ETV Bharat / international

ಇಥಿಯೋಪಿಯಾಗೆ ಪಲಾಯನ ಮಾಡಿದ 70 ಸಾವಿರ ಸುಡಾನ್ ಪ್ರಜೆಗಳು

Sudan Armed Conflict: ಸುಡಾನ್​ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷದ ಕಾರಣದಿಂದ ಜನ ನಿರಂತರವಾಗಿ ದೇಶ ತೊರೆಯುತ್ತಿದ್ದಾರೆ. ಕಳೆದ ಕೆಲವೇ ದಿನಗಳಲ್ಲಿ ಸುಮಾರು 70 ಸಾವಿರ ಸುಡಾನ್ ಪ್ರಜೆಗಳು ಇಥಿಯೋಪಿಯಾಗೆ ಪಲಾಯನ ಮಾಡಿದ್ದಾರೆ.

Almost 70,000 people enter Ethiopia from Sudan: IOM

author img

By

Published : Jul 27, 2023, 5:02 PM IST

ಅಡಿಸ್ ಅಬಾಬಾ : ಸುಮಾರು 70 ಸಾವಿರ ನಿರಾಶ್ರಿತರು ಹಿಂಸಾಚಾರ ಪೀಡಿತ ಸುಡಾನ್‌ ತೊರೆದು ಪಕ್ಕದ ಇಥಿಯೋಪಿಯಾ ಪ್ರವೇಶಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಸ್ಥೆ (International Organization for Migration -IOM) ತಿಳಿಸಿದೆ. ಸುಡಾನ್‌ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಿಂದ ಲಕ್ಷಾಂತರ ಜನ ನೆರೆಯ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಯುಎನ್ ವಲಸೆ ಏಜೆನ್ಸಿಯ ಅಂಕಿ - ಅಂಶಗಳ ಪ್ರಕಾರ ಜುಲೈ 23 ರ ಹೊತ್ತಿಗೆ ಪೂರ್ವ ಆಫ್ರಿಕಾ ದೇಶಗಳ ಅಮ್ಹಾರಾ, ಬೆನಿಶಾಂಗುಲ್ ಗುಮ್ಜ್ ಮತ್ತು ಗಂಬೆಲ್ಲಾ ಪ್ರದೇಶಗಳಲ್ಲಿನ ಹಲವಾರು ಕಡೆಗಳಲ್ಲಿ ಗಡಿ ದಾಟುವ ಸ್ಥಳಗಳ ಮೂಲಕ 69,000 ಕ್ಕೂ ಹೆಚ್ಚು ಜನರು ಇಥಿಯೋಪಿಯಾಕ್ಕೆ ಆಗಮಿಸಿದ್ದಾರೆ.

ನಿರಾಶ್ರಿತರು ಪ್ರಯಾಣಿಸಲು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಯಾಣಿಸಲು ವಾಹನಗಳಿಲ್ಲದೇ ಜನ ಪ್ರಯಾಸ ಪಡುತ್ತಿರುವ ಮಧ್ಯೆ ಮಳೆಯಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಸುಡಾನ್ ನಿರಾಶ್ರಿತರು ನಿರಂತರವಾಗಿ ಇಥಿಯೋಪಿಯಾಗೆ ಆಗಮಿಸುತ್ತಿದ್ದು, ಅವರಿಗೆ ಆಹಾರ, ಆಹಾರೇತರ ವಸ್ತುಗಳು, ನೀರು ಮತ್ತು ನೈರ್ಮಲ್ಯ ಮತ್ತು ಆರೋಗ್ಯ ಸೇವೆಗಳು ಸೇರಿದಂತೆ ಜೀವ ರಕ್ಷಕ ಸೇವೆಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ ಎಂದು ಐಓಎಂ ಹೇಳಿದೆ.

