ETV Bharat / lifestyle

ನೆಟ್‌ಫ್ಲಿಕ್ಸ್‌ನಿಂದ ಮತ್ತೆರಡು ಹೊಸ ಗೇಮ್ಸ್​ ಬಿಡುಗಡೆ - ಜಾಗತಿಕವಾಗಿ ಗ್ರಾಹಕರನ್ನು ಸೆಳೆಯಲು ಮುಂದಾದ ನೆಟ್​​ಫ್ಲಿಕ್ಸ್​

ನೆಟ್‌ಫ್ಲಿಕ್ಸ್ ತನ್ನ ಗೇಮಿಂಗ್ ಲೈನ್ - ಅಪ್ ಅನ್ನು ವಿಸ್ತರಿಸಿಕೊಂಡಿದ್ದು, ಹೆಕ್ಸ್‌ಟೆಕ್ ಮೇಹೆಮ್ ಮತ್ತು ಡಂಜಿಯನ್ ಡ್ವಾರ್ವ್ಸ್ ಎಂಬ ಎರಡು ಹೊಸ ಗೇಮ್‌ಗಳನ್ನು ಪರಿಚಯಿಸಿದೆ. ಜೊತೆಗೆ ಜಾಗತಿಕವಾಗಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

etflix expanding its gaming line-up, adds Riot Games
ನೆಟ್‌ಫ್ಲಿಕ್ಸ್‌ನಿಂದ ಮತ್ತೆರಡು ಹೊಸ ಗೇಮ್‌ಗಳು ಬಿಡುಗಡೆ
author img

By

Published : Feb 3, 2022, 8:40 AM IST

Updated : Feb 3, 2022, 8:54 AM IST

ಸ್ಯಾನ್ ಫ್ರಾನ್ಸಿಸ್ಕೋ: ಸ್ಟ್ರೀಮಿಂಗ್ ಸೇವೆ ನೀಡುತ್ತಿರುವ ನೆಟ್‌ಫ್ಲಿಕ್ಸ್ ತನ್ನ ಗೇಮಿಂಗ್ ಲೈನ್ - ಅಪ್ ಅನ್ನು ವಿಸ್ತರಿಸಿಕೊಳ್ಳುತ್ತಿದ್ದು, ಮತ್ತೆ ಹೊಸ ಗೇಮ್‌ಗಳನ್ನು ಪರಿಚಯಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಸಿದ್ಧವಾಗಿದೆ.

ರಾಯಿಟ್ ಗೇಮ್ಸ್‌ನ 'ಹೆಕ್ಸ್‌ಟೆಕ್ ಮೇಹೆಮ್' ಹೊಸದಾಗಿ ಸೇರ್ಪಡೆಯಾಗುತ್ತಿರುವ ಗೇಮ್‌ ಆಗಿದ್ದು, ಇದು ಲೀಗ್ ಆಫ್ ಲೆಜೆಂಡ್ಸ್ ಕಥೆ ಆಧರಿಸಿದೆ. ಎಪಿಕ್ ಗೇಮ್ಸ್ ಸ್ಟೋರ್ ಹಾಗೂ GOG.com ಸೇರಿದಂತೆ ಇತರ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. 9.99 ಡಾಲರ್‌ ಪಾವತಿಸಿ ಇದನ್ನು ಡೌನ್ಲೋಡ್​​ ಮಾಡಿಕೊಳ್ಳಬಹುದು ಎಂದು ಟೆಕ್ಕ್ರಂಚ್ ವರದಿ ಮಾಡಿದೆ.

ಮತ್ತೊಂದು ಹೊಸ ಗೇಮ್‌ 'ಡಂಜಿಯನ್ ಡ್ವಾರ್ವ್ಸ್' ಆಗಿದ್ದು, 2012 ರಲ್ಲಿ ಕ್ಲಬ್ ಪೆಂಗ್ವಿನ್ ಸಹ - ಸಂಸ್ಥಾಪಕ ಲ್ಯಾನ್ಸ್ ಪ್ರಿಬ್ ಸ್ಥಾಪಿಸಿದ ಕೆನಡಾದ ಡೆವಲಪರ್ ಹೈಪರ್ ಹಿಪ್ಪೋ ಇದನ್ನು ನಿರ್ಮಾಣ ಮಾಡಿದೆ. ಈ ಎರಡೂ ಹೆಸರಿನ ಗೇಮ್‌ಗಳು ನೆಟ್‌ಫ್ಲಿಕ್ಸ್‌ನ ಪಾಲುದಾರಿಕೆಯಾಗಿವೆ.

ನೆಟ್‌ಫ್ಲಿಕ್ಸ್‌ ತನ್ನ ವೇಗದ ಗತಿಯ ರಿದಮ್ ರನ್ನರ್ ಆಗಿರುವ ಹೆಕ್ಸ್‌ಟೆಕ್ ಮೇಹೆಮ್ ಅನ್ನು ಈಗಾಗಲೇ ಪೋಲೆಂಡ್, ಇಟಲಿ, ಸ್ಪೇನ್ ಮತ್ತು ಬ್ರೆಜಿಲ್‌ನಲ್ಲಿ ಪರೀಕ್ಷಾರ್ಥವಾಗಿ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಆದರೆ, ಇದೀಗ ಜಾಗತಿಕವಾಗಿ ಚಂದಾದಾರರನ್ನು ಪಡೆಯಲು ಮುಂದಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 3, 2022, 8:54 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.