ETV Bharat / opinion

ಕೋವಿಡ್‌ ನಿರ್ವಹಣೆ: ಆರೋಗ್ಯ ವ್ಯವಸ್ಥೆ ಸಿದ್ಧತೆಯಲ್ಲಿ ನೆರೆಹೊರೆಯವರಿಂದ ಭಾರತಕ್ಕಿರುವ ಪಾಠಗಳು

ಪ್ರತಿಯೊಂದು ದೇಶವೂ ಕೋವಿಡ್‌-19ರ ಭೀತಿಗೆ ಪ್ರತಿಯಾಗಿ ಕೆಲವು ವಿಭಿನ್ನ ಕ್ರಮಗಳನ್ನು ಹೊಂದಿವೆ ಹಾಗೂ ವಿಭಿನ್ನ ಸಂದರ್ಭಗಳ ಮೂಲಕ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿವೆ.

ಕೋವಿಡ್‌-19 ನಿರ್ವಹಣೆ
covid-19-management
author img

By

Published : Aug 20, 2020, 9:01 AM IST

ಹೈದರಾಬಾದ್: ಕೋವಿಡ್‌-19 ಸಾಂಕ್ರಾಮಿಕದ ವೇಗ ಹಾಗೂ ತೀವ್ರತೆಗಳು ಜಗತ್ತಿನ ಪ್ರತಿಯೊಂದು ದೇಶದ ಸಾಮರ್ಥ್ಯಕ್ಕೆ ಆಳ ಸವಾಲನ್ನು ಒಡ್ಡಿವೆ. ಆರೋಗ್ಯ ಸೇವೆಯ ಬೇಡಿಕೆಯಲ್ಲಿಯ ಬೃಹತ್‌ ಪ್ರಮಾಣದ ಏರಿಕೆ ಹಾಗೂ ಅದನ್ನು ಹೊಂದಲೇಬೇಕಾದ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಅನಿವಾರ್ಯತೆಯನ್ನು ಈ ಸೋಂಕು ತಂದಿಟ್ಟಿದೆ. ನೂತನ ಕೊರೊನಾ ವೈರಸ್‌ ಸಾಂಕ್ರಾಮಿಕದ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬಹುತೇಕ ದೇಶಗಳು ಕೆಲವು ರಾಷ್ಟ್ರವ್ಯಾಪಿ ಯೋಜನೆಗಳನ್ನಾದರೂ ಹೊಂದಿವೆ.

ಅಂತಾರಾಷ್ಟ್ರೀಯ ಹಾಗೂ ದೇಶದೊಳಗಿನ ಚಲನವಲನಗಳನ್ನು ಸ್ಥಗಿತಗೊಳಿಸುವುದು ಅಥವಾ ನಿರ್ಬಂಧಿಸುವುದು, ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವುದು, ಸಾರ್ವಜನಿಕ ಸಭೆಗಳನ್ನು ನಿಷೇಧಿಸುವುದು ಅಥವಾ ಪ್ರತ್ಯೇಕವಾಸ (ಕ್ವಾರಂಟೈನ್‌) ವಿಧಿಸುವುದು, ಕೈ ತೊಳೆಯುವುದು ಹಾಗೂ ಮಾಸ್ಕ್‌ಗಳನ್ನು ಧರಿಸುವುದನ್ನು ಪ್ರೋತ್ಸಾಹಿಸುವುದು ಈ ಪೈಕಿ ಕೆಲವು ಕ್ರಮಗಳಾಗಿವೆ.

ಇದರ ಜೊತೆಗೆ ಪ್ರತಿಯೊಂದು ದೇಶವೂ ಕೋವಿಡ್‌-19ರ ಭೀತಿಗೆ ಪ್ರತಿಯಾಗಿ ಕೆಲವು ವಿಭಿನ್ನ ಕ್ರಮಗಳನ್ನು ಹೊಂದಿವೆ ಹಾಗೂ / ಅಥವಾ ವಿಭಿನ್ನ ಸಂದರ್ಭಗಳ ಮೂಲಕ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿವೆ. ಇದರಿದಾಗಿ ಸೋಂಕಿಗೆ ಒಳಗಾಗುವ ಪ್ರಮಾಣ, ಸಾಂಕ್ರಾಮಿಕ ರೇಖೆಯಲ್ಲಿನ ವ್ಯತ್ಯಾಸ ಹಾಗೂ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳಲ್ಲಿ ಏರಿಳಿತಗಳು ಕಂಡುಬಂದಿವೆ. ಪ್ರತಿಯೊಂದು ದೇಶವೂ ವಿಭಿನ್ನ ಮಾನದಂಡಗಳು, ವಿಭಿನ್ನ ಆರೋಗ್ಯ ಆರೈಕೆ ಸಾಮರ್ಥ್ಯ, ವಿಭಿನ್ನ ಪ್ರಯೋಗ ವಿಧಾನಗಳು, ಹಾಗೂ ಸೋಂಕು ಪತ್ತೆ ಹಚ್ಚುವಲ್ಲಿ ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ, ಒಂದು ಸಾಮಾನ್ಯ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದರೆ, ಇವುಗಳ ನಡುವಿನ ವ್ಯತ್ಯಾಸಗಳನ್ನು ಅಳೆಯುವಲ್ಲಿ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೇ ಹೋದ ಪಕ್ಷದಲ್ಲಿ, ಈ ವಿಧಾನಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆಗಳೂ ಇವೆ.

ಸೋಂಕು ಹರಡುವುದನ್ನು ನಿಲ್ಲಿಸುವುದು ಹಾಗೂ ಜೀವಗಳನ್ನು ಉಳಿಸುವ ಉದ್ದೇಶಗಳು ಈಡೇರಬೇಕೆಂದರೆ ಕೆಲವು ನಿರ್ದಿಷ್ಟ ಹಾಗೂ ಗುರಿ ಆಧರಿತ ಕ್ರಮಗಳು ಅವಶ್ಯಕವಾಗಿದ್ದು, ಇವನ್ನು ಅಲ್ಪ ಮತ್ತು ದೀರ್ಘಕಾಲೀನ ಅವಧಿಗೆ ಅನುಸರಿಸಬೇಕಿದೆ. ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ–ವರ್ಲ್ಡ್‌ ಹೆಲ್ತ್‌ ಆರ್ಗನೈಜೇಶನ್‌) ಆರು ಮಹತ್ವದ ಕ್ರಮಗಳನ್ನು ಶಿಫಾರಸು ಮಾಡಿದೆ.

