ರಾಯಸೇನ(ಮಧ್ಯಪ್ರದೇಶ): ಯುವಕನೊಬ್ಬ ತನ್ನ ಹೆತ್ತವರು, ಒಡಹುಟ್ಟಿದವರು ಹಾಗೂ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದ ವಿಲಕ್ಷಣ ಘಟನೆ ಮಧ್ಯ ಪ್ರದೇಶದ ರಾಯಸೇನದಲ್ಲಿ ನಡೆದಿದೆ.
ರಾತ್ರಿ ಮಲಗಿದ್ದ ವೇಳೆಯಲ್ಲಿ ತಂದೆ-ತಾಯಿ, ಅಣ್ಣ ಹಾಗೂ ತನ್ನ ಪತ್ನಿಗೆ ಗುಂಡಿಟ್ಟು ಕೊಂದಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜಿತೇಂದ್ರ ಸಿಂಗ್ ಠಾಕೂರ್ ಎನ್ನುವ ವ್ಯಕ್ತಿಯೇ ನಾಲ್ವರು ಹತ್ಯೆಮಾಡಿದ ಪಾಪಿಯಾಗಿದ್ದಾನೆ, ಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.