ETV Bharat / jagte-raho

ಗಂಡನ ಪ್ರಾಣ ಹಿಂಡಿದ ಹೆಂಡತಿ... ನಿತ್ಯ ಕಿರುಕುಳದಿಂದ ನಡೆದೇ ಹೋಯ್ತು ದುರಂತ! - doddabasava

ಪತಿ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಕ್ಕೆ ಮನನೊಂದ ವ್ಯಕ್ತಿ ಬಾರದಲೋಕಕ್ಕೆ ತೆರಳಿದ್ದಾನೆ. ಪ್ರಾಣ ಹಿಂಡುವ ಪತ್ನಿಯಿಂದ ಬೇಸತ್ತು ಗಂಡ ನೇಣಿಗೆ ಶರಣಾಗಿದ್ದಾನೆ.

ದೊಡ್ಡಬಸವ ಅಗಸಿಮುಂದಿನ
author img

By

Published : Jun 12, 2019, 1:54 PM IST

ಕೊಪ್ಪಳ‌: ಪತ್ನಿ ಹಾಗೂ ಆಕೆಯ ತವರು ಮನೆಯವರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿವೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸದಾಶಿವ ನಗರದಲ್ಲಿ ನಡೆದಿದೆ.‌

ದೊಡ್ಡಬಸವ ಅಗಸಿಮುಂದಿನ (34) ಎಂಬ ವ್ಯಕ್ತಿ ಮನೆಯಲ್ಲಿ ನೇಣಿಗೆ ಶರಣಾಗಿರುವ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ದೊಡ್ಡಬಸವ ಡೆತ್ ನೋಟ್ ಬರೆದಿಟ್ಟಿದ್ದು, ಪತ್ನಿ ಶಿಲ್ಪಾ ಹಾಗೂ ಆಕೆಯ ತವರು ಮನೆಯವರು ಹಾಗೂ ಪೊಲೀಸ್ ಅಧಿಕಾರಿವೋರ್ವರ ಹೆಸರನ್ನು ಡೆತ್ ನೋಟ್​ನಲ್ಲಿ ಬರೆದಿದ್ದಾನೆ ಎನ್ನಲಾಗ್ತಿದೆ.

ಪತ್ನಿ ಕಿರುಕುಳದಿಂದ ಪತಿ ಆತ್ಮಹತ್ಯೆ

ಮೃತನ ಮನೆಯಲ್ಲಿ ಸುಮಾರು ಮೂರು ಪುಟಗಳ ಡೆತ್​ನೋಟ್ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ದೊಡ್ಡಬಸವ ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ಹಿರಿಯರನ್ನು ಕರೆಸಿ ರಾಜಿ ಪಂಚಾಯಿತಿಯನ್ನು ಸಹ ಮಾಡಲಾಗಿತ್ತು. ಆದ್ರೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಗಲಾಟೆ ನಡೆದಿತ್ತು. ಪತಿ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪತ್ನಿ ಶಿಲ್ಪಾ ಹಾಗೂ ಆಕೆಯ ತವರು ಮನೆಯವರು ಸುಳ್ಳು ಕೇಸು ದಾಖಲಿಸಿದ್ದಾರಂತೆ. ಇದರಿಂದ ಮನನೊಂದ ದೊಡ್ಡಬಸವ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೊಡ್ಡ ಬಸವನ ಸಾವಿಗೆ ಆತನ ಪತ್ನಿ ಹಾಗೂ ಆಕೆಯ ತವರು ಮನೆಯವರು ಮತ್ತು ಪೊಲೀಸ್ ಅಧಿಕಾರಿಯ ಕಿರುಕುಳವೇ ಕಾರಣವೆಂದು ದೊಡ್ಡ ಬಸವನ ಕುಟುಂಬಸ್ಥರು ಹಾಗೂ ಆತನ ಸ್ನೇಹಿತರು ಆರೋಪಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:

Body:ಕೊಪ್ಪಳ‌:- ಪತ್ನಿ ಹಾಗೂ ಪತ್ನಿ ಮನೆಯವರ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದ ಸದಾಶಿವ ನಗರದಲ್ಲಿ ನಡೆದಿದೆ.‌ ದೊಡ್ಡಬಸವ ಅಗಸಿಮುಂದಿನ (೩೪) ಎಂಬ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ದೊಡ್ಡಬಸವ ಡೆತ್ ನೋಟ್ ಬರೆದಿಟ್ಟಿದ್ದು ಪತ್ನಿ ಶಿಲ್ಪಾ ಹಾಗೂ ಆಕೆಯತವರು ಮನೆಯವರು ಹಾಗೂ ಪೊಲೀಸ್ ಅಧಿಕಾರಿ ಅಮರೇಶ್ ಹುಬ್ಬಳ್ಳಿ ಎಂಬ ಹಸರನ್ನು ಡೆತ್ ನೋಟ್ ನಲ್ಲಿ ಮೆನ್ಷನ್ ಮಾಡಿದ್ದಾನೆ. ಸುಮಾರು ಮೂರು ಪುಟಗಳ ಡೆತ್ ನೋಟ್ ಲಭ್ಯವಾಗಿದೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ದೊಡ್ಡಬಸವ ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ಹಿರಿಯರನ್ನು ಕರೆಸಿ ರಾಜಿಪಂಚಾಯಿತಿಯನ್ನು ಸಹ ಮಾಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಇದೇ ರೀತಿ ಮನೆಯಲ್ಲಿ ಗಲಾಟೆ ನಡೆದಿತ್ತು. ಪತಿ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪತ್ನಿ ಶಿಲ್ಪಾ ಹಾಗೂ ಆಕೆಯ ತವರು ಮನೆಯವರು ಸುಳ್ಳು ಕೇಸು ದಾಖಲಿಸಿದ್ದಾರಂತೆ. ಇದರಿಂದ ಮನನೊಂದ ದೊಡ್ಡಬಸವ ಇಂದು ಬೆಳಗಿನ ಜಾವ ತಮ್ಮ ಮನೆಯ ಕೊನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡ ಬಸವನ ಸಾವಿಗೆ ಆತನ ಪತ್ನಿ ಹಾಗೂ ಪೊಲೀಸ್ ಅಧಿಕಾರಿ ಅಮರೇಶ್ ಹುಬ್ಬಳ್ಳಿ, ಪತ್ನಿ ಮನೆಯವರ ಕಿರುಕುಳವೇ ಕಾರಣ ಎಂದು ದೊಡ್ಡ ಬಸವನ ಕುಟುಂಬಸ್ಥರು ಹಾಗೂ ಆತನ ಸ್ನೇಹಿತರು ಆರೋಪಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಟ್1:- ಬಸವರಾಜ, ದೊಡ್ಡಬಸವನ ಸ್ನೇಹಿತ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.