ETV Bharat / opinion

ವಿಶೇಷ ಅಂಕಣ: ಪ್ರವಾಹದ ಬಗ್ಗೆ ರಾಷ್ಟ್ರೀಯ ತಂತ್ರ - ರಾಷ್ಟ್ರೀಯ ಪ್ರವಾಹ ನಿಯಂತ್ರಣ ನೀತಿ

ಪ್ರವಾಹದಿಂದಾಗಿ ಬೆಳೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ ಮತ್ತು ಪ್ರಾಣಕ್ಕೆ ಎರವಾಗಿದೆ ಎಂಬ ಅಂಶ ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ.

Flood strategy
ಪ್ರವಾಹದ ಬಗ್ಗೆ ರಾಷ್ಟ್ರೀಯ ತಂತ್ರ
author img

By

Published : Aug 19, 2020, 3:21 PM IST

ಹೈದರಾಬಾದ್: ಭಾರೀ ಮಳೆಯಿಂದ ವಿನಾಶಕಾರಿ ಪ್ರವಾಹ ಉಂಟಾಗಿದ್ದು ದೇಶದ ಅನೇಕ ಭಾಗಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಮಳೆಯಿಂದಾಗಿ ದೇಶದ ಅನೇಕ ಭಾಗಗಳ ತಗ್ಗು ಪ್ರದೇಶಗಳು ದೊಡ್ಡ ಜಲಾಶಯಗಳಂತೆ ಕಂಡುಬರುತ್ತಿವೆ. ಭಾರೀ ಪ್ರಮಾಣದಲ್ಲಿ ಕೃಷಿಭೂಮಿಗಳು ಮುಳುಗಿರುವುದು ರೈತರನ್ನು ದುಃಖಕ್ಕೆ ಈಡು ಮಾಡಿದೆ. ದೇಶದ ನಾನಾ ಕಡೆಗಳಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ. ಪ್ರವಾಹದಿಂದಾಗಿ ಬೆಳೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ ಮತ್ತು ಪ್ರಾಣಕ್ಕೆ ಎರವಾಗಿದೆ ಎಂಬ ಅಂಶ ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳಿಂದ ತಿಳಿದುಬಂದಿದೆ.

ಮಹಾರಾಷ್ಟ್ರ, ರಾಜಸ್ತಾನ, ಒಡಿಶಾ ಮತ್ತು ಛತ್ತೀಸ್‌ಗಡ ಸೇರಿದಂತೆ 11 ರಾಜ್ಯಗಳಲ್ಲಿ ಜುಲೈ – ಆಗಸ್ಟ್ ತಿಂಗಳಲ್ಲಿ ಭಾರಿ ಪ್ರವಾಹ ಸಂಭವಿಸಿದೆ. ಇದರಿಂದಾಗಿ ಕನಿಷ್ಠ 868 ಜನರು ಮರಣ ಹೊಂದಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಖಚಿತಪಡಿಸಿವೆ. ಅಸ್ಸಾಂ ಮತ್ತು ಬಿಹಾರ ರಾಜ್ಯಗಳೆರಡರಲ್ಲೇ ಕನಿಷ್ಠ 55 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿರುವ ಮಳೆಯ ತೀವ್ರತೆ ತೆಲುಗು ರಾಜ್ಯಗಳೆರಡಲ್ಲೂ ಭೀತಿ ಉಂಟು ಮಾಡಿದೆ. ಭದ್ರಾದ್ರಿ ಏಜೆನ್ಸಿ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಗೋದಾವರಿ ನದಿಯಲ್ಲಿ ತೀವ್ರಗತಿಯಲ್ಲಿ ಏರುತ್ತಿರುವ ನೀರಿನ ಮಟ್ಟ ಆಂಧ್ರಪ್ರದೇಶಕ್ಕೆ ಎಚ್ಚರಿಕೆಯ ಗಂಟೆ ಬಾರಿಸುತ್ತಿದ್ದರೆ, ತೆಲಂಗಾಣದಲ್ಲಿ ಹಳ್ಳಕೊಳ್ಳಗಳು ಮತ್ತು ಕೆರೆಗಳಂತಹ ಜಲಮೂಲಗಳು ವಿಕೋಪದ ಮಟ್ಟ ದಾಟಿದ್ದು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೊಡ್ಡ ದುರಂತ ಸಂಭವಿಸಿದೆ.

ಭಾರಿ ಪ್ರವಾಹದಿಂದಾಗಿ ಹೆದ್ದಾರಿಗಳು ಮತ್ತು ಕೃಷಿ ಭೂಮಿ ಮುಳುಗುತ್ತಿರುವುದರಿಂದ, ಲಕ್ಷಾಂತರ ಕ್ಯೂಸೆಕ್ ನೀರನ್ನು ಸಾಗರಕ್ಕೆ ಹರಿಯಬಿಡಲಾಗುತ್ತಿದೆ. ಪ್ರತಿವರ್ಷ ಶೇಕಡಾ 65 ಕ್ಕಿಂತ ಹೆಚ್ಚು ಭೂಪ್ರದೇಶವು ಬರಗಾಲದ ಬೇಗೆಗೆ ತುತ್ತಾಗುವ ಭಾರತದಂತಹ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುವುದು ನಿಜಕ್ಕೂ ದುರಂತದ ಸಂಗತಿ ಎನಿಸಿದೆ. ವಾರ್ಷಿಕವಾಗಿ ಕೇವಲ 100 ದಿನಗಳ ಅವಧಿಯಲ್ಲಿ ಮಾತ್ರ ಶೇ 70ರಷ್ಟು ಮಳೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಅಮೂಲ್ಯವಾದ ನೀರನ್ನು ಸಂಗ್ರಹಿಸಲು ಸಾಧ್ಯವಾಗದೆ ನಾವು ಅಪಾರ ನೈಸರ್ಗಿಕ ಸಂಪನ್ಮೂಲವನ್ನು ಕಳೆದುಕೊಳ್ಳುವಂತೆ ಆಗಿದೆ.

