ಲಂಡನ್(ಇಂಗ್ಲೆಂಡ್): ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅಕ್ರಮ ವಲಸೆ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗಿದೆ. ಹೊಸ ಕಾನೂನು ಜಾರಿ ಬಳಿಕ ಮಾತನಾಡಿರುವ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಹೊಸ ಕಾನೂನಿನಲ್ಲಿ "ಕಠಿಣ" ಅಕ್ರಮ ವಲಸೆ ವಿರೋಧಿ ನೀತಿ ಜಾರಿಗೆ ಗೊಳಿಸಲಾಗಿದೆ. ಈಗ ವಿದೇಶಿ ನ್ಯಾಯಾಲಯಗಳು ವಿಮಾನಗಳನ್ನು ನಿರ್ಬಂಧಿಸುವಂತಿಲ್ಲ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ರಿಷಿ ಸುನಕ್, "ಈ ವಾರ ನಾವು ನಮ್ಮ ಗಡಿಗಳನ್ನು ಭದ್ರಪಡಿಸಿಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇತ್ತೀಚೆಗೆ ವಲಸೆ ತುಂಬಾ ಹೆಚ್ಚಾಗಿದೆ. ಅಕ್ರಮ ವಲಸೆ ಕೊನೆಗೊಳ್ಳಬೇಕು" ಎಂದು ಬರೆದುಕೊಂಡಿದ್ದಾರೆ. "ನಮ್ಮ ಹೊಸ ಮಸೂದೆ ಇದುವರೆಗೆ ಪರಿಚಯಿಸಲಾದ ನೀತಿಗಳಲ್ಲಿ ಅತ್ಯಂತ ಕಠಿಣವಾದ ಅಕ್ರಮ ವಲಸೆ - ವಿರೋಧಿ ಕಾನೂನಾಗಿದೆ. ಈ ದೇಶಕ್ಕೆ ಬರುವವರನ್ನು ಸಂಸತ್ತು ನಿಯಂತ್ರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸುನಕ್ ಅವರು ವಲಸಿಗರ ಮಗನಾಗಿದ್ದರೂ, ಅವರ ಪೋಷಕರು ಬ್ರಿಟನ್ ಅನ್ನು 'ಕಾನೂನುಬದ್ಧವಾಗಿ' ಪ್ರವೇಶಿಸಿದ್ದಾರೆ ಮತ್ತು "ಕ್ರಿಮಿನಲ್ ಗ್ಯಾಂಗ್‌ಗಳು" ದುರ್ಬಲರನ್ನು ಬಳಸಿಕೊಳ್ಳಲು ಇನ್ಮುಂದೆ ಸಾಧ್ಯವಿಲ್ಲ ಎಂದು ಹೇಳಿದರು. "ವಲಸಿಗರ ಮಗನಾಗಿ ಜನರು ಏಕೆ ಇಂಗ್ಲೆಂಡ್ಗೆ ಬರಲು ಬಯಸುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಪೋಷಕರು ಕಾನೂನುಬದ್ಧವಾಗಿ ಇಲ್ಲಿಗೆ ಬಂದರು. ದುರ್ಬಲರನ್ನು ಶೋಷಿಸುವ ಕ್ರಿಮಿನಲ್ ಗ್ಯಾಂಗ್‌ಗಳನ್ನು ನಾವು ಹೊಂದಲು ಸಾಧ್ಯವಿಲ್ಲ. ಈ ವಾರ ನಾನು ಕಠಿಣ ಅಕ್ರಮ ವಲಸೆ ವಿರೋಧಿ ಕಾನೂನನ್ನು ಘೋಷಿಸಿದ್ದೇನೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ರುವಾಂಡಾ ನೀತಿಯನ್ನು ನಿರ್ಬಂಧಿಸಿರುವ "ಕಾನೂನು ಮೆರಿ-ಗೋ-ರೌಂಡ್" ಅನ್ನು ಸರ್ಕಾರವು ಕೊನೆಗೊಳಿಸುತ್ತಿದೆ ಎಂದು ಇದೇ ವೇಳೆ ಇಂಗ್ಲೆಂಡ್ ಪ್ರಧಾನಿ ಘೋಷಿಸಿದರು. "ನಮ್ಮ ರುವಾಂಡಾ ನೀತಿಯನ್ನು ನಿಲ್ಲಿಸಲಾಗಿದೆ. ಮೆರಿ-ಗೋ-ರೌಂಡ್ ಅನ್ನು ನಾವು ಕೊನೆಗೊಳಿಸುತ್ತಿದ್ದೇವೆ. ಮಂಗಳವಾರ ನಾವು ರುವಾಂಡಾ ಸುರಕ್ಷಿತವಾಗಿದೆ ಎಂದು ಖಾತರಿಪಡಿಸುವ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ನಮ್ಮ ಒಪ್ಪಂದವು ಅದನ್ನು ಸ್ಪಷ್ಟಪಡಿಸುತ್ತದೆ. ಈ ಒಪ್ಪಂದವನ್ನು ಪೂರೈಸಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ರಿಷಿ ಸುನಕ್ ಹೇಳಿದ್ದಾರೆ.
