ETV Bharat / international

Port Sudan Plane crash: ಪೋರ್ಟ್ ಸುಡಾನ್ ನಿಲ್ದಾಣದಲ್ಲಿ ನಾಗರಿಕ ವಿಮಾನ ಅಪಘಾತ: 9 ಮಂದಿ ಸಾವು - ಸುಡಾನ್ ಯುದ್ದ

Port Sudan Plane crash: ಪೋರ್ಟ್ ಸುಡಾನ್ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತ ಸಂಭವಿಸಿದೆ.

plane crash
ವಿಮಾನ ಅಪಘಾತ
author img

By

Published : Jul 24, 2023, 2:23 PM IST

ಸುಡಾನ್ : ಪೋರ್ಟ್ ಸುಡಾನ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನವೊಂದು ಅಪಘಾತಕ್ಕೀಡಾಗಿದ್ದು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಸಶಸ್ತ್ರ ಪಡೆ ತಿಳಿಸಿದೆ. ಇಲ್ಲಿನ ಸೇನೆ ಮತ್ತು ಅರೆಸೇನಾಪಡೆಯ ನಡುವಿನ ಅಂತರ್​ಯುದ್ದ ಭಾನುವಾರ 100ನೇ ದಿನ ತಲುಪುತ್ತಿದ್ದಂತೆ ಈ ಅವಘಡ ಸಂಭವಿಸಿದೆ.

ನಿನ್ನೆ ಸಂಜೆ ವೇಳೆಗೆ ವಿಮಾನ ಪತನಗೊಂಡಿದೆ. ಟೇಕ್-ಆಫ್ ಸಮಯದಲ್ಲಿ ಕಂಡು ಬಂದ ತಾಂತ್ರಿಕ ದೋಷವೇ ಕಾರಣ ಎಂದು ಸೇನಾ ವಕ್ತಾರರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮೃತಪಟ್ಟ ಒಂಬತ್ತು ಮಂದಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ. ಓರ್ವ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸೂಡಾನ್‌ ಹಿಂಸಾಚಾರದಲ್ಲಿ ಇದುವರೆಗೆ 1,136 ಮಂದಿ ಸಾವು : ಈ ವರ್ಷದ ಏಪ್ರಿಲ್ 15 ರಿಂದ ರಾಜಧಾನಿ ಖಾರ್ಟೂಮ್ ಮತ್ತು ಇತರೆ ಪ್ರದೇಶಗಳಲ್ಲಿ ಸುಡಾನ್ ಸೇನೆ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಭೀಕರ ಸಂಘರ್ಷ ನಡೆಯುತ್ತಿದೆ. ಈ ಅಂತರ್ ​ಯುದ್ದವು ಭಾನುವಾರ (ನಿನ್ನೆ) 100ನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ಸುಡಾನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಇದುವರೆಗೆ ಹಿಂಸಾಚಾರದಲ್ಲಿ ಕನಿಷ್ಠ 1,136 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಹಾಗೆಯೇ, ಸುಮಾರು 3 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸುಡಾನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ನೆರೆ ದೇಶಗಳಾದ ಈಜಿಪ್ಟ್, ಚಾಡ್ ಮತ್ತು ದಕ್ಷಿಣ ಸುಡಾನ್‌ಗೆ ಪಲಾಯನಗೈದಿದ್ದಾರೆ.

ಇದನ್ನೂ ಓದಿ : Sudan War : ಒಮಡ್ರುಮನ್​ ನಗರದ ಮೇಲೆ ವೈಮಾನಿಕ ದಾಳಿ; 22 ಜನರು ಸಾವು

ರಾಕೆಟ್ ದಾಳಿಗೆ 16 ಮಂದಿ ಬಲಿ : ಕಳೆದ ಶನಿವಾರ (ಜುಲೈ 22) ರಾತ್ರಿ ಸುಡಾನ್‌ನಲ್ಲಿ ನಡೆದ ರಾಕೆಟ್ ದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದರು. ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ಯುದ್ಧದ ಸಮಯದಲ್ಲಿ ಎರಡೂ ಕಡೆಯಿಂದ ರಾಕೆಟ್‌ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ನಾಗರಿಕರು ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇದನ್ನೂ ಓದಿ : Sudan War : ಸುಡಾನ್​ನಲ್ಲಿ ಮಾನವೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣ

ವಿದೇಶಿ ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಸುಡಾನ್​ ದೇಶದಲ್ಲಿ ಸಂಘರ್ಷ ನಡೆಯುವುದು ಇದೇ ಮೊದಲಲ್ಲ. ಆದರೆ, ಈ ಬಾರಿಯ ಹೋರಾಟವು ರಾಷ್ಟ್ರದ ದೂರದ ಪ್ರದೇಶದ ಬದಲಿಗೆ ರಾಜಧಾನಿಯಲ್ಲೇ ನಡೆಯುತ್ತಿದೆ. ಸುಡಾನ್‌ನ 7 ನೆರೆಹೊರೆಯ ದೇಶಗಳ ಪೈಕಿ ಇಥಿಯೋಪಿಯಾ, ಚಾಡ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಲಿಬಿಯಾ ಮತ್ತು ದಕ್ಷಿಣ ಸುಡಾನ್ ಈ ಐದು ದೇಶಗಳು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕ್ರಾಂತಿ ಅಥವಾ ಸಂಘರ್ಷವನ್ನು ಎದುರಿಸಿವೆ.

ಇದನ್ನೂ ಓದಿ : Sudan Conflict : ಸುಡಾನ್ ಸಂಘರ್ಷ ಕೊನೆಗಾಣಿಸಲು ಸಾರ್ವಭೌಮ ಮಂಡಳಿ ಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.