ಬೆಂಗಳೂರು : ಜಿಹಾದಿಗಳ ಬೆನ್ನತ್ತಿರುವ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಮತ್ತಿಬ್ಬರು ಉಗ್ರರನ್ನು ಬಂಧಿಸಿದ್ದಾರೆ.
ಸಿಮಿ ಸಂಘಟನೆ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಮುಜಾಮಿಲ್ ಹಾಗೂ ಸೈಯದ್ ಸಾದಿಕ್ ಸಮೀರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಇಬ್ಬರು ಆರೋಪಿಗಳು ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಬಾಂಬ್ ತಯಾರಿಸುತ್ತಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಧರ್ಮದ ಹೆಸರಲ್ಲಿ ಅಧರ್ಮದ ಹಾದಿ ತೋರಿಸಿ ಯುವಕರನ್ನ ತಮ್ಮತ್ತ ಸೆಳೆಯೋ ತಂತ್ರ ಉಪಯೋಗಿಸ್ತಿದ್ದರು ಎನ್ನಲಾಗಿದೆ.
ಪ್ರಕರಣದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷ ಸದ್ಯ ತಲೆಮರೆಸಿಕೊಂಡಿದ್ದು ಈತನ ಪತ್ತೆಗೆ ಸಿಸಿಬಿ ತಂಡ ಬಲೆಬೀಸಿದೆ. ಈತ ಗುರಪ್ಪನ ಪಾಳ್ಯದ ಬಳಿ ವಾಸವಿದ್ದ ಈತ ಮನೆಯಲ್ಲೇ ಬಂಧಿತರಾಗಿರುವ ಆರೋಪಿಗಳಿಗೆ ಟ್ರೈನಿಂಗ್ ನೀಡುತ್ತಿದ್ದ. ಮೆಹಬೂಬ್ ಪಾಷನ ಮನೆಯಲ್ಲೆ ಉಗ್ರ ಚಟುವಟಿಕೆ ಬಗ್ಗೆ ಬ್ಯಾಕ್ ಟು ಬ್ಯಾಕ್ ಸಭೆಯಾದ ಕಾರಣ ಸದ್ಯ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ದೂರಿನ ಮೇರೆಗೆ ಮೆಹಬೂಬ್ ಪಾಷ, ಖ್ವಾಜಾ ಮೊಯಿನುದ್ದೀನ್ ಸೇರಿ 17 ಜನರ ಮೇಲೆ ದೂರು ದಾಖಲಿಸಲಾಗಿದ್ದು ತನೀಕೆ ಬಹಳಷ್ಟು ಚುರುಕುಗೊಂಡಿದೆ.