ಶ್ರೀಕಾಕುಳಂ: ಕುಡಿವ ನೀರಿಗಾಗಿ ಮಹಿಳೆಯರ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಸೋಂಪೇಟನಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಕುಡಿವ ನೀರು ಹಿಡಿಯಲು ತಾಟಿಪುಡಿ ಪದ್ಮಾ (38) ಟ್ಯಾಂಕ್ ಬಳಿ ತೆರಳಿ ಕ್ಯೂನಲ್ಲಿ ನಿಂತಿದ್ದಾರೆ. ನಳದ ಬಳಿ ಸರತಿ ಸಾಲು ತಪ್ಪಿದ್ದು, ಮಹಿಳೆಯರು ಪರಸ್ಪರ ಬಿಂದಿಗೆಯಿಂದ ಕಿತ್ತಾಡಿಕೊಂಡಿದ್ದಾರೆ.
ಬಿಂದಿಗೆಯಿಂದ ಕಿತ್ತಾಡಿಕೊಂಡಿದ್ದ ವೇಳೆ ಪದ್ಮಾ ಅವರ ಹೃದಯ ಭಾಗ ಮತ್ತು ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆಹಾಕಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.