1) ಆರೋಗ್ಯ ಆರೈಕೆ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಪಡೆಯ ವಿಸ್ತರಣೆ, ತರಬೇತಿ, ಹಾಗೂ ಅದನ್ನು ಸೇವೆಯಲ್ಲಿ ತೊಡಗಿಸುವಿಕೆ

2) ಸಮೂಹದ ಹಂತದಲ್ಲಿ ಪ್ರತಿಯೊಂದು ಶಂಕಿತ ಪ್ರಕರಣದ ಜಾಡನ್ನೂ ಪತ್ತೆ ಮಾಡುವ ವ್ಯವಸ್ಥೆಯ ಜಾರಿ

3) ಪ್ರಯೋಗ ಸಾಮರ್ಥ್ಯ ಹಾಗೂ ಲಭ್ಯತೆಯನ್ನು ಸುಗಮಗೊಳಿಸುವುದು

4) ರೋಗಿಗಳನ್ನು ಪ್ರತ್ಯೇಕವಾಗಿರಿಸುವುದು ಹಾಗೂ ಅವರ ಚಿಕಿತ್ಸೆಗೆ ಸೂಕ್ತ ಸೌಲಭ್ಯಗಳನ್ನು ಕೈಗೊಳ್ಳುವುದು

5) ಸಂಪರ್ಕಿತರ ಪ್ರತ್ಯೇಕವಾಸ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಪಷ್ಟ ಸಂವಹನ ಯೋಜನೆ ಹಾಗೂ

6) ಅಗತ್ಯ ಆರೋಗ್ಯ ಸೇವೆಗಳನ್ನು ಕಾಪಾಡಿಕೊಳ್ಳುವ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು.

ದಕ್ಷಿಣ ಹಾಗೂ ಆಗ್ನೇಯ ಏಷ್ಯ ಪ್ರದೇಶದ ಹಲವಾರು ದೇಶಗಳು ಕೋವಿಡ್‌-19 ನಿಯಂತ್ರಣ ಹಾಗೂ ಅದನ್ನು ತೊಡೆದುಹಾಕುವುದನ್ನು ತುಲನಾತ್ಮಕವಾಗಿ ಹಾಗೂ ಉತ್ತಮ ರೀತಿಯಿಂದ ನಿರ್ವಹಿಸಿವೆ. ಭಾರತೀಯ ಪರಿಸ್ಥಿತಿಗೆ ಸರಿಹೊಂದುವ ಹಾಗೂ ಎದ್ದು ಕಾಣುವಂತಹ ನಿರ್ದಿಷ್ಟ ಪಾಠಗಳನ್ನು ಅವು ನೀಡಬಲ್ಲವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಆರು ನಿಯಮಗಳನ್ನು ಪಾಲನೆ ಮಾಡಿರುವ ಮೇಲ್ಕಾಣಿಸಿದ ಪ್ರದೇಶದ ಮೂರು ದೇಶಗಳು ಕೋವಿಡ್‌-19 ನಿರ್ವಹಣೆ ಹಾಗೂ ಸಿದ್ಧತೆಗೆ ಸಂಬಂಧಿಸಿದಂತೆ ಭಾರತದ ರಾಜ್ಯಗಳಿಗೆ ಬೆಲೆಬಾಳುವ ಪಾಠಗಳನ್ನು ನೀಡುವ ಪ್ರಸ್ತಾಪ ಮಾಡಿವೆ.

ನಗರ ದೇಶ ಸಿಂಗಾಪುರವು ಕೋವಿಡ್‌-19 ಸಾಂಕ್ರಾಮಿಕ ತಡೆಗಟ್ಟುವ ಹಾಗೂ ಅದನ್ನು ಎದುರಿಸಲು ಸಿದ್ಧವಾಗುವ ನಿಟ್ಟಿನಲ್ಲಿ ಅತ್ಯುತ್ತಮ ನಗರ ಕೇಂದ್ರಿತ ದೃಷ್ಟಿಕೋನವನ್ನು ಹೊಂದಿದೆ. ಕೋವಿಡ್‌-19 ಪತ್ತೆಯಾದ ಪ್ರಾರಂಭಿಕ ದೇಶಗಳ ಪೈಕಿ ಸಿಂಗಾಪುರ ಕೂಡಾ ಒಂದು. ಈ ವರ್ಷದ ಫೆಬ್ರವರಿ ಪ್ರಾರಂಭದಲ್ಲಿಯೇ ಅಲ್ಲಿ ಸೋಂಕು ಪತ್ತೆಯಾಗಿತ್ತು ಹಾಗೂ ಮೇ-ಜೂನ್‌ ತಿಂಗಳುಗಳಲ್ಲಿ ಗರಿಷ್ಠ ಹಂತ ತಲುಪುವ ಮೂಲಕ, ಆ ಪ್ರದೇಶದಲ್ಲಿ ದೃಢಪಟ್ಟ ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು.

ಅದಾಗ್ಯೂ, ಈ ಲೇಖನವನ್ನು ಬರೆಯುತ್ತಿರುವ ಸಮಯದಲ್ಲಿ, ಸಿಂಗಾಪುರದಲ್ಲಿ ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ 55,580 ಆಗಿದ್ದು, 51,049 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ 27 ಸಾವುಗಳು ಮಾತ್ರ ಸಂಭವಿಸಿವೆ. ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಈ ಕೆಳಗಿನ ಉದ್ದೇಶಪೂರ್ವಕ ಕ್ರಮಗಳನ್ನು ಆ ದೇಶ ತೆಗೆದುಕೊಂಡಿದ್ದು, ಅದು ಇಡೀ ಸರಕಾರದ ಒಟ್ಟು ಪ್ರತಿಕ್ರಿಯೆ ಎನಿಸಿದೆ.

ಸಾರ್ಸ್‌ (ಹಕ್ಕಿಜ್ವರ) ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಗಳಿಸಿದ ಅನುಭವವು ಕೋವಿಡ್‌ ನಿಯಂತ್ರಿಸುವಲ್ಲಿ ಸಿಂಗಾಪುರಕ್ಕೆ ನೆರವಾಗಿದೆ. ಸರಕಾರದ ವಿವಿಧ ಸಂಸ್ಥೆಗಳನ್ನು ಒಳಗೊಳ್ಳುವ ಮೂಲಕ ಸಿಂಗಾಪುರದಲ್ಲಿ ಸುಸಂಘಟಿತ ಯೋಜನೆಗಳನ್ನು ರೂಪಿಸಲಾಯಿತು. ಸೋಂಕಿನ ಪ್ರಸರಣದ ನಿಯಂತ್ರಣ, ಆರೋಗ್ಯ ಕಾರ್ಯಕರ್ತರ ಸ್ಥಳಾಂತರ ಹಾಗೂ ಆರೋಗ್ಯ ಆರೈಕೆ ಮೂಲಸೌಕರ್ಯ ಸಾಮರ್ಥ್ಯವನ್ನು ಬಲಪಡಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ವಿನಿಯೋಗಿಸಲಾಯಿತು. ಅಂತರ್‌ ಇಲಾಖೆ ಸಹಕಾರಕ್ಕೆ ಒಂದು ಉದಾಹರಣೆ ನೀಡುವುದಾದರೆ, ಆರೋಗ್ಯ ಸಚಿವಾಲಯ ಹಾಗೂ ಸಿಂಗಾಪುರ ಪೊಲೀಸ್‌ ಪಡೆಗಳು ಹೆಚ್ಚುವರಿ ಪಡೆಗಳ ನೆರವಿನೊಂದಿಗೆ ತಂಡಗಳಾಗಿ ಕಾರ್ಯ ನಿರ್ವಹಿಸಿದವು. ಸೋಂಕಿತರ ಜಾಡು ಪತ್ತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆಯುವುದು ಹಾಗೂ ಮಾಸ್ಕ್‌ ಧರಿಸುವುದನ್ನು ಒಟ್ಟಾಗಿ ನಿರ್ವಹಿಸಿದವು.

