ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮತ್ತು ರಷ್ಯಾ ಯುದ್ಧ ಸಂಬಂಧ ಫೇಸ್ಬುಕ್ ನೀತಿಗಳಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿಕೊಂಡಿದೆ. ಈ ಮೊದಲು ಪೋಸ್ಟ್ಗಳಲ್ಲಿ ಹಿಂಸಾತ್ಮಕ ಹೇಳಿಕೆಗಳನ್ನು ನೀಡಲು ಫೇಸ್ಬುಕ್ ಸೇರಿದಂತೆ ಮೆಟಾ ಒಡೆತನದ ಪ್ಲಾಟ್ಫಾರ್ಮ್ಗಳು ಅನುಮತಿ ನೀಡುತ್ತಿರಲಿಲ್ಲ. ಆದರೀಗ ಈ ನಿಯಮಗಳಲ್ಲಿ ತಾತ್ಕಾಲಿಕವಾಗಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ಹೌದು, ರಷ್ಯಾದ ವಿರುದ್ಧ ಈಗಾಗಲೇ ಬಹುತೇಕ ರಾಷ್ಟ್ರಗಳು ಮತ್ತು ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿರುವಂತೆ, ಮೆಟಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ರಷ್ಯಾ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಲು ಬಳಕೆದಾರರು 'ರಷ್ಯಾ ಆಕ್ರಮಣಕಾರರ ಸಾವು', 'ಪುಟಿನ್ ಸಾವು' ಮುಂತಾದ ರಷ್ಯಾ ಮಿಲಿಟರಿ ಆಕ್ರಮಣ ವಿರೋಧಿ ಹೇಳಿಕೆ ಅಥವಾ ಪೋಸ್ಟ್ಗಳಿಗೆ ಅನುಮತಿ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೆಟಾ ಕಂಪನಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಪರಿಣಾಮವಾಗಿ, ನಾವು ಕೆಲವೊಂದು ರಾಜಕೀಯ ಅಭಿವ್ಯಕ್ತಿಯ ಸ್ವರೂಪದ ಪೋಸ್ಟ್ಗಳಿಗೆ ನಾವು ತಾತ್ಕಾಲಿಕ ಅನುಮತಿ ನೀಡಿದ್ದೇವೆ. ಆದರೆ, ರಷ್ಯಾ ನಾಗರಿಕರ ವಿರುದ್ಧ ಯಾವುದೇ ಬೆದರಿಕೆ ಹಾಕಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ರಾಯಿಟರ್ಸ್ ವರದಿಯ ಪ್ರಕಾರ ಈ ನೀತಿ ಅರ್ಮೇನಿಯಾ, ಅಜರ್‌ಬೈಜಾನ್, ಎಸ್ಟೋನಿಯಾ, ಜಾರ್ಜಿಯಾ, ಹಂಗೇರಿ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್, ರೊಮೇನಿಯಾ, ರಷ್ಯಾ, ಸ್ಲೋವಾಕಿಯಾ ಮತ್ತು ಉಕ್ರೇನ್ ರಾಷ್ಟ್ರಗಳಿಗೆ ಅನ್ವಯಿಸುತ್ತದೆ.
ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗೆ ನಾವು ಆಶ್ರಯ ನೀಡುತ್ತೇವೆ: ಕೆನಡಾ ಪ್ರಧಾನಿ ಅಭಯ