ಈ ವಾರದ ಆರಂಭದಲ್ಲಿ ಸುಡಾನ್​​ನಿಂದ ಇಥಿಯೋಪಿಯಾಗೆ ಹಿಂದಿರುಗಿರುವವರ ಪೈಕಿ ಇಥಿಯೋಪಿಯನ್ನರ ಪ್ರಮಾಣ ಶೇ 49 ರಷ್ಟಿದ್ದರೆ, ಸುಡಾನಿ ಪ್ರಜೆಗಳ ಪ್ರಮಾಣ ಶೇ 30 ರಷ್ಟಿದ್ದಾರೆ. ಏಪ್ರಿಲ್ 15 ರಂದು ಸುಡಾನ್​ ರಾಜಧಾನಿ ಖಾರ್ಟೂಮ್​ನಲ್ಲಿ ಭೀಕರ ಸಶಸ್ತ್ರ ಸಂಘರ್ಷ ಆರಂಭವಾಗಿದೆ. ಹಿಂಸಾತ್ಮಕ ಹೋರಾಟವು ಶೀಘ್ರದಲ್ಲಿಯೇ ದೇಶಾದ್ಯಂತ ವ್ಯಾಪಿಸಿತು. ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಕ್ಷಿಪ್ರ ಬೆಂಬಲ ಪಡೆಗಳ (RSF) ಅರೆಸೈನಿಕ ಗುಂಪಿನ ಮಧ್ಯೆ ಸಶಸ್ತ್ರ ಹೋರಾಟ ನಡೆಯುತ್ತಿದೆ.

ಹಿಂಸಾತ್ಮಕ ಹೋರಾಟಕ್ಕೆ ವಿರೋಧಿ ಬಣವೇ ಕಾರಣ ಎಂದು ಎರಡೂ ಬಣಗಳು ಪರಸ್ಪರ ಆರೋಪಿಸುತ್ತಿವೆ. ಸುಡಾನ್ ಸಂಘರ್ಷದಲ್ಲಿ ಇಲ್ಲಿಯವರೆಗೆ 3,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಮತ್ತು 6,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

10 ಸಾವಿರ ಜನರ ಸಾವು ಎಂದ ಬುಡಕಟ್ಟು ಮುಖಂಡರು: ಕಳೆದ ಎರಡು ತಿಂಗಳುಗಳಲ್ಲಿ ಸುಡಾನ್​ನ ವೆಸ್ಟ್ ಡಾರ್ಫರ್‌ ಪ್ರದೇಶದಲ್ಲಿ 10,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಬುಡಕಟ್ಟು ಮುಖಂಡರು ಹೇಳಿದ್ದಾರೆ. ಜನಾಂಗೀಯ ಮಸಲಿತ್ ಬುಡಕಟ್ಟಿನ ಸಾದ್ ಅಬ್ದೆಲ್ ರಹ್ಮಾನ್ ಬಹ್ರ್ ಅಲ್-ದಿನ್ ಪ್ರಕಾರ, ಸರಿಸುಮಾರು ಶೇಕಡಾ 80ರಷ್ಟು ನಿವಾಸಿಗಳು ಪಶ್ಚಿಮ ಡಾರ್ಫರ್ ರಾಜಧಾನಿ ಎಲ್ ಜೆನಿನಾದಿಂದ ಪಲಾಯನ ಮಾಡಿದ್ದಾರೆ. ಸುಮಾರು 16,000 ಜನರ ಪಡೆ ನಗರದ ಮೇಲೆ ದಾಳಿ ಮಾಡಿದೆ ನಾಗರಿಕರನ್ನು ಕೊಂದಿದೆ ಮತ್ತು ಮನೆಗಳನ್ನು, ಬ್ಯಾಂಕ್​​ಗಳನ್ನು ಲೂಟಿ ಮಾಡಿದೆ ಎಂದು ಸಾದ್ ಅಬ್ದೆಲ್ ರಹ್ಮಾನ್ ಆರೋಪಿಸಿದರು.

ಎಲ್​​ ಜೆನಿನಾ ಪಟ್ಟಣವು ಈಗ ದೆವ್ವದ ನಗರದಂತಾಗಿದೆ. ಇಲ್ಲಿನ ಬಹುತೇಕ ಜನ ಸ್ಥಳಾಂತರವಾಗಿದ್ದಾರೆ. ಹೋರಾಟ ಆರಂಭವಾಗುವುದಕ್ಕಿಂತ ಮುಂಚೆ 5 ಲಕ್ಷ ಜನಸಂಖ್ಯೆ ಹೊಂದಿದ್ದ ಈ ಪಟ್ಟಣದ ಬಹುತೇಕ ಜನ ಚಾಡ್​ಗೆ ಪಲಾಯನ ಮಾಡಿದ್ದಾರೆ ಎಂದು ಬುಡಕಟ್ಟು ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Mission Gaganyaan: SMPS ಎಂಜಿನ್​​ನ ಹಾಟ್​ ಟೆಸ್ಟ್​ ಯಶಸ್ವಿಯಾಗಿ ಪೂರೈಸಿದ ISRO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.