ETV Bharat / international

ಸೆಕ್ವಾಚಿಯ ಮನೆಯೊಂದರಲ್ಲಿ 6 ಮಂದಿ ಶವ ಪತ್ತೆ: ಗುಂಡೇಟಿನಿಂದ ಸಾವು, ಮನೆಗೂ ಬೆಂಕಿ - ಸೆಕ್ವಾಚಿಯಲ್ಲಿ ಗುಂಡಿನ ದಾಳಿ

ಅಮೆರಿಕದ ಸೆಕ್ವಾಚಿ ಎಂಬಲ್ಲಿ ಮನೆಯೊಂದರಲ್ಲಿ 6 ಮಂದಿ ಶವವಾಗಿ ಪತ್ತೆಯಾಗಿದ್ದು, ಅವರನ್ನು ಗುಂಡಿಕ್ಕಲಾಗಿದೆ. ಇದು ಹತ್ಯೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಅಮೆರಿಕದಲ್ಲಿ ಗುಂಡಿನ ದಾಳಿ
ಅಮೆರಿಕದಲ್ಲಿ ಗುಂಡಿನ ದಾಳಿ
author img

By

Published : Jun 17, 2023, 6:50 AM IST

ಸೆಕ್ವಾಚಿ: ಅಮೆರಿಕದಲ್ಲಿ ಗುಂಡಿನ ದಾಳಿ ನಿಲ್ಲುವ ಮಾತೇ ಎಂಬಂತಾಗಿದೆ. ಸೆಕ್ವಾಚಿಯ ಟೆನ್ನೆಸ್ಸಿ ಎಂಬಲ್ಲಿನ ಒಂಟಿ ಮನೆಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಗೆ ಬೆಂಕಿ ಹಚ್ಚಲಾಗಿದ್ದು, ದಾಳಿಯಲ್ಲಿ ಗುಂಡೇಟಿಗೆ ತೀವ್ರ ಗಾಯಗೊಂಡಿದ್ದ 7ನೇ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒಂಟಿ ಮನೆಯಲ್ಲಿ ನಡೆದ ಗುಂಡಿನ ದಾಳಿ ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮನೆ ಬೆಂಕಿಗೆ ಆಹುತಿಯಾದಾಗ ಜನರು ನೀಡಿದ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮಕ್ಕಳು ಸೇರಿ 6 ಮಂದಿ ಸಾವನ್ನಪ್ಪಿದ್ದು, ಓರ್ವ ತೀವ್ರ ಗಾಯಗೊಂಡಿದ್ದು ಗೊತ್ತಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಗಾಯಗೊಂಡಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಕುಟುಂಬ ಕಾರಣಕ್ಕೆ ನಡೆದ ದಾಳಿಯಾಗಿದೆ ಎಂದು ಹೇಳಲಾಗಿದೆ. ಮೃತ ಗ್ಯಾರಿ ಬಾರ್ನೆಟ್​ ಎಂಬಾತನನ್ನು ಶಂಕಿತ ದಾಳಿಕೋರ ಎಂದು ಹೇಳಲಾಗಿದೆ. ಅಲ್ಲದೇ ಸ್ಥಳದಲ್ಲಿ ಆತನ ಮಾಜಿ ಪತ್ನಿ ರೆಜಿನಾ ಬಾರ್ನೆಟ್​ ಶವವಾಗಿ ಸಿಕ್ಕಿದ್ದಾಳೆ.

ಭೀತಿ ವ್ಯಕ್ತಪಡಿಸಿದ್ದ ಮಹಿಳೆ: ಇದಕ್ಕೂ ಮೊದಲು ಮೃತ ಮಹಿಳೆ ರೆಜಿನಾ ಬಾರ್ನೆಟ್​ ತನಗಿರುವ ಕೊಲೆ ಭೀತಿಯನ್ನು ಕೋರ್ಟ್​ ಮುಂದೆ ವ್ಯಕ್ತಪಡಿಸಿದ್ದಳು. ಮಾಜಿ ಪತಿ ತನ್ನ ಮೇಲೆ ದ್ವೇಷ ಸಾಧಿಸುತ್ತಿದ್ದು, ಹತ್ಯೆ ಮಾಡುವ ಸಾಧ್ಯತೆ ಇದೆ ಎಂದು ಕೋರ್ಟ್​ಗೆ ಸಲ್ಲಿಸಿದ ತಕರಾರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮನೆಯಲ್ಲಿ ಗ್ಯಾರಿ 50 ರಿಂದ 60 ಗನ್​ಗಳನ್ನು ಹೊಂದಿದ್ದಾನೆ. ಆತ ಕುಡಿದು ತನ್ನ ಮೇಲೆ ಗುಂಡಿನ ದಾಳಿ ಮಾಡಲಿದ್ದಾರೆ ಎಂದು ಮಹಿಳೆ ರೆಜಿನಾ ಆತಂಕ ತೋಡಿಕೊಂಡಿದ್ದರು.

ಒಂಟಿ ಮನೆಯಲ್ಲಿ ನಡೆದ ದುರಂತದಲ್ಲಿ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಅದರಲ್ಲಿ ಮೂವರು ಮಕ್ಕಳಿದ್ದಾರೆ. ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. 7ನೇ ವ್ಯಕ್ತಿ ತೀವ್ರ ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಗೂ ಬೆಂಕಿ ಹಚ್ಚಲಾಗಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ದೃಢವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಟೆನ್ನೆಸ್ಸೀ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತಂಡ ಹೇಳಿಕೆಯಲ್ಲಿ ತಿಳಿಸಿದೆ.

ಮನೆಯಲ್ಲಿ ಸಿಕ್ಕ ಗನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತ ಎಲ್ಲಾ ಆರು ಜನರ ಶವಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರ ಮೇಲೆ ಫೈರಿಂಗ್: ಅಮೆರಿಕದ ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ಖಾಸಗಿ ನಿವಾಸದಲ್ಲಿ ಈಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರು. ಮೂವರು ಗಾಯಗೊಂಡ ಘಟನೆ ನಡೆದಿತ್ತು.

ಅನ್ನಾಪೊಲಿಸ್ ಯುನೈಟೆಡ್ ಸ್ಟೇಟ್ಸ್​ನ ಕ್ಯಾಪಿಟಲ್ ಹಿಲ್​ನಿಂದ 30 ಮೈಲಿ ದೂರದಲ್ಲಿದೆ. ರಾಜ್ಯದ ರಾಜಧಾನಿ ನಗರವಾದ ಪ್ಯಾಡಿಂಗ್‌ಟನ್ ಪ್ಲೇಸ್‌ನ ಥೌಸಂಡ್​ ಬ್ಲಾಕ್‌ನಲ್ಲಿ ಗುಂಡಿನ ಚಕಮಕಿ ಹಾಗೂ ಗುಂಡಿನ ದಾಳಿ ನಡೆದಿತ್ತು. ಶಂಕಿತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Mass shooting: ಮೇರಿಲ್ಯಾಂಡ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ: ಮೂವರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.