ಇನ್ನು ಸರಕಾರದ ಮಟ್ಟದಲ್ಲಿ, ಸಾರ್ವಜನಿಕ ಆರೋಗ್ಯ ಸಿದ್ಧತಾ ಕ್ಲಿನಿಕ್‌ಗಳನ್ನು ಬಳಸಿಕೊಂಡು ಸಾರ್ವಜನಿಕ ಆರೋಗ್ಯ ಆರೈಕೆ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿಯೊಬ್ಬ ನಾಗರಿಕನನ್ನೂ ಪರೀಕ್ಷೆಗೆ ಒಳಪಡಿಸುವುದು ಸಾಧ್ಯವಾಗದ ಕೆಲಸ ಹಾಗೂ ಇದು ಪರೀಕ್ಷಾ ಕೇಂದ್ರಗಳ ಮೇಲೆ ಹೇಳಲು ಸಾಧ್ಯವಿಲ್ಲದ ಪ್ರಮಾಣದಲ್ಲಿ ಹೊರೆ ಉಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಅತ್ಯಧಿಕ ಅಪಾಯ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ ಹಾಗೂ ಆದ್ಯತೆ ಆಧರಿಸಿ ಅವರನ್ನು ಚಿಕಿತ್ಸೆಗೆ ಒಳಪಡಿಸುವ ಏಕಮುಖಿ ವ್ಯವಸ್ಥೆಯ ಮೂಲಕ ದೊಡ್ಡ ಪ್ರಮಾಣದ ಹೊಣೆಯನ್ನು ಸುಗಮವಾಗಿ ನಿಭಾಯಿಸಲಾಯಿತು.

ಮೊದಲನೆಯದಾಗಿ ದೇಶದ 1000ಕ್ಕೂ ಹೆಚ್ಚಿನ ಮನ್ನಣೆ ಪಡೆದ, ಈ ಪೈಕಿ ದೇಶಾದ್ಯಂತ ಇರುವ ಸರಕಾರಿ ಹಾಗೂ ಖಾಸಗಿ ವಲಯಗಳೆರಡಕ್ಕೂ ಸೇರಿದವುಗಳನ್ನೂ ಒಳಗೊಂಡಂತೆ, ಸಾರ್ವಜನಿಕ ಆರೋಗ್ಯ ಸಿದ್ಧತಾ ಕ್ಲಿನಿಕ್‌ಗಳ ಮೂಲಕ ಇದನ್ನು ಮಾಡಲಾಯಿತು. ಸಾಂಕ್ರಾಮಿಕವು ಆಸ್ಫೋಟಗೊಳ್ಳುವುದಕ್ಕೂ ಮುಂಚೆಯೇ ಪ್ರಾಥಮಿಕ ಆರೈಕೆಯ ವೈದ್ಯರನ್ನು ಇವು ಒದಗಿಸಿದವಲ್ಲದೇ ಹೆಚ್ಚುವರಿಯಾಗಿ ತರಬೇತಿ ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳಲೂ ನೆರವಾದವು.

ತೀವ್ರ ಆದರೆ ಗುರಿಯಾಗಿರಿಸಿದ ಕ್ವಾರಂಟೈನ್‌ ಕ್ರಮಗಳು: ಭಾರತದಲ್ಲಿ ಆದಂತೆ ಸಿಂಗಾಪುರದಲ್ಲಿ ಕೂಡಾ ವಿದೇಶದಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಲ್ಲಿ ದೊಡ್ಡ ಪ್ರಮಾಣದ ಕೋವಿಡ್‌ ಸೋಂಕಿನ ಪ್ರಕರಣಗಳು ಕಂಡು ಬಂದಿದ್ದವು ಹಾಗೂ ಈ ಸೋಂಕಿತರನ್ನು ಪ್ರತ್ಯೇಕವಾಸಕ್ಕೆ ಕಳಿಸುವುದು ಸಾಧ್ಯವಾಗಿರಲಿಲ್ಲ. ಆದರೆ, ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದ ತಂಡವು, ವಲಸೆ ಕಾರ್ಮಿಕರನ್ನು ತೀವ್ರ ಗುರಿಯಾಧರಿತ ಪರೀಕ್ಷೆಗೆ ಒಳಪಡಿಸಿತು.

ಅವರಲ್ಲಿರುವ ಸೋಂಕಿತರನ್ನು ಪತ್ತೆ ಮಾಡಿ, ಅವರನ್ನು ವಿಶೇಷ ಸೌಲಭ್ಯಗಳಿರುವ ಪ್ರತ್ಯೇಕವಾಸಕ್ಕೆ ಕಳಿಸಿತು. ಇದರ ಜೊತೆಗೆ ಕೋವಿಡ್‌ ಪ್ರಕರಣ ದೃಢಪಟ್ಟವರ ನಿಕಟ ಸಂಪರ್ಕಕ್ಕೆ ಬಂದವರನ್ನೂ ಮರು-ಉದ್ದೇಶದ ಸೌಲಭ್ಯಗಳಿರುವಲ್ಲಿ ಪ್ರತ್ಯೇಕವಾಗಿ ಇಡಲಾಯಿತು. ಇದರಿಂದಾಗಿ ವೈರಸ್‌ ಹರಡುವಿಕೆ ಸೀಮಿತವಾಯಿತು ಅಥವಾ ಅದರ ಪ್ರಸರಣದ ಕೊಂಡಿ ಮುರಿದುಹೋಯಿತು.

