ಹಾವೇರಿ : ಬೆಳೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಮೇಲೆ ಜಿಲ್ಲೆಯಲ್ಲಿ ಮತ್ತೊಬ್ಬ ಗ್ರಾಮ ಲೆಕ್ಕಾಧಿಕಾರಿಯನ್ನ ಬಂಧಿಸಲಾಗಿದೆ.
ತಾಲೂಕಿನ ಕರ್ಜಗಿ ಗ್ರಾಮದ ಲೆಕ್ಕಾಧಿಕಾರಿ ಸುಲೇಮಾನ ಲಿಂಗದಹಳ್ಳಿ ಬಂಧಿತರು. ಬೆಳೆ ಪರಿಹಾರ ಹಂಚಿಕೆಯಲ್ಲಿ ಸುಲೇಮಾನ ತಾರತಮ್ಯ ಮಾಡಿದ್ದರು ಎನ್ನಲಾಗಿದೆ. ಯಾರದೋ ಜಮೀನಿನಲ್ಲಾದ ಬೆಳೆ ಹಾನಿಗೆ ಬೇರೆ ಯಾರಿಗೋ ಪರಿಹಾರ ಹಂಚಿಕೆ ಮಾಡಿದ್ದ ಆರೋಪ ಸುಲೇಮಾನ ವಿರುದ್ದ ಕೇಳಿ ಬಂದಿತ್ತು.
ಸುಲೇಮಾನ ವಿರುದ್ದ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.