ವಾಷಿಂಗ್ಟನ್( ಅಮೆರಿಕ): ಟಿಂಡರ್ ಹೊಸ "ಬ್ಲೈಂಡ್ ಡೇಟ್" ಎಂಬ ವೈಶಿಷ್ಟ್ಯವನ್ನು ಸೇರ್ಪಡೆ ಮಾಡುತ್ತಿದೆ. ಬ್ಲೈಂಡ್ ಡೇಟ್ ಹೊಸ ಫೀಚರ್ ಬಳಕೆ ಮಾಡಿಕೊಂಡು ಚಾಟ್ ಲೈನ್ಅಪ್ಗೂ ಮೊದಲು ತಾವು ಹೇಗೆ ಕಾಣುತ್ತೇವೆ ಎಂಬುದನ್ನು ಈ ಆಪ್ಸನ್ ಮೂಲಕ ರಿಹರ್ಸಲ್ ಮಾಡಿಕೊಳ್ಳಬಹುದು.
ದಿ ವರ್ಜ್ ಪ್ರಕಾರ, ಬ್ಲೈಂಡ್ ಡೇಟ್ ಎಂಬುದು ಟಿಂಡರ್‌ನ ಫಾಸ್ಟ್ ಚಾಟ್ ಲೈನ್‌ಅಪ್‌ಗೆ ಇತ್ತೀಚಿನ ಹೊಸ ಸೇರ್ಪಡೆಯಾಗಿದೆ. ಅದು ಹಾಟ್ ಟೇಕ್ಸ್ ಮತ್ತು ಸ್ವೈಪ್ ನೈಟ್‌ನಂತಹ ಅಪ್ಲಿಕೇಶನ್‌ನಲ್ಲಿನ ಇತರ ಅನುಭವಗಳನ್ನು ಒಳಗೊಂಡಿದೆ.
ಈ ಅಪ್ಲಿಕೇಷನ್ ಬಳಕೆದಾರರು ಸಾಮಾನ್ಯವಾಗಿ ಇಬ್ಬರಲ್ಲೂ ಇರುವ ಕಾಮನ್ ಅಂಶಗಳ ಮೇಲೆ ತಮ್ಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರ ಅನ್ವಯವೇ ಪ್ರಾಂಪ್ಟ್‌ಗಳಿಗೆ ಉತ್ತರಿಸುತ್ತಾರೆ ಮತ್ತು ಆಟಗಳನ್ನು ಆಡುತ್ತಾರೆ. ಬಳಕೆದಾರರು ತಮ್ಮ ಪ್ರೊಪಲ್ಗಳಿಗೆ ಹೊಂದಾಣಿಕೆ ಆದ ಬಳಿಕವೇ ಅಂತಿಮವಾಗಿ ಪರಸ್ಪರರ ಫೋಟೋಗಳನ್ನು ನೋಡಲು ಸಾಧ್ಯವಾಗುತ್ತದೆ.
ಅತ್ಯಾಧುನಿಕ ಡೇಟಿಂಗ್ಗೆ ಅವಕಾಶ ಕಲ್ಪಿಸುವ ಈ ಆ್ಯಪ್ "Gen Z ನ ಆಧುನಿಕ ಡೇಟಿಂಗ್ ಅಭ್ಯಾಸಗಳನ್ನು ರೂಢಿಸುವಂತೆ ಆ್ಯಪ್ ವಿನ್ಯಾಸಗೊಳಿಸಿದೆ. ಹೊಸ ವಿನ್ಯಾಸಗಳ ಅವಳವಡಿಕೆಯಿಂದ ಶೇ 40 ರಷ್ಟು ಬಳಕೆದಾರರಿಗೆ ಅವರ ಫೋಟೋಗಳನ್ನು, ಇಮೇಜ್ಗಳನ್ನ ಹಾಗೂ ಪ್ರೊಪೈಲ್ ಮ್ಯಾಚ್ಗಳನ್ನು ಸುಲಭವಾಗಿ ಮಾಡಿಕೊಂಡಿದ್ದು, ತಮ್ಮ ಜೋಡಿಗಳೊಂದಿಗೆ ಸುಲಭ ಸಂವಹನ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಟಿಂಡರ್ ಹೇಳಿಕೊಂಡಿದೆ. ಟಿಂಡರ್ ಬಳಕೆದಾರರು ವಿಶ್ವಾದ್ಯಂತ ಹೊಸ ವೈಶಿಷ್ಠ್ಯಗಳ ಅನುಭವ ಪಡೆದುಕೊಳ್ಳಬಹುದು ಎಂದು ಅಪ್ಲಿಕೇಷನ್ ನಿರ್ಮಾತೃಗಳು ಹೇಳಿದ್ದಾರೆ.
ಇದನ್ನು ಓದಿ:ವರ್ಷದ ಮೊದಲ ರಾಕೆಟ್ ಉಡ್ಡಯನಕ್ಕೆ ಇನ್ನು 6 ದಿನ ಬಾಕಿ.. ಫೆ.14ರಂದು ನಭಕ್ಕೆ ಚಿಮ್ಮಲಿದೆ ಪಿಎಸ್ಎಲ್ವಿ ಸಿ-52