ETV Bharat / international

ಮಿಸ್ಸಿಸಿಪಿಯಲ್ಲಿ ಸುಂಟರಗಾಳಿ: 26 ಜನ ಬಲಿ, ನೂರಾರು ಜನರಿಗೆ ಗಾಯ - ಸುಂಟರಗಾಳಿಯಿಂದ ಅಂಗಡಿಗಳು ಮತ್ತು ಮನೆಗಳು

ಅಮೆರಿಕದ ಮಿಸ್ಸಿಸಿಪಿ ಪ್ರಾಂತ್ಯದಲ್ಲಿ ಬೀಸಿದ ಭೀಕರ ಚಂಡಮಾರುತದದಿಂದ 26 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

Mississippi tornado leaves 26 people dead, dozens injured

author img

By

Published : Mar 26, 2023, 7:39 PM IST

ಮಿಸ್ಸಿಸಿಪಿ (ಅಮೆರಿಕ) : ದಕ್ಷಿಣ ಅಮೆರಿಕ ರಾಜ್ಯವಾದ ಮಿಸ್ಸಿಸಿಪಿಯಲ್ಲಿ ಉಂಟಾದ ವಿನಾಶಕಾರಿ ಸುಂಟರಗಾಳಿಯಲ್ಲಿ ಸತ್ತವರ ಸಂಖ್ಯೆ 26 ಕ್ಕೆ ತಲುಪಿದೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುಂಟರಗಾಳಿಯಿಂದ ಅಂಗಡಿಗಳು ಮತ್ತು ಮನೆಗಳು ಅಕ್ಷರಶಃ ತುಂಡಾಗಿ ಧ್ವಂಸಗೊಂಡಿವೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ತಡರಾತ್ರಿ ಅಮೆರಿಕದ ದಕ್ಷಿಣದ ಪ್ರದೇಶದಲ್ಲಿ ಆಕಾಶದಲ್ಲಿ ಮೊದಲಿಗೆ ವಿನಾಶಕಾರಿ ಸುಂಟರಗಾಳಿ ಕಾಣಿಸಿಕೊಂಡಿತ್ತು. ನಂತರ ಅದು ಭೂಮಿಗೆ ಅಪ್ಪಳಿಸಿದಾಗ ಮಿಸ್ಸಿಸಿಪಿ ಮತ್ತು ಅಲಬಾಮಾ ಪ್ರಾಂತ್ಯಗಳಾದ್ಯಂತ ವಿನಾಶ ಸೃಷ್ಟಿಸಿದೆ. ರೋಲಿಂಗ್ ಫೋರ್ಕ್‌ನ ಸಣ್ಣ ನಗರ ಮಿಸ್ಸಿಸಿಪಿಯನ್ನು ಸುಂಟರಗಾಳಿ ಬಹುತೇಕ ಅಳಿಸಿಹಾಕಿದೆ.

ಸುಂಟರಗಾಳಿ ಬಹುತೇಕ ಎಲ್ಲವನ್ನೂ ಚೂರುಚೂರು ಮಾಡಿದೆ. ದಶಕಗಳಿಂದ ಬೆಳೆದು ನಿಂತ ಮರಗಳು, ಬೇರುಗಳು ಮತ್ತು ಎಲ್ಲವನ್ನೂ ಕಿತ್ತು ಮನೆಗಳು ಮತ್ತು ವಾಹನಗಳ ಮೇಲೆ ಬೀಳಿಸಿದೆ. ಅಗ್ನಿಶಾಮಕ ಠಾಣೆಯೇ ಹಾರಿ ಹೋಗಿದೆ. ಮನೆಗಳಲ್ಲಿನ ಕೊಠಡಿಗಳೇ ಮಾಯವಾಗಿವೆ. ಸುಂಟರಗಾಳಿಯಿಂದ ಮೃತರ ಕುಟುಂಬಗಳಿಗೆ ಯುಎಸ್ ಅಧ್ಯಕ್ಷ ಬಿಡೆನ್ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರಿಗೆ ಸರ್ಕಾರ ಸಂಪೂರ್ಣ ಸಹಾಯ ನೀಡುವುದಾಗಿ ಹೇಳಿದ್ದಾರೆ.

