ಗುರುಗ್ರಾಮ್ (ಹರಿಯಾಣ): ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದಿರುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್ಐ)ವು ಗುತ್ತಿಗೆದಾರನಿಗೆ ಬರೋಬ್ಬರಿ 3 ಕೋಟಿ ರೂ.ದಂಡ ವಿಧಿಸಿದೆ.
ಕಳೆದ ವರ್ಷ ಹರಿಯಾಣದ ಗುರುಗ್ರಾಮದ ಸೊಹ್ನಾ ರಸ್ತೆಯಲ್ಲಿನ ಫ್ಲೈಓವರ್ನಲ್ಲಿ 22 ಕಿ.ಮೀ ಅಂತರವಿರುವ 10 ಮತ್ತು 11 ಕಂಬದ ಮಧ್ಯಭಾಗ ಕುಸಿದಿತ್ತು. ಈ ಸಂಬಂಧ ತನಿಖೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು.
ಇದನ್ನೂ ಓದಿ: ಮಸಾಲೆ ದೋಸೆಯಲ್ಲಿ ಕಲಬೆರಕೆ ಮಾಡಿದ ಹೋಟೆಲ್ಗೆ ಬಿತ್ತು ₹2.10 ಲಕ್ಷ ದಂಡ!
ಇದೀಗ ತನಿಖೆಯ ವರದಿಯನ್ನು ಸಮಿತಿ ನೀಡಿದ್ದು, ನಿರ್ಮಾಣ ಕಾಮಗಾರಿಯ ಗುಣಮಟ್ಟ ಬಹಳ ಕಳಪೆಯಾಗಿದೆ ಎಂಬುದು ತಿಳಿದು ಬಂದಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಿಸಿದ ಗುತ್ತಿಗೆದಾರನಿಗೆ 3 ಕೋಟಿ ರೂ.ದಂಡ ವಿಧಿಸಲಾಗಿದೆ.