ಬೆಂಗಳೂರು: ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಲೋಡಿಂಗ್ ಮಾಡಲು ಅವಕಾಶ ಕೊಟ್ಟಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರವಿಭಾಗ ಆರ್ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮ ಬಂಧಿತ ಆರೋಪಿ. ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಶಾಂತ್ ಎಂಬಾತನನ್ನ ಕಳೆದೆರಡು ದಿನ ಹಿಂದೆ ರಾತ್ರಿ ವೇಳೆ ದುಷ್ಕರ್ಮಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ.
ಘಟನೆಯ ಹಿನ್ನೆಲೆ
ಕೊಲೆಯಾದ ಪ್ರಶಾಂತ್ 2017 ರಿಂದ ಡಿಯುಟಿಟಿಎಲ್ನ ಬಳಿ ಇರುವ ಶಕ್ತಿವಕಾರ್ಗೋ ಟ್ರಾನ್ಸ್ಪೊರ್ಟ್ನಲ್ಲಿ ಕಂಪನಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಘಟನೆ ದಿನ ಕಂಪನಿಯಲ್ಲಿ ಡ್ರೈವರು ಆಗಿ ಕೆಲಸ ಮಾಡುವ ಸೋಮನ ಜೊತೆ ಫೋನಿನಲ್ಲಿ ಜಗಳವಾಡಿದ್ದಾನೆ. ನಂತ್ರ ತಾನು ಆಫೀಸ್ ಬಳಿ ಹೋಗುವುದಾಗಿ ಮನೆಯವರಿಗೆ ಹೇಳಿದ್ದ ಪ್ರಶಾಂತ್. ಸೋಮ್ ಬಳಿ ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೆರಿದಾಗ ಸೋಮು ಸಿಟ್ಟಿನಿಂದ ಕೊಲೆ ಮಾಡಿದ್ದಾನೆ.
ಇನ್ನು ಪೊಲೀಸರು ಪೋನ್ ರೆಕಾರ್ಡ್ ಆಧಾರದ ಮೇರೆಗೆ ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯಾದ ಪ್ರಶಾಂತ್ ಸೋಮನಿಗೆ ವಸ್ತುಗಳನ್ನ ಸಾಗಿಸಲು ಲೋಡ್ ಕೊಡದೆ ಸತಾಯಿಸಿದ್ದ. ಹೀಗಾಗಿ ಸೋಮನಿಗೆ ವಹಿವಾಟು ಆಗ್ತಿರಲಿಲ್ಲ. ಹೀಗಾಗಿ ಗಲಾಟೆ ಮಾಡಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.