ವಿನಾಶಕಾರಿ ಚಂಡಮಾರುತದಿಂದ ನೊಂದವರಿಗೆ ಮತ್ತು ಅವರ ಸಹ ಅಮೆರಿಕನ್ನರಿಗೆ ಸಹಾಯ ಮಾಡುತ್ತಿರುವ ತುರ್ತು ಸಿಬ್ಬಂದಿಗೆ ನಾವು ಸಾಧ್ಯವಾದ ಎಲ್ಲ ಸಹಕಾರ ನೀಡುತ್ತಿದ್ದೇವೆ. ಎಲ್ಲಿಯವರೆಗೆ ಸಹಾಯದ ಅಗತ್ಯವಿದೆಯೋ ಅಲ್ಲಿಯವರೆಗೂ ನಾವು ಸಹಾಯಕ್ಕಾಗಿ ನಿಲ್ಲುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ನೀವು ಚೇತರಿಸಿಕೊಳ್ಳಲು ಅಗತ್ಯವಾದ ಬೆಂಬಲ ನೀಡುತ್ತೇವೆ ಎಂದು ಬಿಡೆನ್ ಹೇಳಿದರು.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸಂತಾಪ: ಚಂಡಮಾರುತದ ಕುರಿತಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅಧ್ಯಕ್ಷ ಜೋ ಬಿಡೆನ್, ನಾವು ಇನ್ನೂ ಹಾನಿಯ ಪ್ರಮಾಣವನ್ನು ನಿರ್ಣಯಿಸುತ್ತಿದ್ದೇವೆ. ಈ ಮಧ್ಯೆ ನಮ್ಮ ಅನೇಕ ಅಮೆರಿಕನ್ನರು ಕುಟುಂಬ ಮತ್ತು ಸ್ನೇಹಿತರಿಗಾಗಿ ದುಃಖಿಸುತ್ತಿರುವುದು ಮಾತ್ರವಲ್ಲದೆ ಅವರು ತಮ್ಮ ಮನೆಗಳು ಮತ್ತು ವ್ಯವಹಾರಗಳನ್ನು ಸಹ ಕಳೆದುಕೊಂಡಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು. ಮಿಸ್ಸಿಸ್ಸಿಪ್ಪಿ ಗವರ್ನರ್ ಟೇಟ್ ರೀವ್ಸ್ ಅವರನ್ನು ಜೋ ಬಿಡೆನ್ ಸಂಪರ್ಕಿಸಿದ್ದು, ಚಂಡಮಾರುತದ ಪರಿಣಾಮಗಳಿಂದ ಜನತೆ ಚೇತರಿಸಿಕೊಳ್ಳುವಂತೆ ಸಹಕಾರ ನೀಡಲು ಕೋರಿದ್ದಾರೆ.

ಎಲ್ಲ ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಈ ಚಂಡ ಮಾರುತಗಳು ಉಂಟುಮಾಡಿದ ವಿನಾಶ ಮತ್ತು ಜೀವಹಾನಿಯಿಂದ ನಾನು ವ್ಯಾಕುಲನಾಗಿದ್ದೇನೆ ಎಂದು ರೀವ್ಸ್ ಹೇಳಿದರು. ಮಿಸ್ಸಿಸಿಪಿ ರಾಜ್ಯವು ಅಗತ್ಯವಿರುವ ಎಲ್ಲರನ್ನು ಬೆಂಬಲಿಸಲು ಮತ್ತು ಅವರಿಗೆ ಪ್ರತಿಯೊಂದು ಸಂಪನ್ಮೂಲ ತಲುಪಿಸಲು ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ. ಸಂತ್ರಸ್ತರು ಮತ್ತೆ ಚೇತರಿಸಿಕೊಳ್ಳುವಂತೆ ನಾವು ಸಹಾಯ ಮಾಡಲಿದ್ದೇವೆ ಎಂದು ರೀವ್ಸ್​ ತಿಳಿಸಿದರು. ಹೇಳಿಕೆಯೊಂದರ ಪ್ರಕಾರ, ಮಿಸ್ಸಿಸಿಪಿ ಗವರ್ನರ್ ಟೇಟ್ ರೀವ್ಸ್ ಅವರು ಶುಕ್ರವಾರ ರಾಜ್ಯದಾದ್ಯಂತ ಬೀಸಿದ ತೀವ್ರ ಬಿರುಗಾಳಿಗಳಿಂದ ಪ್ರಭಾವಿತವಾಗಿರುವ ಎಲ್ಲಾ ಕೌಂಟಿಗಳಲ್ಲಿ ಶನಿವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಇದನ್ನೂ ಓದಿ : ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 26 ಜನ ಬಲಿ: ಗಂಟೆಗೆ 270 ಮೈಲಿ ವೇಗದಲ್ಲಿ ಗಾಳಿಯ ಅಬ್ಬರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.