ಅಸ್ಪಷ್ಟವಾದ ಹಾಗೂ ತಿಳಿವಳಿಕೆಯಲ್ಲಿರುವ ಹಲವಾರು ವೈರುಧ್ಯಗಳ ನಡುವೆಯೇ ತಾರ್ಕಿಕ, ಪಾರದರ್ಶಕ ಹಾಗೂ ಪುನರಾವರ್ತಿತ ಸ್ಥಿರ ಸಾರ್ವಜನಿಕ ಆರೋಗ್ಯ ಸಂವಹನದ ಅವಶ್ಯಕತೆಯನ್ನು ಸಿಂಗಾಪುರ ಸರಕಾರ ಮನಗಂಡಿತ್ತು. ಈ ಸಂವಹನದಲ್ಲಿ ಸಾರ್ವಜನಿಕರು ಹಾಗೂ ನಾಗರಿಕ ಸಮಾಜದ ನಾಯಕರು ಪಾಲ್ಗೊಂಡಿದ್ದರು. ವಿಶ್ವಾಸಾರ್ಹ ಮಾಹಿತಿಯನ್ನು ಸರಕಾರವು ಪದೇಪದೇ ಹಾಗೂ ಸತತವಾಗಿ ರಾಷ್ಟ್ರೀಯ ಮಟ್ಟದ ವಾಟ್ಸಾಪ್‌ ಗ್ರೂಪ್‌ನಲ್ಲಿ ಏಕಮುಖಿ ಸಂದೇಶದ ರೂಪದಲ್ಲಿ ತನ್ನ ನಾಗರಿಕರಿಗೆ ರವಾನಿಸುತ್ತಿತ್ತು.

ಇವೆಲ್ಲಕ್ಕಿಂತ ಮುಖ್ಯವಾದ ಕೆಲಸವೇನೆಂದರೆ ಆರೋಗ್ಯ ಕಾರ್ಯಪಡೆಯ ಬೆಂಬಲ ಪಡೆಯುವಿಕೆ, ಅವರನ್ನು ಒಗ್ಗೂಡಿಸುವುದು ಹಾಗೂ ತೀವ್ರ ರೂಪದಲ್ಲಿ ಕ್ರಿಯಾಶೀಲರಾಗುವುದಾಗಿತ್ತು. ಇಡೀ ಸಾಂಕ್ರಾಮಿಕದ ಅವಧಿಯುದ್ದಕ್ಕೂ, ಇಂತಹ ಆರೋಗ್ಯ ಕಾರ್ಯಕರ್ತರ ಪಡೆಗೆ ಆರೋಗ್ಯ ಕ್ಷೇತ್ರವಲ್ಲದ ವಲಯಗಳಿಂದ ಹೆಚ್ಚುವರಿ ಕೆಲಸಗಾರರು, ಸ್ವಯಂಸೇವಕರನ್ನು ಪೂರಕವಾಗಿ ಒದಗಿಸಲಾಯಿತು. ಆರೋಗ್ಯ ಹಾಗೂ ಸ್ಥಳೀಯ ಆಡಳಿತ ಸೌಲಭ್ಯಗಳಿಂದ ಬಂದಿದ್ದ ಮುಂಚೂಣಿ ವೃತ್ತಿಪರರ ಜೊತೆಗೆ ಇವರೂ ಜೊತೆಗೂಡಿ ಕೆಲಸ ಮಾಡುವಂತೆ ನೋಡಿಕೊಳ್ಳಲಾಯಿತು. ಕೋವಿಡ್‌ ಹಾಗೂ ಕೋವಿಡ್‌ ಅಲ್ಲದ ಆರೋಗ್ಯ ಪರಿಸ್ಥಿತಿಗಳನ್ನು ಜೊತೆಯಾಗಿ ನಿರ್ವಹಿಸುವ ಉದ್ದೇಶದಿಂದ ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ಮುಂಚೂಣಿ ಕೆಲಸಗಾರರನ್ನು ಒಂದೆಡೆ ಕರೆತರಲಾಗಿತ್ತು.

ನೂತನ ಕೊರೊನಾ ವೈರಸ್‌ ಅನ್ನು ವಿಯೆಟ್ಮಾಂ ನಿರ್ವಹಿಸಿದ ರೀತಿ ಜಗತ್ತಿನ ಅತ್ಯಂತ ಯಶಸ್ವಿ ವಿಧಾನವೆನಿಸಿದೆ. ಸೋಂಕಿನ ಪ್ರಕರಣಗಳು ಇತ್ತೀಚಿನ ವಾರಗಳಲ್ಲಿ ಸ್ಥಳೀಯವಾಗಿ ಏರಿಕೆಯಲ್ಲಿದ್ದರೂ, ದೇಶದಲ್ಲಿ ವರದಿಯಾಗಿದ್ದ ಹೊಸ ಸೋಂಕು ಪ್ರಕರಣಗಳೆಲ್ಲವೂ ಏಪ್ರಿಲ್‌ ಮಧ್ಯಭಾಗದಿಂದ ಈಚೆಗೆ ವಿದೇಶದಿಂದ ಬಂದು ಪ್ರತ್ಯೇಕವಾಸಕ್ಕೆ ಒಳಪಟ್ಟವರವೇ ಆಗಿದ್ದವು. ಯಥಾಪ್ರಕಾರ, ವಿಯೆಟ್ನಾಂನ ತಂತ್ರಗಾರಿಕೆಯು ಮತ್ತೆ – ಇಡೀ ಸಮಾಜವನ್ನು ಒಳಗೊಳ್ಳುವಂಥದೇ ಆಗಿತ್ತು. ಇದಕ್ಕೂ ಮುಂಚೆ ಪ್ರಧಾನಮಂತ್ರಿಗಳು, ಸಾಮಾಜಿಕ ಕಾಳಜಿಗಿಂತ ಆರೋಗ್ಯ ಕ್ಷೇತ್ರದ ಮೇಲಿನ ಕಾಳಜಿಗೆ ಹೆಚ್ಚು ಆದ್ಯತೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರತಿಕ್ರಿಯೆ ಯೋಜನೆಯನ್ನು ವಿಯೆಟ್ನಾಂನಾದ್ಯಂತ ಘೋಷಿಸಲಾಯಿತು. ಇದಕ್ಕಾಗಿ ರಾಷ್ಟ್ರೀಯ ಕಾರ್ಯಶೀಲ ಸಮಿತಿಯೊಂದನ್ನು ಈ ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿಡುವ ಉದ್ದೇಶದಿಂದಲೇ ಸ್ಥಾಪಿಸಲಾಯಿತು. ಇಡೀ ಯೋಜನೆಗೆ ಯುದ್ಧ ಘೋಷಣೆಯೊಂದನ್ನು (ಕೊರೊನಾ ವೈರಸ್‌ ವಿರುದ್ಧ ಯುದ್ಧ) ನೀಡಿ, ಅದನ್ನು ಸಾರ್ವಜನಿಕರಿಗೆ ಸಂದೇಶ ರೂಪದಲ್ಲಿ ರವಾನಿಸುತ್ತಾ ಅವರನ್ನು ವೈರಸ್‌ ವಿರುದ್ಧ ಸಂಘಟಿತರನ್ನಾಗಿ ಮಾಡಲಾಯಿತು. ಸರಕಾರದ ವಿವಿಧ ಹಂತಗಳಲ್ಲಿರುವ ಸಂಬಂಧಿಸಿದ ವ್ಯಕ್ತಿಗಳ ಕ್ರಿಯೆಗಳು ಹಾಗೂ ಸಂವಹನಕ್ಕೆ ಇಂತಹದೊಂದು ಕ್ರಮ ಅಗತ್ಯವೂ ಆಗಿತ್ತು. ವೈರಸ್‌ ತೊಡೆದುಹಾಕುವ ಹಾಗೂ ಅದನ್ನು ನಿರ್ಬಂಧಿಸುವ ಯೋಜನೆಯನ್ನು ಸೈನ್ಯ, ಸಾರ್ವಜನಿಕ ಭದ್ರತಾ ಸೇವೆಗಳು ಹಾಗೂ ತಳಮಟ್ಟದ ಸಂಘಟನೆಗಳ ನೆರವಿನಿಂದ ಕ್ಷಿಪ್ರವಾಗಿ ಕಾರ್ಯಗತಗೊಳಿಸಲಾಯಿತು.

