ಗರಿಯಾಬಂದ್(ಛತ್ತೀಸ್ಗಢ): ಕ್ವಾರಂಟೈನ್ ಕೇಂದ್ರದಲ್ಲೇ 20 ವರ್ಷದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್ಗಢದ ಗರಿಯಾಬಂದ್ನಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಹೈದರಾಬಾದ್ನಿಂದ ಛತ್ತೀಸ್ಗಢಕ್ಕೆ ಬಂದಿದ್ದ ಯುವಕ, ಗರಿಯಾಬಂದ್ ಜಿಲ್ಲೆಯ ದೇವ್‌ಭೋಗ್ ಪ್ರದೇಶದ ಗೋಹರಾಪದರ್ ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದನು. ಸುಮಾರು 22 ಜನರಿದ್ದ ಈ ಕೇಂದ್ರದಲ್ಲಿ ಕಳೆದ ರಾತ್ರಿ ಸುಮಾರು 2 ಗಂಟೆಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಇದನ್ನು ನೋಡಿದ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ದೇವಭಾಗ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.