ಮೈಸೂರು: ರಾತ್ರಿ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ದೋಚುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ 8 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಬಿ.ಎಂ.ಶ್ರೀ.ನಗರದ ನಿವಾಸಿಗಳಾದ ಮಧು(20), ಕಿರಣ್ (21), ವಿಜಯ್ (20) ಬಂಧಿತರು.
![mysore crime news](https://etvbharatimages.akamaized.net/etvbharat/prod-images/kn-mys-04-thieves-vis-ka10003_14012020201138_1401f_1579012898_67.jpg)
ಬಿ.ಎಂ.ಶ್ರೀ.ನಗರದ ಗ್ಯಾಸ್ ಗೋದಾಮಿನ ಹತ್ತಿರ ಇರುವ ಟೀ ಅಂಗಡಿ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಜ.4ರಂದು ಕಳಸ್ತವಾಡಿ ಗ್ರಾಮದ ಮನೆಯೊಂದರ ಬೀಗ ಮುರಿದು, ಚಿನ್ನಾಭರಣ ಕದ್ದಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.