ಇದಕ್ಕಾಗಿ ಮೂರು ಹಂತದ ಯೋಜನೆಗಳನ್ನು ಹೊಂದಲಾಗಿತ್ತು

ಕ್ಷಿಪ್ರ ನಿರ್ಬಂಧ: ಬಿಗಿ ನಿರ್ಬಂಧ ಕ್ರಮಗಳನ್ನು ಹಂತಹಂತವಾಗಿ ಜಾರಿಗೊಳಿಸಲಾಯಿತು. ಈ ಪೈಕಿ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ, ದೈಹಿಕ ಅಂತರ ಕಾಯ್ದುಕೊಳ್ಳುವಿಕೆ, ವಿದೇಶಿ ಅತಿಥಿಗಳ ಪ್ರಯಾಣಕ್ಕೆ ನಿರ್ಬಂಧ, ಅಂತಾರಾಷ್ಟ್ರೀಯ ಪ್ರಯಾಣದಿಂದ ಆಗಮಿಸಿದವರಿಗೆ 14 ದಿನಗಳ ಪ್ರತ್ಯೇಕವಾಸ, ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವುದು, ಹಾಗೂ ಸಾರ್ವಜನಿಕ ಸಭೆಗಳನ್ನು ನಿಷೇಧಿಸುವುದು ಸೇರಿದ್ದವು.

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವುದಕ್ಕೆ ಮುನ್ನವೇ ವಿಯೆಟ್ಮಾಂ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿತ್ತು. ಇದರ ಜೊತೆಗೆ ಸಾರ್ವಜನಿಕ ಪ್ರದೇಶಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಹಾಗೂ ವಸತಿ ಸಮುಚ್ಚಯಗಳಲ್ಲಿ ಅಗತ್ಯ ಕೈ ಸ್ಯಾನಿಟೈಸರ್‌ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಯಿತು. ಅಗತ್ಯವಲ್ಲದ ಸೇವೆಗಳನ್ನು ರಾಷ್ಟ್ರಾದ್ಯಂತ ಸ್ಥಗಿತಗೊಳಿಸಲಾಯಿತು ಹಾಗೂ ದೇಶದ ಬಹುತೇಕ ಕಡೆ ಚಲನವಲನದ ಮೇಲೆ ಬಿಗಿ ನಿರ್ಬಂಧಗಳನ್ನು ವಿಧಿಸಲಾಯಿತು.

ಪ್ರಾಥಮಿಕ ಆರೋಗ್ಯ ಹಂತಗಳಲ್ಲಿಯೇ ಆಕ್ರಮಣಶೀಲತೆ ಹಾಗೂ ನಿರ್ಬಂಧ: ಆರ್ಥಿಕತೆ ಹೆಚ್ಚು ಮುಂದುವರಿದ ದೇಶಗಳಲ್ಲಿ ದುಬಾರಿ ಸಾಮೂಹಿಕ ಪರೀಕ್ಷಾ ತಂತ್ರಗಳನ್ನು ಪ್ರಯತ್ನಿಸಲಾಗುತ್ತಿದ್ದರೂ, ವಿಯೆಟ್ಮಾಂ ಮಾತ್ರ ಅತಿ ಹೆಚ್ಚು ಅಪಾಯ ಇರುವ ಸಂಶಯಾಸ್ಪದ ಪ್ರಕರಣಗಳ ಮೇಲೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿತು. ದೇಶಾದ್ಯಂತ ಕೇವಲ 2 ರಷ್ಟಿದ್ದ ಪರೀಕ್ಷಾ ಕೇಂದ್ರಗಳ ಸಾಮರ್ಥ್ಯವನ್ನು ಮೇ ತಿಂಗಳ ಒಳಗೆ 120ಕ್ಕೆ ಹೆಚ್ಚಿಸಿತು.

ಸಾರ್ಸ್‌ ಸೋಂಕು ಹಬ್ಬಿದ ಸಂದರ್ಭದ ಅನುಭವವನ್ನು ಬಳಸಿಕೊಂಡ ವಿಯೆಟ್ಮಾಂ, ವಿಕಾಸವಾಗುತ್ತಿರುವ ವೈರಸ್‌ ಹರಡುವಿಕೆ ಸಾಕ್ಷ್ಯಗಳ ಆಧಾರದ ಮೇಲೆ ತೀವ್ರ ಸೋಂಕಿರುವ ಸಂಶಯಾಸ್ಪದ ಪ್ರದೇಶಗಳಲ್ಲಿ ಸಾಮೂಹಿಕ ಪ್ರತ್ಯೇಕವಾಸ ವ್ಯವಸ್ಥೆಯನ್ನು ಜಾರಿಗೊಳಿಸಿತು. ಇದಕ್ಕಾಗಿ ಅದು 1 ಸೋಂಕು ದೃಢಪಟ್ಟ ಕಡೆ 1000 ಜನರನ್ನು ಪರೀಕ್ಷೆಗೆ ಒಳಪಡಿಸಿ, ಆ ಅಂಕಿಅಂಶಗಳನ್ನು ಮಾನದಂಡವಾಗಿ ಬಳಸಿಕೊಂಡಿತು. ವಿಯೆಟ್ನಾಂನ ಈ ಪರೀಕ್ಷೆ ಪ್ರಮಾಣ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು.

