ETV Bharat / lifestyle

177,000 ವರ್ಷಗಳ ಹಿಂದೆ ಭಾರತದಲ್ಲಿ ಅಚ್ಯುಲಿಯನ್​ ಕಲ್ಲಿನ ಟೂಲ್​ಕಿಟ್​ ಬಳಕೆ: ಅಧ್ಯಯನ

ಸುಮಾರು 177,000 ವರ್ಷಗಳ ಹಿಂದೆ ಭಾರತದಲ್ಲಿ ಅಚ್ಯುಲಿಯನ್​ ಕಲ್ಲಿನ ಟೂಲ್​ಕಿಟ್​ ಬಳಕೆ ಮಾಡಲಾಗ್ತಿತ್ತು ಎಂಬ ಮಹತ್ವದ ಮಾಹಿತಿ ಇದೀಗ ಅಧ್ಯಯನವೊಂದರಿಂದ ತಿಳಿದು ಬಂದಿದೆ.

author img

By

Published : Oct 6, 2021, 8:00 PM IST

Acheulean
Acheulean

ನವದೆಹಲಿ: ಬುಧವಾರ ಪ್ರಕಟಗೊಂಡಿರುವ ಅಧ್ಯಯನವೊಂದರ ಪ್ರಕಾರ ಪ್ರಾಚೀನ ಮಾನವರು ಅಚ್ಯುಲಿಯನ್​ ಕಲ್ಲಿನ ಟೂಲ್​ಕಿಟ್​​ ಬಳಕೆ ಮಾಡ್ತಿದ್ದರು. ಭಾರತದಲ್ಲಿ ಸುಮಾರು 177,000 ವರ್ಷಗಳ ಹಿಂದೆ ಏಷ್ಯಾದಾದ್ಯಂತ ಈ ಜನಾಂಗ ಇತ್ತು ಎಂದು ತಿಳಿಸಿದೆ.

ಅಧ್ಯಯನದ ಪ್ರಕಾರ ಅಚ್ಯುಲಿಯನ್​ ಕಲ್ಲಿನ ಟೂಲ್​ಕಿಟ್​ ಬಳಸಿದ ಪ್ರಾಚೀನ ಮಾನವ ಜನಾಂಗ ಭಾರತದಲ್ಲಿ ಸುಮಾರು 177,000 ವರ್ಷಗಳ ಹಿಂದಿನವರೆಗೂ ಇತ್ತು. ಏಷ್ಯಾದಾದ್ಯಂತ ಸುದೀರ್ಘ ಬಾಳಿಕೆ ಬರುವ ಉಪಕರಣ ತಯಾರಿಕೆ ಸಂಪ್ರದಾಯ ಜಾರಿಯಲ್ಲಿತ್ತು ಎಂದಿದೆ.

ಜರ್ಮನಿಯ ಮ್ಯಾಕ್ಸ್​ ಪ್ಲಾಂಕ್​ ಇನ್ಸ್​​ಟಿಟ್ಯೂಟ್​ ಫಾರ್​​ ಸೈನ್ಸ್​ ಆಫ್​ ಹ್ಯೂಮನ್​ ಹಿಸ್ಟರಿ ನೇತೃತ್ವದಲ್ಲಿ ಇತ್ತೀಚಿಗೆ ರಾಜಸ್ಥಾನ ಥಾರ್​ ಮರಭೂಮಿಯಲ್ಲಿ ಸಂಶೋಧನೆ ನಡೆಸಲಾಗಿದ್ದು, ಅಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಮಾಹಿತಿ ಹಂಚಿಕೊಂಡಿದೆ.

ಈ ಅಚ್ಯುಲಿಯನ್ ಸಂಪ್ರದಾಯ ಆಫ್ರಿಕಾದ ಆಚೆಗೆ ವಿಸ್ತರಣೆ ಮಾಡಲು ಆ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಪುರಾತನ ಮಾನವ ಜನಸಂಖ್ಯೆಯ ಪಳೆಯುಳಿಕೆಗಳು ಅತ್ಯಂತ ವಿರಳವಾಗಿದ್ದು, ಕಲ್ಲಿನ ಟೂಲ್​ ಕಿಟ್​​ಗಳು ಬದಲಾವಣೆಯ ಪ್ರತೀಕವಾಗಿದ್ದವು ಎನ್ನಲಾಗಿದೆ.

ಇದನ್ನೂ ಓದಿರಿ: ಪತ್ನಿ ಮೇಲಿನ ಕೋಪ.. ಆತ್ಮಾಹುತಿ ಬಾಂಬ್​ನಿಂದ ಹೆಂಡತಿ ಕೊಲೆ ಮಾಡಿದ ಗಂಡ!

ಮಾಹಿತಿ ಪ್ರಕಾರ ಆಫ್ರಿಕಾದಲ್ಲಿ 241,000 ವರ್ಷಗಳ ಹಿಂದೆ ಮತ್ತು 190,000 ವರ್ಷಗಳ ಹಿಂದೆ ಅರೇಬಿಯಾದಲ್ಲಿ ಕಣ್ಮರೆಯಾದ ನಂತರ ಥಾರ್​ ಮರಭೂಮಿಯಲ್ಲಿ ಅಚ್ಯುಲಿಯನ್​ ಜನಸಂಖ್ಯೆ ಇತ್ತು ಎಂದು ಅಧ್ಯಯನ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.