದ ವರ್ಷ 1,024 ಟೆಕ್​ ಕಂಪನಿಗಳು 1,54,336 ಉದ್ಯೋಗಿಗಳನ್ನು ವಜಾಗೊಂಡಿದ್ದಾರೆ. ಜಾಗತಿಕ ಮ್ಯಾಕ್ರೋಎಕೊನಾಮಿಕ್​​ ಪರಿಸ್ಥಿತಿ ಬಿಗ್​​ ಟೆಕ್​ ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಕಾರಣ ನೀಡಿ ದೊಡ್ಡ ಟೆಕ್ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ. ಪ್ರತಿನಿತ್ಯ ಸರಾಸರಿ 555 ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅಥವಾ ಪ್ರತಿ ಗಂಟೆಗೆ 23 ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಜನವರಿ ಒಂದೇ ತಿಂಗಳಲ್ಲಿ 89,554 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಉದ್ಯೋಗ ಕಡಿತದ ಪ್ರಕ್ರಿಯೆ ಮುಂದುವರೆದಿದೆ. ಕಳೆದ ತಿಂಗಳು 4,632 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ದತ್ತಾಂಶ ವಿವರಿಸಿದೆ.

ವಲಯವಾರು ಚಿಲ್ಲರೆ ತಂತ್ರಜ್ಞಾನ ಮತ್ತು ಗ್ರಾಹಕ ತಂತ್ರಜ್ಞಾನವು ಈ ವರ್ಷದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದೆ. 2023 ವರ್ಷ ಮುಗಿಯುವ ಮೊದಲೇ, ಮತ್ತಷ್ಟು ವಜಾಗಳಿಸಿದೆ. ಈ ತಿಂಗಳಲ್ಲಿ ಅನೇಕ ಗೇಮಿಂಗ್​ ಕಂಪನಿಗಳು ಮತ್ತು ಟೆಕ್​ ಸಂಸ್ಥೆಗಳು ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ. ಫ್ರೆಂಚ್​ ವಿಡಿಯೋ ಗೇಮ್​ ಕಂಪನಿ ಯುಬಿಸೋಫ್ಟ್​​​ ತನ್ನ ಕಾರ್ಪೋರೇಟ್​ ಪುನರ್​​ರಚನೆ ಮತ್ತು ಮರು ಸಂಘಟನೆ ದೃಷ್ಟಿಯಿಂದ 124 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಗೇಮ್​ ಅಭಿವೃದ್ಧಿ ಸಾಫ್ಟ್​ವೇರ್​​ ಕಂಪನಿ ಘಟಕವೂ ವೆಚ್ಚ ಕಡಿತಕ್ಕಾಗಿ ಉದ್ಯೋಗ ವಜಾ ನಡೆಸುವುದಾಗಿ ತಿಳಿಸಿದೆ.

ಸ್ನಾಪ್​ಚಾಟ್​​ ಮಾತೃ ಕಂಪನಿ ಸ್ನಾಪ್​​ 20 ಸಿಬ್ಬಂದಿಗಳನ್ನು ಉದ್ಯೋಗದಿಂದ ವಜಾ ಮಾಡಿದೆ. ಬಹು -ಕ್ಲೌಡ್ ಅಪ್ಲಿಕೇಶನ್ ಭದ್ರತೆ ಮತ್ತು ವಿತರಣೆ ಜಾಗತಿಕ ಮುಂಚೂಣಿಯಲ್ಲಿರುವ ಅಮೆರಿಕದ ಎಫ್​5, ಒಂದೇ ತಿಂಗಳಲ್ಲಿ 120 ಉದ್ಯೋಗಿಗಳ ವಜಾಗೊಳಿಸಿದೆ.

ಗ್ಲೋಬಲ್​ ಕಮ್ಯುನಿಕೇಷನ್ಸ್​ ಕಂಪನಿ ವಯಸ್ಟಾಟ್​​ 800 ಉದ್ಯೋಗಿಗಳನ್ನು ವಜಾಗೊಳಿಸಿದೆ. ಶೇ 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಅಮೆರಿಕ ಮೂಲದ ಸೈಬರ್​ಸೆಕ್ಯೂರಿಟಿ ಕಂಪನಿ ಸ್ಪಲಂಗ್​​ ಕೂಡ ಶೇ 7ರಷ್ಟು ಉದ್ಯೋಗಿಗಳ ವಜಾಗೊಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಡಿಲೀಟ್ ಆಗಲಿವೆ ಲಕ್ಷಾಂತರ ಜಿಮೇಲ್ ಖಾತೆ; ನಿಮ್ಮ ಖಾತೆಗೂ ಕಾದಿದೆಯಾ ಅಪಾಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.