ಚಿತ್ರದುರ್ಗ: ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಕೆರೆ ಬಳಿ ನಡೆದಿದೆ.
ಬೈಕಿನಲ್ಲಿದ್ದ ಇಬ್ಬರನ್ನು ಹೊಳಲ್ಕೆರೆ ತಾಲೂಕಿನ ನೇರಳಕಟ್ಟೆ ಗ್ರಾಮದ ಉಮೇಶ (32) ಮತ್ತು ಗುಂಡೇರಿ ಗ್ರಾಮದ ಶ್ರೀನಿವಾಸ (30) ಎಂದು ಗುರುತಿಸಲಾಗಿದೆ. ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.