ಸೋಂಕಿತ ವ್ಯಕ್ತಿಯ ವಿವರಗಳು ಲಭ್ಯವಾದ ಕೂಡಲೇ, ಅವನು ಅಥವಾ ಅವಳನ್ನು ವಿಶ್ವವಿದ್ಯಾಲಯದ ವಸತಿ ನಿವಾಸ ಅಥವಾ ಸೈನಿಕ ವಸತಿ ಕೇಂದ್ರಗಳಂತಹ ಸರಕಾರದ ಮಾಲೀಕತ್ವದ ಕೇಂದ್ರಗಳಲ್ಲಿ ಇರಿಸಲಾಯಿತು. ಸೋಂಕಿತನ ಸಂಪರ್ಕದಲ್ಲಿರುವ ಎಲ್ಲಾ ಸಂಪರ್ಕಿತರನ್ನು, ಆ ಸಂದರ್ಭದಲ್ಲಿ ಅವರು ಲಕ್ಷಣರಹಿತರಾಗಿದ್ದರೂ ಸಹ, ಈ ಕೇಂದ್ರಗಳಲ್ಲಿ “ಕಾಯ್ದಿರಿಸಿದ” ವಿಭಾಗಗಳಲ್ಲಿ ಇರಿಸಲಾಯಿತು.

ಇದರ ಜೊತೆಜೊತೆಗೇ ಮೂರನೇ ಹಂತದ ಸಂಪರ್ಕಿತರ ಜಾಡು ಪತ್ತೆ, ಅವರ ಪ್ರತ್ಯೇಕೀಕರಣ ಹಾಗೂ ಅವರನ್ನು ಪ್ರತ್ಯೇಕವಾಸಕ್ಕೆ ಒಳಪಡಿಸುವ ಕೆಲಸಗಳು ನಡೆಯುತ್ತಿದ್ದವು. ಸೋಂಕು ಖಚಿತಪಟ್ಟ ಪ್ರಕರಣಗಳಿಗೆ ಹತ್ತಿರವಾಗಿ ವಾಸಿಸುತ್ತಿರುವ ಜನರನ್ನು, ಕೆಲವೊಮ್ಮೆ ಇಡೀ ಓಣಿ ಅಥವಾ ಹಳ್ಳಿಯ ಜನರನ್ನು, ಕ್ಷಿಪ್ರವಾಗಿ ಪರೀಕ್ಷೆಗೆ ಒಳಪಡಿಸುವ ಹಾಗೂ ಪ್ರತ್ಯೇಕವಾಗಿ ಇರಿಸುವ ಮೂಲಕ, ಸೋಂಕು ಇಡೀ ಸಮುದಾಯಕ್ಕೆ ಹಬ್ಬದಂತೆ ನಿರ್ಬಂಧಿಸಲಾಯಿತು. ಹತ್ತಿರ 4,50,000 ಜನರನ್ನು ಪ್ರತ್ಯೇಕವಾಸದಲ್ಲಿ (ಆಸ್ಪತ್ರೆ ಅಥವಾ ಸರಕಾರ ನಡೆಸುತ್ತಿರುವ ಆರೈಕೆ ಕೇಂದ್ರಗಳು ಅಥವಾ ಸ್ವಯಂ-ಪ್ರತ್ಯೇಕವಾಸ) ಇರಿಸಲಾಗಿತ್ತು.

ಸ್ಪಷ್ಟ, ನಿರಂತರ, ಕ್ರಿಯಾಶೀಲ ಸಾರ್ವಜನಿಕ ಆರೋಗ್ಯ ಸಂದೇಶ ಪ್ರಕ್ರಿಯೆ: ವಿವಿಧ ಫಲಾನುಭವಿಗಳನ್ನು ಒಳಗೊಂಡ ಸಮುದಾಯ ಆಧರಿತ ಪ್ರತಿಕ್ರಿಯೆ ವ್ಯವಸ್ಥೆ ಮಹತ್ವದ್ದು ಎಂಬುದನ್ನು ಸ್ಪಷ್ಟ, ನಿರಂತರ ಹಾಗೂ ಕ್ರಿಯಾಶೀಲ ಸಾರ್ವಜನಿಕ ಆರೋಗ್ಯ ಸಂದೇಶ ರವಾನೆ ಪ್ರಕ್ರಿಯೆ ಸಾಬೀತುಪಡಿಸಿದೆ. ಪ್ರಾರಂಭಿಕ ಹಂತದಿಂದಲೇ, ವೈರಸ್‌ ಹಾಗೂ ತಂತ್ರಗಾರಿಕೆ ಸಂವಹನಗಳು ಪಾರದರ್ಶಕವಾಗಿದ್ದವು. ರೋಗಲಕ್ಷಣಗಳು, ಸುರಕ್ಷತಾ ಕ್ರಮಗಳು, ಹಾಗೂ ಪರೀಕ್ಷಾ ಕೇಂದ್ರಗಳ ವಿವರಗಳನ್ನು ಸಮೂಹ ಮಾಧ್ಯಮಗಳು, ಸರಕಾರಿ ವೆಬ್‌ಸೈಟ್‌ಗಳು, ಆಸ್ಪತ್ರೆಯಂತಹ ತಳಮಟ್ಟದ ಸಾರ್ವಜನಿಕ ಸಂಸ್ಥೆಗಳು, ಅಧಿಕಾರಿಗಳು, ವಸತಿ ಸಮುಚ್ಚಯಗಳು ಹಾಗೂ ಮಾರುಕಟ್ಟೆಗಳ ಮೂಲಕ ಮೊಬೈಲ್‌ಗಳಿಗೆ ಪಠ್ಯ ಸಂದೇಶ ಹಾಗೂ ಧ್ವನಿ ಸಂದೇಶಗಳ ರೂಪದಲ್ಲಿ ರವಾನಿಸಲಾಗುತ್ತಿತ್ತು.

ಈ ಸುಸಂಘಟಿತ, ಬಹು ಮಾಧ್ಯಮ ಬಳಕೆ ಹಾಗೂ ನಿರಂತರ ಸುದ್ದಿಗಳ ಹರಿವು ಸಾರ್ವಜನಿಕರ ವಿಶ್ವಾಸ ಗಳಿಸಲು ನೆರವಾಯಿತಲ್ಲದೇ, ಇಡೀ ಸಮಾಜವು ಸುರಕ್ಷತೆ ಹಾಗೂ ನಿರ್ಬಂಧ ಕ್ರಮಗಳನ್ನು ಪಾಲಿಸಲು ಅನುವಾಯಿತು. ಪ್ರತಿಯೊಬ್ಬ ನಾಗರಿಕನು, ಅದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದೇ ಇರಲಿ ಅಥವಾ ಪ್ರತ್ಯೇಕವಾಸದಲ್ಲಿ ವಾರಗಟ್ಟಲೇ ಇರುವುದಾಗಿರಲಿ, ಇಂತಹ ನಿಯಮಗಳನ್ನು ಪಾಲಿಸುವುದು ತನ್ನ ಕರ್ತವ್ಯ ಎಂದು ಭಾವಿಸಲು ಸಹಕಾರಿಯಾಯಿತು.

