ETV Bharat / jagte-raho

ಕೊಡಲಿಯಿಂದ ಕೊಚ್ಚಿ ನಾಲ್ವರು ಮಕ್ಕಳ ಬರ್ಬರ ಕೊಲೆ - ಮಹಾರಾಷ್ಟ್ರ ಕ್ರೈಂ ಸುದ್ದಿ

ತಂದೆ - ತಾಯಿ ಊರಿನಲ್ಲಿರದ ವೇಳೆ ಅವರ ನಾಲ್ವರು ಮಕ್ಕಳನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್​ನಲ್ಲಿ ನಡೆದಿದೆ.

murder by axe
ಕೊಡಲಿಯಿಂದ ಕೊಚ್ಚಿ ನಾಲ್ವರು ಮಕ್ಕಳ ಬರ್ಬರ ಕೊಲೆ
author img

By

Published : Oct 16, 2020, 2:34 PM IST

ಜಲ್ಗಾಂವ್ (ಮಹಾರಾಷ್ಟ್ರ): ಕೊಡಲಿಯಿಂದ ಕೊಚ್ಚಿ ನಾಲ್ವರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್​ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಜಲ್ಗಾಂವ್​ನ ಬೋರ್ಗಾಂವ್ ಗ್ರಾಮದ ಹೊಲದಲ್ಲಿ ಇಬ್ಬರು ಬಾಲಕಿಯರು ಮತ್ತು ಇಬ್ಬರು ಬಾಲಕರ ಮೃತದೇಹಗಳು ಪತ್ತೆಯಾಗಿವೆ.

ಮೇತಬ್​ ಬಿಲಾಲ್​ ಎಂಬವರು ತಮ್ಮ ಜಮೀನಿನ ಬಳಿಯ ಮನೆಯಲ್ಲಿ ವಾಸವಾಗಿದ್ದು, ಇವರಿಗೆ ಐವರು ಮಕ್ಕಳಿದ್ದಾರೆ. ಅಕ್ಟೋಬರ್​ 15 ರಂದು ಪತ್ನಿ ಹಾಗೂ ಮಗುವನ್ನು ಕರೆದುಕೊಂಡು ಯಾವುದೇ ಕೆಲಸದ ಮೇಲೆ ಮೇತಬ್​ ಮಧ್ಯಪ್ರದೇಶಕ್ಕೆ ತೆರಳಿದ್ದರು. ಉಳಿದ ನಾಲ್ವರು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಆದರೆ, ಇಂದು ಬೆಳಗ್ಗೆ ವಾಪಸ್​ ಬಂದು ನೋಡಿದರೆ ಹೊಲದಲ್ಲಿ ನಾಲ್ವರು ಮಕ್ಕಳು ಹೆಣವಾಗಿ ಬಿದ್ದಿದ್ದರು.

ವರದಿಯ ಪ್ರಕಾರ ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.