ನವದೆಹಲಿ: ಎರಡು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಇಡಿ(ಜಾರಿ ನಿರ್ದೇಶನಾಲಯ) ಭಾನುವಾರ ದೆಹಲಿ-ಎನ್‌ಸಿಆರ್‌ನ ಅನೇಕ ಭಾಗಗಳಲ್ಲಿ ಶೋಧ ನಡೆಸಿದ್ದು, ನೋಯ್ಡಾ 'ಬೈಕ್ ಬೊಟ್' ಪೊಂಜಿ ಯೋಜನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಹಾಪುರದ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಲಖನೌ ವಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ಜಂಟಿ ನಿರ್ದೇಶಕ (ಲಖನೌ ವಲಯ) ರಾಜೇಶ್ವರ ಸಿಂಗ್, ಬೈಕ್ ಬೊಟ್ ಪ್ರಕರಣ ಮತ್ತು ರಿಯಲ್ ಎಸ್ಟೇಟ್ ಪ್ರಮುಖ ಅಮ್ರಪಾಲಿ ಗ್ರೂಪ್ ವಿರುದ್ಧದ ಹಣ ವರ್ಗಾವಣೆ ಪ್ರಕರಣಗಳಲ್ಲಿ ಶೋಧ ಕಾರ್ಯ ನಡೆಸಿರುವುದನ್ನು ದೃಢಪಡಿಸಿದ್ದಾರೆ.
ಮೊದಲ ಪ್ರಕರಣದಲ್ಲಿ, ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದ್ದು. ಎಫ್ 7 ಬ್ರಾಡ್ಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಮನೋಜ್ ತ್ಯಾಗಿ ಅವರನ್ನು ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದೆ.
ಓದಿ ಲಡಾಖ್ನಲ್ಲಿ ಭಾರತದ ಗಡಿ ಪ್ರವೇಶಿಸಿದವಾ ಚೀನಾ ವಾಹನಗಳು? ವಿಡಿಯೋ ವೈರಲ್
ಅದರ ಪ್ರಾಯೋಜಕ ಕಂಪನಿ ಗಾರ್ವಿಟ್ ಇನ್ನೋವೇಟಿವ್ ಪ್ರಮೋಟರ್ಸ್ ಲಿಮಿಟೆಡ್‌ಗೆ ಸಂಬಂಧಿಸಿರುವ 'ಬೈಕ್ ಬೊಟ್' ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸಹಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್‌ನ ಪ್ರಮೋಟರ್ ಮತ್ತು ನಿರ್ದೇಶಕ ಅನಿಲ್ ಕುಮಾರ್ ಸಹಾ ಅವರೊಂದಿಗೆ ಸಂಪರ್ಕ ಹೊಂದಿದ ಪ್ರದೇಶದಲ್ಲೂ ಸಂಸ್ಥೆ ಹುಡುಕಿದೆ.
"ಎರಡು ಕಂಪನಿಗಳು ಯಾವುದೇ ಸರಿಯಾದ ಒಪ್ಪಂದ ಅಥವಾ ದಾಖಲೆಗಳಿಲ್ಲದೆ, ಬೈಕ್ ಬೊಟ್ ಹೂಡಿಕೆದಾರರಿಂದ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಂಗ್ರಹಿಸಿದ ನಿಧಿಯಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದಿರುವುದು ಕಂಡುಬಂದಿದೆ" ಎಂದು ಮಾಹಿತಿ ನೀಡಿದ್ದಾರೆ.
ದಾಳಿ ವೇಳೆ ಹಲವಾರು ದೋಷಾರೋಪಣೆ ದಾಖಲೆಗಳು, ಇಲೆಕ್ಟ್ರಾನಿಕ್ ಸಾಧನಗಳು ಮತ್ತು 9.5 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.