ಇನ್ನು ನಮಗೆ ಹತ್ತಿರುವಾಗಿರುವ ದೇಶಗಳ ಪೈಕಿ ಶ್ರೀಲಂಕಾ ನಮಗಿಂತ ಸಾಕಷ್ಟು ಸಣ್ಣದಿರುವ ದ್ವೀಪ ದೇಶವಾಗಿದ್ದು, ಸಾಂಕ್ರಾಮಿಕವನ್ನು ನಮಗಿಂತ ಅತ್ಯುತ್ತಮವಾಗಿ ನಿರ್ಬಂಧಿಸುವಲ್ಲಿ ಉತ್ತಮ ನಿರ್ವಹಣೆಯನ್ನು ತೋರಿದೆ. ದೇಶಾದ್ಯಂತ ಸುಲಭವಾಗಿ ತಲುಪಬಲ್ಲ ಆಸ್ಪತ್ರೆಗಳ ಜಾಲ, ಉನ್ನತ ಅರ್ಹತೆ ಹೊಂದಿರುವ ವೈದ್ಯಕೀಯ ಸಿಬ್ಬಂದಿ, ಹಾಗೂ ಸ್ಥಳೀಯ ಸರಕಾರಗಳ ಸಮರ್ಪಣಾ ಭಾವದ ಸಾರ್ವಜನಿಕ ಆರೋಗ್ಯ ಇನ್ಸ್‌ಪೆಕ್ಟರ್‌ಗಳಿಂದಾಗಿ ಇಡೀ ಪ್ರದೇಶದಲ್ಲಿ ಶ್ರೀಲಂಕಾದ ಆರೋಗ್ಯ ಆರೈಕೆ ವ್ಯವಸ್ಥೆಯು ಅತ್ಯುನ್ನತ ಸ್ಥಾನದಲ್ಲಿದೆ. ಹೀಗಿದ್ದಾಗ್ಯೂ, ದೊಡ್ಡ ಮಟ್ಟದಲ್ಲಿ ವ್ಯಾಪಿಸಬಲ್ಲ ಸೋಂಕನ್ನು ನಿಭಾಯಿಸುವ ಸಾಂಸ್ಥಿಕ ಸಾಮರ್ಥ್ಯದ ಕೊರತೆಯಿಂದಾಗಿ ಅತ್ಯಂತ ಕಟ್ಟುನಿಟ್ಟಿನ ವೈರಸ್‌-ನಿಯಂತ್ರಣ ಕ್ರಮಗಳ ಅವಶ್ಯಕತೆ ಇತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರತಿಕ್ರಿಯೆ ಅವಶ್ಯಕತೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಶ್ರೀಲಂಕಾ ಸೈನ್ಯ, ಪ್ರತ್ಯೇಕವಾಸ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುವುದರಿಂದ ಹಿಡಿದು ಸಂಪರ್ಕಿತರ ಜಾಡು ಪತ್ತೆಯವರೆಗಿನ ಹೊಣೆಗಾರಿಕೆ ನಿರ್ವಹಿಸಿತು. ಕರ್ಫ್ಯೂ, ನಿರ್ಬಂಧಗಳ ಉಲ್ಲಂಘನೆ ಪ್ರಕರಣಗಳಿಗೆ ಸ್ಪಂದನೆ ಹಾಗೂ ಸಂಶಯಾಸದ್ಪದ ಉಲ್ಲಂಘನೆಕೋರರನ್ನು ಬಂಧಿಸುವ ಕೆಲಸಗಳನ್ನು ಪೊಲೀಸರು ಯಶಸ್ವಿಯಾಗಿ ನಿರ್ವಹಿಸಲು ಅನುವಾಯಿತು.

ಇನ್ನು ಸರಕಾರ, ದೇಶದೊಳಗೆ ಬರುವ ವಿಮಾನಗಳನ್ನು ರದ್ದುಪಡಿಸುವುದು ಹಾಗೂ ಮಾರುಕಟ್ಟೆ ಮತ್ತು ಸಾರ್ವಜನಿಕ ಸಾರಿಗೆ ನಿಲ್ದಾಣಗಳಲ್ಲಿ ನಿಯಮಿತವಾಗಿ ಸೋಂಕುನಿರೋಧಕಗಳನ್ನು ಸಿಂಪಡಿಸುವಂತಹ ಬಿಗಿ ಕ್ರಮಗಳನ್ನು ಅಳವಡಿಸಿಕೊಂಡಿತು. ಇವೆಲ್ಲ ಕ್ರಮಗಳಿಂದಾಗಿ ಸೋಂಕು ಪ್ರಸರಣ ನಿರ್ಬಂಧಿಸಲ್ಪಟ್ಟು ಸೈನ್ಯ ಹಾಗೂ ಪೊಲೀಸ್‌ ಪಡೆಗಳು ಸಾರ್ವಜನಿಕರ ಪ್ರಶಂಸೆ ಪಡೆಯುವಂತಾಯಿತು.

ಈ ದೇಶದಿಂದ ಭಾರತದ ರಾಜ್ಯಗಳು ಕಲಿಯಲೇಬೇಕಾದ ಎರಡು ನಿರಂತರ ಪಾಠಗಳಿವೆ. ಮೊದಲನೆಯದು, ಸ್ಥಾಪಿತ ರೋಗ ಕಣ್ಗಾವಲು ವ್ಯವಸ್ಥೆ. ತನ್ನ ಹಿಂದಿನ ಹಲವಾರು ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಅನುಭವಗಳ ಹಿನ್ನೆಲೆಯಲ್ಲಿ, ಬಲವಾದ ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆಯ ಮೇಲೆ ಶ್ರೀಲಂಕಾ ಹೂಡಿಕೆ ಮಾಡಿದೆ. ಪ್ರಸಕ್ತ ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಇದು ಅದರ ನೆರವಿಗೆ ಬಂದಿರುವುದು ಸಾಬೀತಾಗಿದೆ.