ದೇಶದ ಯಾವುದೇ ಭಾಗದಲ್ಲಿ ಸಂಭವಿಸುವ ಪ್ರವಾಹದ ದುರಂತ ತಡೆಗಟ್ಟಬೇಕು ಎಂಬ ಉದ್ದೇಶದಿಂದಲೇ ರಾಷ್ಟ್ರೀಯ ಪ್ರವಾಹ ಆಯೋಗವನ್ನು ಆರೂವರೆ ದಶಕಗಳ ಹಿಂದೆ ಸ್ಥಾಪನೆ ಮಾಡಲಾಯಿತು. ಹದಿನೈದು ವರ್ಷಗಳ ಹಿಂದೆ, ಆಸ್ತಿಪಾಸ್ತಿ ಮತ್ತು ಸಾವುನೋವುಗಳನ್ನು ಕಡಿಮೆ ಮಾಡುವ ಮಹತ್ವದ ಧ್ಯೇಯದೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ( ಎನ್‌ ಡಿ ಎಂ ಎ ) ಅಸ್ತಿತ್ವಕ್ಕೆ ಬಂತು. ಇಷ್ಟಾದರೂ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ. ಪ್ರತಿ ವರ್ಷ ಮತ್ತೆ ಮತ್ತೆ ಸಂಭವಿಸುವ ದುರ್ಘಟನೆಗಳು ಹಾಗೂ ಹೃದಯ ಕಲಕುವಂತಹ ಸರಣಿ ದುರಂತಗಳಿಂದಾಗಿ ಈ ಸಂಸ್ಥೆಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ತಿಳಿದುಬರುತ್ತದೆ.

ಪ್ರವಾಹದಿಂದಾಗಿ ಒಂದೆಡೆ ಬೆಳೆ ಇಳುವರಿ, ಜಾನುವಾರು ಮತ್ತು ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತಿದೆ. ಮತ್ತೊಂದೆಡೆ ಮುಳುಗಡೆಯಾದ ಪ್ರದೇಶಗಳಲ್ಲಿ ಪ್ರವಾಹದ ನೀರು ಇಳಿಮುಖವಾದಂತೆ ಮಾರಕ ಜ್ವರ ಮತ್ತು ಸೋಂಕುಗಳು ಹೆಡೆಯೆತ್ತಿ ಹಲವು ಗ್ರಾಮಗಳನ್ನು ಕರುಣಾಜನಕ ಸ್ಥಿತಿಗೆ ದೂಡುತ್ತವೆ. ಅಧಿಕೃತ ಅಂದಾಜು ಏನೆಂದರೆ, ಕಳೆದ ಆರೂವರೆ ದಶಕಗಳಲ್ಲಿ ದೇಶದಲ್ಲಿ 87 ಕೋಟಿಗೂ ಹೆಚ್ಚು ಜನರು ಪ್ರವಾಹದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸುಮಾರು 10 ಲಕ್ಷದಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

4 ಲಕ್ಷ 70 ಸಾವಿರ ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಗಂಗಾ ಮತ್ತು ಕಾವೇರಿ ನದಿಗಳನ್ನು ಜೋಡಿಸಿದರೆ, 150 ದಿನಗಳವರೆಗೆ 60,000 ಕ್ಯೂಸೆಕ್ಸ್ ನೀರು ಸಂಗ್ರಹ ಮಾಡಿ 40 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು ಎಂಬುದು ಖ್ಯಾತ ತೆಲುಗು ಎಂಜಿನಿಯರ್ ಕೆ.ಎಲ್. ರಾವ್ ಅವರ ಅಭಿಪ್ರಾಯ. ಮೋದಿ ಸರ್ಕಾರ 60 ನದಿಗಳನ್ನು ಜೋಡಣೆಗೆ ಇಂಗಿತ ವ್ಯಕ್ತಡಿಸಿದ್ದರೂ ಸಹ, ದೇಶದ ಉಜ್ವಲ ಭವಿಷ್ಯಕ್ಕೆ ಬಲವಾದ ಅಡಿಪಾಯ ಹಾಕುವ ರೀತಿಯ ಯೋಜನೆಗಳನ್ನು ಕೈಗೆ ಎತ್ತಿಕೊಂಡಿಲ್ಲ ಎಂಬುದು ವಿಷಾದದ ಸಂಗತಿ.

ಸುರೇಶ್ ಪ್ರಭು ಅವರ ಕಾರ್ಯಪಡೆಯ ಪ್ರಕಾರ, ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳ ನಡುವೆ ಒಮ್ಮತ ಮತ್ತು ಸಹಕಾರ ಏರ್ಪಡುವುದು ಅತ್ಯಗತ್ಯ. ಅಲ್ಲದೆ, ಕಾಲುವೆಗಳ ಒತ್ತುವರಿಯನ್ನು ಆದಷ್ಟು ಬೇಗ ತೆರವುಗೊಳಿಸಲು, ಕೆರೆ ಮತ್ತಿತರ ಜಲಮೂಲಗಳ ಮೇಲೆ ನಡೆದಿರುವ ಅತಿಕ್ರಮಣವನ್ನು ತಡೆಯಲು ಕಟ್ಟುನಿಟ್ಟಾದ ಕ್ರಿಯಾ ಯೋಜನೆಗಳಿಗೆ ಸರ್ಕಾರಗಳು ಬದ್ಧವಾಗಿರಬೇಕು. ಜೊತೆಗೆ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕಾದ ಅಗತ್ಯ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.