ಮ್ಯೂನಿಚ್: ಜರ್ಮನಿಯಲ್ಲಿ ಇಂದಿನಿಂದ ಆರಂಭವಾಗಿರುವ ಜಿ7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿರುವ ಮೋದಿ ಮಾತುಕತೆ ನಡೆಸಿದರು.
ಶೃಂಗಸಭೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸ್ವಾಗತಿಸಿದರು. ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಿ7 ರಾಷ್ಟ್ರಗಳ ನಾಯಕರ ಜೊತೆ ಕೈ ಕುಲುಕಿ ಕುಶಲೋಪರಿ ಹಂಚಿಕೊಂಡರು. ಬಳಿಕ ನಡೆದ ಸಭೆಯಲ್ಲಿ ಅವರು ಪಾಲ್ಗೊಂಡರು.
-
#WATCH | The leaders of the G7 nations assemble for the Summit at Schloss Elmau in Germany.
— ANI (@ANI) June 27, 2022 " class="align-text-top noRightClick twitterSection" data="
Prime Minister Narendra Modi is attending the G7 Summit under the German Presidency, at the invitation of Chancellor of Germany Olaf Scholz.
(Source: DD) pic.twitter.com/cVx5V6MWkK
">#WATCH | The leaders of the G7 nations assemble for the Summit at Schloss Elmau in Germany.
— ANI (@ANI) June 27, 2022
Prime Minister Narendra Modi is attending the G7 Summit under the German Presidency, at the invitation of Chancellor of Germany Olaf Scholz.
(Source: DD) pic.twitter.com/cVx5V6MWkK#WATCH | The leaders of the G7 nations assemble for the Summit at Schloss Elmau in Germany.
— ANI (@ANI) June 27, 2022
Prime Minister Narendra Modi is attending the G7 Summit under the German Presidency, at the invitation of Chancellor of Germany Olaf Scholz.
(Source: DD) pic.twitter.com/cVx5V6MWkK
ಎರಡು ದಿನ ನಡೆಯುವ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಪರಿಸರ, ಇಂಧನ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಕುರಿತು ನಡೆಯುವ ಸಭೆಯಲ್ಲಿ ಮಾತನಾಡಲಿದ್ದಾರೆ.
ಇದರ ಜೊತೆಗೆ, ಶೃಂಗದಲ್ಲಿ ಭಾಗವಹಿಸುವ ದೇಶಗಳ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದು, ಇಂದು ಬೆಳಗ್ಗೆ ಅರ್ಜೆಂಟಿನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿ, ಉಭಯ ರಾಷ್ಟ್ರಗಳ ಸಹಕಾರದ ಕುರಿತು ಮಾತುಕತೆ ನಡೆಸಿದ್ದಾರೆ.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಈ ಶೃಂಗಸಭೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಭಾರತ-ಅರ್ಜೆಂಟಿನಾ ಮಾತುಕತೆ; ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಆದ್ಯತೆ