"ಈ ವಿಮಾನಗಳನ್ನು ನಿರ್ಬಂಧಿಸಲು ನಾವು ವಿದೇಶಿ ನ್ಯಾಯಾಲಯಗಳಿಗೆ ಅವಕಾಶ ನೀಡುವುದಿಲ್ಲ. ವಿಮಾನಗಳನ್ನು ಪಡೆಯಲು ನಾನು ಏನು ಬೇಕಾದರೂ ಮಾಡುತ್ತೇವೆ" ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್ನಲ್ಲಿ ಜಾರಿಯಾಗಿರುವ ಹೊಸ ಕಾನೂನು ಮೂಲಕ ಸುಮಾರು 30 ಸಾವಿರ ವಲಸಿಗರನ್ನು ಕಡಿಮೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ನಾವು ನಿವ್ವಳ ವಲಸೆಯನ್ನು ತಗ್ಗಿಸಲು ಕ್ರಮ ತೆಗೆದುಕೊಳ್ಳುವ ಕ್ರಮವನ್ನು ಪ್ರಾರಂಭಿಸಿದ್ದೇವೆ. ನಮ್ಮ ಯೋಜನೆಗಳು ನಮ್ಮ ಅತಿ ದೊಡ್ಡ ಕಡಿತವನ್ನು ತಲುಪುವ ನಿರೀಕ್ಷೆಯಿದೆ. ನಾವು ನಮ್ಮ ವ್ಯವಸ್ಥೆಯ ದುರುಪಯೋಗವನ್ನು ಕೊನೆಗೊಳಿಸಬೇಕು ಮತ್ತು ನಮ್ಮ ಗುರಿಯನ್ನು ತಲುಪಬೇಕಿದೆ ಎಂದು ಯುಕೆ ಪಿಎಂ ಹೇಳಿದ್ದಾರೆ.
ಹೊಸ ಕಾನೂನು ಸಾಗರೋತ್ತರ ವಿದ್ಯಾರ್ಥಿಗಳು ತಮ್ಮ ಕುಟುಂಬಗಳನ್ನು ಇಂಗ್ಲೆಂಡ್ಗೆ ಕರೆತರುವುದನ್ನು ನಿಷೇಧಿಸುತ್ತದೆ. ಕಳೆದ ತಿಂಗಳು ದೇಶದ ಸುಪ್ರೀಂ ಕೋರ್ಟ್ ರುವಾಂಡಾ ಯೋಜನೆಯನ್ನು ನಿರ್ಬಂಧಿಸಿದ ನಂತರ ಯುಕೆ ಸರ್ಕಾರ ಹೊಸ ತುರ್ತು ಕಾನೂನನ್ನು ಅಂಗೀಕರಿಸಿದೆ. (ANI)
ಇದನ್ನು ಓದಿ: 'ವ್ಯಾಸಂಗದ ವೀಸಾ'ಗಾಗಿ ತೋರಿಸಬೇಕಾದ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ದ್ವಿಗುಣಗೊಳಿಸಿದ ಕೆನಡಾ