ನವದೆಹಲಿ: ದೇಶದಲ್ಲಿ ಈಗಾಗಲೇ ರಿಲೀಸ್ ಆಗಿರುವ BS6 ಹೊಂಡಾ ಸಿಟಿ ಹಾಗೂ ಅಮೇಜ್ ಕಾರುಗಳ ಮೇಲೆ 1 ಲಕ್ಷ ರೂ.ವರೆಗೆ ಆಫರ್ ನೀಡಿ ಕಂಪನಿ ಪ್ರಕಟಣೆ ಹೊರಡಿಸಿದ್ದು, ಜೂನ್ 30ರವರೆಗೆ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಜಪಾನ್ ಕಂಪನಿ ಆಯ್ದ ಕಾರುಗಳ ಮೇಲೆ ಈ ಆಫರ್ ಘೋಷಣೆ ಮಾಡಿದ್ದು, ಕಾರು ಖರೀದಿ ಮಾಡುವ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡಿದೆ. ಡಿಸೇಲ್ ಹಾಗೂ ಪೆಟ್ರೋಲ್ನಿಂದ ಓಡಿಸಬಹುದಾದ ಈ ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಬಿಎಸ್6 ಎಂಜಿನ್ ಅಮೇಜ್ ಕಾರಿನ ಬೆಲೆ 6.10 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 9.96 ಲಕ್ಷ ರೂ. ಆಗಿದೆ. ಹಳೇ ಕಾರು ವಿನಿಮಯ ಮಾಡಿಕೊಳ್ಳಲು ಬಯಸುವ ಗ್ರಾಹಕರು ರೂ. 20,000ಗಳವರೆಗೆ ನಗದು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.