ETV Bharat / jagte-raho

ಗಡಿ ದಾಟಿ ಬಂದ ಪಾಕ್​ ಆಕ್ರಮಿತ ಕಾಶ್ಮೀರದ ಅಪ್ರಾಪ್ತ ವಶಕ್ಕೆ - ಅಲಿ ಹೈದರ್​

ಪೂಂಚ್ ಸೆಕ್ಟರ್​ನ​ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ​ ಆಕ್ರಮಿತ ಕಾಶ್ಮೀರದ ಬಾಲಕನನ್ನು ಪೊಲೀಸರ ವಿಶೇಷ ಕಾರ್ಯ ಪಡೆ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.

Minor boy from PoK held along LoC in J-K's Poonch
ಗಡಿ ದಾಟಿ ಬಂದ ಪಾಕ್​ ಆಕ್ರಮಿತ ಕಾಶ್ಮೀರದ ಅಪ್ರಾಪ್ತ ವಶಕ್ಕೆ
author img

By

Published : Jan 1, 2021, 11:06 AM IST

ಪೂಂಚ್​ (ಜಮ್ಮು-ಕಾಶ್ಮೀರ): ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನ​ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲದ 14 ವರ್ಷದ ಬಾಲಕನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ಪೊಲೀಸರ ವಿಶೇಷ ಕಾರ್ಯ ಪಡೆ ವಶಕ್ಕೆ ಪಡೆದಿದೆ.

ಬಾಲಕನನ್ನು ಅಲಿ ಹೈದರ್​ ಎಂದು ಗುರುತಿಸಲಾಗಿದೆ. ಪೂಂಚ್ ಸೆಕ್ಟರ್​ನ​ ಗಡಿ ನಿಯಂತ್ರಣ ರೇಖೆ ಬಳಿಯ ಅಜೋಟೆ ಗ್ರಾಮದಲ್ಲಿ ಈತನನ್ನು ಕಂಡ ವಿಶೇಷ ಕಾರ್ಯ ಪಡೆ ಬಾಲಕನನ್ನು ವಶಕ್ಕೆ ಪಡೆದು, ಪೊಲೀಸ್​ ಕಸ್ಟಡಿಗೆ ಕರೆದೊಯ್ದಿದೆ.

ಇದನ್ನೂ ಓದಿ: ರಜಿನಿಕಾಂತ್ ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿ ಬೆಂಕಿ ಹಚ್ಚಿಕೊಳ್ಳಲು ಮುಂದಾದ ಅಭಿಮಾನಿ

ಈತ ಆಕಸ್ಮಿಕವಾಗಿ ಗಡಿ ದಾಟಿದ್ದಾನೋ ಅಥವಾ ಉದ್ದೇಶಪೂರ್ವಕವಾಗಿ ಅಪ್ರಾಪ್ತನನ್ನು ಕಳುಹಿಸಲಾಗಿದೆಯೋ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಾಲಕ ಸದ್ಯ ಪೊಲೀಸ್​ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರೆದಿದೆ ಎಂದು ಪೂಂಚ್​ ಎಸ್​ಎಸ್​ಪಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.