ETV Bharat / jagte-raho

ಶೀಲ ಶಂಕಿಸಿ ಪತ್ನಿಯನ್ನ ಹೊಡೆದು ಕೊಂದ ಪಾಪಿ ಪತಿ - Suspected wife murdered

ಪತ್ನಿಯನ್ನು ಹತ್ಯೆಗೈದ ವ್ಯಕ್ತಿಯನ್ನ ವಶಕ್ಕೆ ಪಡೆದ ಮಾದನಾಯನಹಳ್ಳಿ ಪೊಲೀಸರು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ ಮೃತರ ಸಹೋದರಿಯರು.

husband killed his wife
ಪತ್ನಿಯನ್ನು ಹೊಡೆದು ಕೊಂದ ಪಾಪಿ ಪತಿ
author img

By

Published : Jan 16, 2020, 3:51 AM IST

ನೆಲಮಂಗಲ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆಗೈದ ಪತಿ ಶಶಿಕುಮಾರ್ ಎಂಬಾತನನ್ನು ಮಾದನಾಯನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುಟ್ಟಮ್ಮ( 27) ಮೃತ ಮಹಿಳೆ. ಹೊಳೆನರಸೀಪುರ ಮೂಲದ ದಂಪತಿ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಪಾಳ್ಯದಲ್ಲಿ ನೆಲೆಸಿದ್ದರು. ಮದುವೆಯಾಗಿ 8 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಮತ್ತೊಂದು ಮದುವೆಯಾಗಲು ಶಶಿಕುಮಾರ್​ ಸಂಚು ರೂಪಿಸಿದ್ದನಂತೆ.

ಮಂಗಳವಾರ ರಾತ್ರಿ ಕುಡಿದಿದ್ದ ಶಿವಕುಮಾರ್, ಹೆಂಡತಿಗೂ ಕಂಠ ಪೂರ್ತಿ ಕುಡಿಸಿದ್ದಾನೆ. ನಂತರ ಶೀಲ ಶಂಕಿಸಿ ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಆಕೆಯನ್ನು ಬೆತ್ತಲುಗೊಳಿಸಿ ಥಳಿಸಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ.

ಪತ್ನಿಯನ್ನು ಹೊಡೆದು ಕೊಂದ ಪಾಪಿ ಪತಿ

ಮದುವೆಯಾದ ದಿನದಿಂದಲೂ ಶೀಲ ಶಂಕಿಸಿ ನನ್ನ ತಂಗಿಯನ್ನು ಹೊಡೆಯುತ್ತಿದ್ದ. ನನ್ನ ತಂಗಿ ಸಾವಿಗೆ ಕಾರಣ ಶಶಿಕುಮಾರ್ ತಾಯಿ ಮತ್ತು ಆತನ ಸಹೋದರ. ಶಶಿಕುಮಾರ್​ಗೆ ಮತ್ತೊಂದು ಮದುವೆಯಾಗುವಂತೆ ಆತನ ತಾಯಿ ಆಸೆ ಹುಟ್ಟಿಸಿದ್ದಳು. ಹಾಗೂ ಹೆಂಡತಿ ಬಿಟ್ಟು ಮನೆಗೆ ಬರುವಂತೆ ಶಶಿಕುಮಾರ್​ಗೆ ಹೇಳುತ್ತಿದ್ದರು. ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆಗೈದಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಪುಟ್ಟಮ್ಮನ ಸಹೋದರಿ ಒತ್ತಾಯಿಸಿದರು.

Intro:ಶೀಲ ಶಂಕಿಸಿ ಪತಿಯಿಂದ ಪತ್ನಿಯ ಕೊಲೆ 

ಕುಡಿದ ಮತ್ತಿನಲ್ಲಿ ಹೆಂಡತಿಯನ್ನ ಹೊಡೆದು ಕೊಂದ.

Body:ನೆಲಮಂಗಲ : ಮತ್ತೊಂದು ಮದುವೆಯಾಗಲು ಯತ್ನಿಸಿದ ಗಂಡ ಹೆಂಡತಿಯ ಶೀಲ ಶಂಕಿಸಿ ಹೊಡೆದು ಕೊಂದು ಹಾಕಿದ್ದಾನೆ. ಹೆಂಡತಿ ಕೊಂದ ಪಾಪಿ ಪೊಲೀಸರ ವಶದಲ್ಲಿದ್ದಾನೆ. 

ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಪಾಳ್ಯದಲ್ಲಿ ಹೊಳೆನರಸಿಪುರ ಮೂಲದ ದಂಪತಿ ವಾಸವಾಗಿದ್ದು. ಈ ದಂಪತಿಗೆ ಮದುವೆಯಾಗಿ 8 ವರ್ಷಗಳಾದರು ಮಕ್ಕಳಿರಲಿಲ್ಲ. ಇದೇ ಕಾರಣಕ್ಕೆ  ಮತ್ತೊಂದು ಮದುವೆಯಾಗಲು ಸಂಚು ನಡೆಸಿದ ಪಾಪಿ ಪತಿ ಹೆಂಡತಿಯನ್ನ ಹೊಡೆದು ಕೊಂದಿದ್ದಾನೆ. ಗಂಡನ ಹೊಡೆತಕ್ಕೆ ಪುಟ್ಟಮ್ಮ( 27) ಸಾವನ್ನಪ್ಪಿದ್ದಾಳೆ. ಹೆಂಡತಿಯ ಕೊಲೆ ಮಾಡಿದ ಪಾಪಿ ಪತಿ ಶಶಿಕುಮಾರ್ ಮಾದನಾಯನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಕುಡಿದು ಬಂದ ಶಿವಕುಮಾರ್ ಹೆಂಡತಿಗೂ ಕಂಠಪೂರ್ತಿ ಕುಡಿಸಿದ್ದಾನೆ . ನಂತರ ಹೆಂಡತಿಯ ಶೀಲ ಶಂಕಿಸಿ ಜಗಳಮಾಡಿದ್ದಾನೆ. ಗಂಡ ಹೆಂಡತಿಯ ಜಗಳ ವಿಕೋಪಕ್ಕೆ ಹೋದಾಗ   ಆಕೆಯ ಬೆತ್ತಲು ಮಾಡಿ ಚೆನ್ನಾಗಿ ಥಳಿಸಿದ್ದಾನೆ ಶಶಿಕುಮಾರ್. ಗಂಡನ ಹೊಡೆತ ತಾಳಲಾರದೆ ಪುಟ್ಟಮ್ಮ ಸಾವನ್ನಪ್ಪಿದ್ದಾಳೆ. 

01a-ಬೈಟ್ : ಲಕ್ಷ್ಮಿ, ಮೃತ ಪುಟ್ಟಮ್ಮ ಸಹೋದರಿ

ಮದುವೆಯಾದ ದಿನದಿಂದಲೂ  ಪತ್ನಿಯ ಶೀಲ ಶಂಕಿಸಿ ಜಗಳ ಮಾಡಿ ಹೊಡೆಯುತ್ತಿದ್ದ. ಗಂಡನ ಹೊಡೆತ ತಾಳಲಾರದೆ ತನ್ನ  ಸೋದರಿಯರ ಮನೆಗೆ ಬಂದು ತನ್ನ ನೋವು ಹೇಳಿಕೊಂಡಿದ್ದಳು. ನಮ್ಮ ತಂಗಿಯ ಸಾವಿಗೆ ಕಾರಣ ಶಶಿಕುಮಾರ್ ತಾಯಿ ಮತ್ತು ಆತನ ಸಹೋದರ. ಶಶಿಕುಮಾರ್ ಗೆ ಮತ್ತೊಂದು ಮದುವೆ ಮಾಡುವ ಆಸೆ  ಹುಟ್ಟಿಸಿದ ತಾಯಿ ಮತ್ತು ತಮ್ಮ ಹೆಂಡತಿ ಬಿಟ್ಟು ಬರುವಂತೆ ಹೇಳುತ್ತಿದ್ದರು. ಇದೇ ಕಾರಣಕ್ಕೆ ತಮ್ಮ ತಂಗಿಯನ್ನ ಹೊಡೆದು ಸಾಯಿಸಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಹಿಡಿಶಾಪ ಹಾಕಿದರು 

01b-ಬೈಟ್ : ಗೌರಿ, ಮೃತ ಪುಟ್ಟಮ್ಮ ಸಹೋದರಿ

ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದನಂತೆ ಹಾಗೆಯೇ ಅಮಾಯಕ ಪುಟ್ಟಮ್ಮಳಿಗೆ ಮಗುವಾಗಲಿಲ್ಲ ಎನ್ನುವ ಕಾರಣಕ್ಕೆ  ಮತ್ತೊಂದು ಮದುವೆಯಾಗಲು ಆಕೆಯ ಶೀಲಶಂಕಿಸಿ ಕೊಲೆಗೈದು ಈಗ ಮಾಡಿದ ತಪ್ಪಿಗೆ ಜೈಲು ಕಂಬಿ ಎಣಿಸುತ್ತಿದ್ದಾನೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.