ಮುಕ್ತ ತಂತ್ರಾಂಶ DHIS2 ತಳಹದಿಯ ಮೇಲೆ ಆ ದೇಶ 2020ರ ಪ್ರಾರಂಭಿಕ ದಿನಗಳಲ್ಲಿಯೇ ಇಂತಹದೊಂದು ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಾಗಿತ್ತು. ಜನವರಿ ತಿಂಗಳಲ್ಲಿ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗುತ್ತಲೇ, ಸಂಭವನೀಯ ಕೋವಿಡ್‌ 19 ಶಂಕಿತರ ಪತ್ತೆ ಹಾಗೂ ಸಾಂಕ್ರಾಮಿಕದ ಚಲನವಲನವನ್ನು ಕಟ್ಟುನಿಟ್ಟಾಗಿ ಗಮನಿಸಲಾಗುತ್ತಿತ್ತು. ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಯಾವುದಾದರೂ ಪ್ರಕರಣಗಳಿವೆಯೆ ಎಂಬುದನ್ನು ತಿಳಿಯಲು ಸಾರ್ವಜನಿಕ ಆರೋಗ್ಯ ಕಣ್ಗಾವಲು ವ್ಯವಸ್ಥೆಯನ್ನು ಸರಕಾರ ಆಗಲೇ ಸಕ್ರಿಯಗೊಳಿಸಿಯಾಗಿತ್ತು. ಪ್ರಕರಣಗಳು ಪತ್ತೆಯಾದ ಕೂಡಲೇ, ಅಗತ್ಯ ರೋಗಪತ್ತೆ ಪರೀಕ್ಷೆಗಳನ್ನು ನಡೆಸುವ ಮೂಲಕ ಅವು ಶಂಕಿತ ಕೋವಿಡ್‌-19 ಸಂಬಂಧಿ ಪ್ರಕರಣಗಳು ಹೌದೂ ಅಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತಿತ್ತು.

ಎರಡನೆಯದಾಗಿ, ತನ್ನ ಪ್ರಾಥಮಿಕ ಆರೋಗ್ಯ ಜಾಲದ ಮೇಲೆ ಶ್ರೀಲಂಕಾದ ಸತತ ವಿಶ್ವಾಸ. ಸೋಂಕು ವಿಸ್ಫೋಟದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಕ್ಲಿನಿಕ್‌ಗಳು ಮುಚ್ಚಿರುವಾಗ, ನಿಯಮಿತ ಆರೋಗ್ಯ ಪರೀಕ್ಷೆಗಳು ಹಾಗೂ ಔಷಧಿ ವಿತರಣೆಯನ್ನು ಸರಕಾರ ನೇರವಾಗಿ ರೋಗಿಗಳಿರುವ ಮನೆಗಳಿಗೇ ಒದಗಿಸತೊಡಗಿತು. ಕೋವಿಡ್‌-19 ರಹಿತ ರೋಗಿಗಳು ಆರೋಗ್ಯ ಆರೈಕೆ ಕಾರ್ಯಕರ್ತರ ಸಲಹೆ ಪಡೆಯಲು ಅನುವಾಗುವಂತೆ ಹಾಟ್‌ಲೈನ್‌ ವ್ಯವಸ್ಥೆಯನ್ನು ಸೃಷ್ಟಿಸಿ ಅವರಿಗೆ ಕೋವಿಡ್‌ರಹಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಯಿತು.

ದೇಶವೊಂದರ ಆರೋಗ್ಯ ವ್ಯವಸ್ಥೆಗಳನ್ನು ಫುಟ್‌ಬಾಲ್‌ನಂತಹ ಆಟದಲ್ಲಿ ಒಂದು ಗೋಲು ಗಳಿಸಲು ಹಾಗೂ ಪಂದ್ಯಾವಳಿ ಗೆಲ್ಲಲು ಹಲವಾರು ಆಟಗಾರರು ಹೇಗೆ ತಮ್ಮ ಕೊಡುಗೆ ನೀಡುತ್ತಾರೆಯೋ, ಅಂತಹ ಕ್ರೀಡಾಸ್ಫೂರ್ತಿಯ ಜೊತೆಗೆ ಹೋಲಿಸುವ ಆಸಕ್ತಿಕರ ಸಾಮ್ಯ ಒಂದಿದೆ. ಅದೇ ರೀತಿ, ಕೋವಿಡ್‌-19ರ ಸಂದರ್ಭದಲ್ಲಿ ಆರೋಗ್ಯ ಆರೈಕೆಗೆ ಅವಕಾಶ ಹಾಗೂ ಅದನ್ನು ಪಡೆಯುವುದನ್ನು ಸಾಧ್ಯವಾಗಿಸಲು ಕೂಡಾ ವಿವಿಧ ರಂಗಗಳ ವ್ಯಕ್ತಿಗಳು ಒಂದೇ ಉದ್ದೇಶದಿಂದ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.

ಆರೋಗ್ಯ ಆರೈಕೆ ಹಾಗೂ ರೋಗ ಸಂಬಂಧಿ ಸವಾಲುಗಳನ್ನು ವಿವಿಧ ಹಂತಗಳಲ್ಲಿ ನಿರೀಕ್ಷಿಸುವುದು, ಇಲ್ಲವಾಗಿಸುವುದು, ನಿರ್ಬಂಧಿಸುವುದು ಹಾಗೂ ಪ್ರತಿಕ್ರಿಯಿಸುವುದನ್ನು ಮಾಡಬೇಕಾಗುತ್ತದೆ. ತಂಡ ಹೆಚ್ಚು ಸಮನ್ವಯತೆ ಹಾಗೂ ಒಗ್ಗಟ್ಟನ್ನು ಹೊಂದಿದಷ್ಟೂ ರೋಗ ಹರಡುವಿಕೆ ವಿರುದ್ಧ ಹೋರಾಡಲು ಸೂಕ್ತ ತಂತ್ರಗಾರಿಕೆಗಳನ್ನು ಹೊಂದುವುದು ಹಾಗೂ ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುವುದು ಸುಲಭವಾಗುತ್ತದೆ. ಈ ಗುರಿಯಾಧರಿತ ಕ್ರಿಯೆಗಳು ಶ್ರೀಲಂಕಾದ ಆರೋಗ್ಯ ಆರೈಕೆ ವ್ಯವಸ್ಥೆಯ ಮೇಲಿನ ಒತ್ತಡವನ್ನು ಇಳಿಸಲು ನೆರವಾದವಲ್ಲದೇ, ಮುಂದಿನ ಹಂತದ ರೋಗ ನಿಯಂತ್ರಣದತ್ತ ಹೊರಟಿರುವ ಭಾರತದ ರಾಜ್ಯಗಳಿಗೂ ಈ ವಿಧಾನಗಳು ಸೂಕ್ತವಾಗಿ ಅನ್ವಯವಾಗಬಲ್ಲವು.

- ಡಾ. ಪ್ರಿಯಾ ಸುಬ್ರಮಣ್ಯಂ, ಹಿರಿಯ ಸಾರ್ವಜನಿಕ ಆರೋಗ್ಯ ವಿಜ್ಞಾನಿ, ಪಿಎಚ್‌ಎಫ್‌ಐ

(ಲೇಖಕರು ಭಾರತದ ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ನಲ್ಲಿ ಹಿರಿಯ ವಿಜ್ಞಾನಿಯಾಗಿದ್ದು, ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅವರ ವೈಯಕ್ತಿಕ.)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.