ETV Bharat / international

ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಇನ್ನು ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥ

ಎಲ್ಲ ನಿರ್ಧಾರಗಳನ್ನು ಕಾನೂನು ಮತ್ತು ಸಂವಿಧಾನದ ಪ್ರಕಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ ಈ ನೇಮಕಾತಿಯನ್ನು ರಾಜಕೀಯ ದೃಷ್ಠಿಯಿಂದ ನಾಗರಿಕರು ನೋಡಬಾರದು ಎಂದು ಸೇನಾ ಮುಖ್ಯಸ್ಥ ಕಮರ್​ ಜಾವೇದ್​ ಬಾಜ್ವಾ ಹೇಳಿದ್ದಾರೆ.

Pakistan: Lieutenant General Asim Munir is the new Army Chief
ಪಾಕಿಸ್ತಾನ: ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಇನ್ನು ಹೊಸ ಸೇನಾ ಮುಖ್ಯಸ್ಥ
author img

By

Published : Nov 24, 2022, 3:30 PM IST

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗುರುವಾರ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ಹೊಸ ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರಸ್ತುತ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಮೂರು ವರ್ಷಗಳ ವಿಸ್ತರಣೆಯ ನಂತರ ನವೆಂಬರ್ 29 ರಂದು ನಿವೃತ್ತರಾಗಲಿದ್ದಾರೆ.

ಸಚಿವ ಮರಿಯುಮ್ ಔರಂಗಜೇಬ್ ಅವರು, ಜಂಟಿ ಮುಖ್ಯಸ್ಥರ ಸಮಿತಿಯ (CJCSC) ಅಧ್ಯಕ್ಷರಾಗಿ ಲೆಫ್ಟಿನೆಂಟ್ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆ ನೇಮಕಾತಿಗಳ ಮಾಹಿತಿಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಇಬ್ಬರೂ ಅಧಿಕಾರಿಗಳಿಗೆ ಫೋರ್ ಸ್ಟಾರ್ ಜನರಲ್‌ಗಳಾಗಿ ಬಡ್ತಿ ನೀಡಲಾಗಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ನೇಮಕಾತಿಯ ಸಲಹೆಯನ್ನು ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಕಳುಹಿಸಿದ ನಂತರ ಮಾಧ್ಯಮಗಳಿಗೆ ತಿಳಿಸಿದರು. ಹಾಗೆ ಮಾತನಾಡಿದ ಅವರು ಎಲ್ಲ ನಿರ್ಧಾರಗಳನ್ನು ಕಾನೂನು ಮತ್ತು ಸಂವಿಧಾನದ ಪ್ರಕಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ ಈ ನೇಮಕಾತಿಯನ್ನು ರಾಜಕೀಯ ದೃಷ್ಠಿಯಿಂದ ನಾಗರಿಕರು ನೋಡಬಾರದು ಎಂದು ಹೇಳಿರುವುದನ್ನು ಡಾನ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಅಮೆರಿಕದ ವಾಲ್​​ಮಾರ್ಟ್​ ಮಳಿಗೆಯಲ್ಲಿ ಗುಂಡಿನ ದಾಳಿ: ಹಲವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.