ETV Bharat / lifestyle

ಆ್ಯಪಲ್‌ ಸಂಸ್ಥೆಗೆ ಕಳುಹಿಸಿದ ಪತ್ರ ಹಿಂತೆಗೆದುಕೊಂಡ ಐಟಿ ಸಚಿವಾಲಯ - ಹೊಸ ಐಟಿ ನಿಯಮ

"ಆ್ಯಪಲ್‌ನ ಐ-ಮೆಸೇಜ್ ಯಾರಿಂದಲೂ ಡೌನ್‌ಲೋಡ್ ಮಾಡಬಹುದಾದ ಅಪ್ಲಿಕೇಶನ್ ಅಲ್ಲ. ಇದು ಫೋನ್‌ನ ವೈಶಿಷ್ಟ್ಯದಂತಹ ಎಸ್‌ಎಂಎಸ್ ಆಗಿದೆ. ಆದ್ದರಿಂದ ನಿಯಮಗಳ ಅನುಸರಣೆಗಾಗಿ ಆ್ಯಪಲ್​ ಸಂಸ್ಥೆಗೆ ನೀಡಿದ ಪತ್ರವನ್ನು ಹಿಂತೆಗೆದುಕೊಂಡಿದೆ" ಎಂದು ಮೂಲಗಳು ತಿಳಿಸಿವೆ.

Apple
ಆ್ಯಪಲ್‌ ಸಂಸ್ಥೆ
author img

By

Published : Jul 16, 2021, 1:14 PM IST

ನವದೆಹಲಿ: ಐ-ಮೆಸೇಜ್ ಪ್ಲಾಟ್‌ಫಾರ್ಮ್ ಅನ್ನು ಹೊಸ ಐಟಿ ನಿಯಮಗಳೊಂದಿಗೆ ಪಾಲಿಸಬೇಕೆಂದು ಕೋರಿ ಐಫೋನ್ ತಯಾರಕ ಆ್ಯಪಲ್‌ ಸಂಸ್ಥೆಗೆ ಕಳುಹಿಸಿದ ಪತ್ರವನ್ನು ಐಟಿ ಸಚಿವಾಲಯ ಹಿಂತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಐ-ಮೆಸೇಜ್ ತನ್ನ ಮೊಬೈಲ್ ಸಾಧನದಲ್ಲಿ ಒಂದು ವೈಶಿಷ್ಟ್ಯವಾಗಿದ್ದು ಯಾವುದೇ ಬಳಕೆದಾರರಿಂದ ಡೌನ್‌ಲೋಡ್ ಮಾಡಬಹುದಾದ ಅಪ್ಲಿಕೇಶನ್ ಅಲ್ಲ ಎಂದು ಆ್ಯಪಲ್‌ ಸಚಿವಾಲಯಕ್ಕೆ ವಿವರಿಸಿದೆ.

"ಆ್ಯಪಲ್‌ನ ಐ-ಮೆಸೇಜ್ ಯಾರಿಂದಲೂ ಡೌನ್‌ಲೋಡ್ ಮಾಡಬಹುದಾದ ಅಪ್ಲಿಕೇಶನ್ ಅಲ್ಲ. ಇದು ಫೋನ್‌ನ ವೈಶಿಷ್ಟ್ಯದಂತಹ ಎಸ್‌ಎಂಎಸ್ ಆಗಿದೆ. ಆದ್ದರಿಂದ ನಿಯಮಗಳ ಅನುಸರಣೆಗಾಗಿ ಆ್ಯಪಲ್​ ಸಂಸ್ಥೆಗೆ ನೀಡಿದ ಪತ್ರವನ್ನು ಹಿಂತೆಗೆದುಕೊಂಡಿದೆ" ಎಂದು ಮೂಲಗಳು ತಿಳಿಸಿವೆ.

ಹೊಸ ಐಟಿ ನಿಯಮಗಳು ಮೇ 26ರಂದು ಜಾರಿಗೆ ಬಂದಿವೆ. ಈ ನಿಯಮವು ಎರಡು ಅಥವಾ ಹೆಚ್ಚಿನ ಬಳಕೆದಾರರ ನಡುವೆ ಆನ್‌ಲೈನ್ ಸಂವಹನವನ್ನು ಪ್ರಾಥಮಿಕವಾಗಿ ಅಥವಾ ಸಂಪೂರ್ಣವಾಗಿ ಶಕ್ತಗೊಳಿಸುವ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ವ್ಯಾಖ್ಯಾನಿಸುತ್ತದೆ. ಇದರ ಸೇವೆಗಳನ್ನು ಬಳಸಿಕೊಂಡು ಮಾಹಿತಿ ರಚಿಸಲು, ಅಪ್‌ಲೋಡ್ ಮಾಡಲು, ಹಂಚಿಕೊಳ್ಳಲು, ಪ್ರಸಾರ ಮಾಡಲು, ಮಾರ್ಪಡಿಸಲು ಅಥವಾ ಎಂಟರ್(ಪ್ರವೇಶ)​ ಆಗಲು ಅವಕಾಶ ನೀಡುತ್ತದೆ.

ಭಾರತದಲ್ಲಿ 5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಹೊಸ ಐಟಿ ನಿಯಮಗಳನ್ನು ಪಾಲಿಸಬೇಕಾಗಿದೆ. ಅವರು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ನಿವಾಸಿ ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ ಪ್ರತಿಯೊಬ್ಬರೂ ಭಾರತದ ನಿವಾಸಿಯಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.