ನವದೆಹಲಿ: ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಆ್ಯಪಲ್ ಐಫೋನ್ 12 ಮಿನಿ ಉತ್ಪಾದನೆಯನ್ನು ಕಡಿಮೆಗೊಳಿಸಿದೆ. ಬಳಕೆದಾರರಲ್ಲಿ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಕಂಪನಿ ಕಳೆದ ವರ್ಷ ಆ್ಯಪಲ್ನ ಹೊಸದಾಗಿ ಸಣ್ಣ ಗಾತ್ರದ ಐಫೋನ್ ಮಾದರಿಗಳನ್ನು ಆನ್ಲೈನ್ನಲ್ಲಿ ಬಿಟ್ಟಿತ್ತು. ಆದರೆ, ಅದು ಅಷ್ಟೋಂದು ಜನಪ್ರಿಯತೆಯನ್ನು ಪಡೆದಿಲ್ಲ. ಇದೀಗ ಕಂಪನಿಯ ಜನಪ್ರಿಯತೆಯ ಬಗ್ಗೆ ಜನರಲ್ಲಿ ಹೆಚ್ಚು ಕಾಳಜಿ ವಹಿಸಲು ಯತ್ನಿಸುತ್ತಿದೆ ಎಂದು ಮಾಶಬಲ್ ಇಂಡಿಯಾ ವರದಿ ಮಾಡಿದೆ.
ವರ್ಷದ ಮೊದಲಾರ್ಧದಲ್ಲಿ ಐಫೋನ್ 12 ಮಿನಿ ಉತ್ಪಾದನೆಯನ್ನು ಕಡಿಮೆ ಮಾಡಲು ಆಪಲ್ ತನ್ನ ಉತ್ಪಾದನಾ ಪಾಲುದಾರರನ್ನು ಕೇಳಿದೆ. ಐಫೋನ್ 12 ಮಿನಿ ಉತ್ಪಾದನೆಯನ್ನು ಶೇ. 70 ರಷ್ಟು ಕಡಿತಗೊಳಿಸಲಾಗಿದ್ದು, ಒಟ್ಟು ಐಫೋನ್ 12 ಉತ್ಪಾದನೆಯಲ್ಲಿ ಶೇ. 20 ರಷ್ಟು ಕಡಿತವಾಗಿದೆ. 2021 ರ ಮೊದಲಾರ್ಧದಲ್ಲಿ 96 ಮಿಲಿಯನ್ ಐಫೋನ್ಗಳನ್ನು ಉತ್ಪಾದಿಸಲು ಬಯಸಿದೆ ಎಂದು ಕಂಪನಿಯು ಪೂರೈಕೆದಾರರಿಗೆ ತಿಳಿಸಿದೆ ಎಂದು ಮಾಷಬಲ್ ಇಂಡಿಯಾ ವರದಿ ಮಾಡಿದೆ.
ಐಫೋನ್ 11 ಮತ್ತು 2020 ಐಫೋನ್ ಎಸ್‌ಇಯಂತಹ ಹಳೆಯ ಮಾದರಿಗಳ ಜೊತೆಗೆ ಸಂಪೂರ್ಣ ಐಫೋನ್ 12 ಶ್ರೇಣಿಯನ್ನು ಒಳಗೊಂಡಿರುತ್ತದೆ. ಕಡಿಮೆಯಾದ ಬೇಡಿಕೆ ಹಿನ್ನೆಲೆಯಲ್ಲಿ ಕಂಪನಿ ಸುಮಾರು 75 ಮಿಲಿಯನ್ ಯೂನಿಟ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ.