ಅಮರಾವತಿ(ಆಂಧ್ರಪ್ರದೇಶ): ಸ್ಟೀಡ್ ಥ್ರಿಲ್ಸ್ ಬಟ್ ಕಿಲ್ಸ್ ಎಂಬ ಮಾತೇ ಇದೆ. ನಿನ್ನೆ ಆಗಿದ್ದು ಇದೇ ಘಟನೆ. ತೆಲುಗು ಚಿತ್ರರಂಗದ ನಟರೊಬ್ಬರ ಚಾಲಕ ಅತೀ ವೇಗವಾಗಿ ಕಾರು ಓಡಿಸಿ, ಅಪಘಾತಕ್ಕೀಡಾದ ಪರಿಣಾಮ ದಿನಗೂಲಿ ಮಹಿಳೆ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ಘಟನೆಯಲ್ಲಿ ನಟನೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳಗಿರಿ ತಾಲೂಕಿನ ಚಿನಕಾಕಾನಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ತೆಲುಗು ಚಿತ್ರರಂಗದ ನಟ ಸುಧಾಕರ್ ಅವರ ಚಾಲಕ ಅತೀ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಮಧ್ಯದ ಡಿವೈಡರ್ಗೆ ಗುದ್ದಿದೆ. ಬಳಿಕ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.ಈ ವೇೆಳೆ ರಸ್ತೆಯ ಬಳಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕಾರು ಬಡಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.