ಮನಿಲಾ: ಫಿಲಿಪ್ಪೀನ್ಸ್ ಮತ್ತು ಮ್ಯಾನ್ಮಾರ್ನಲ್ಲಿ ಶುಕ್ರವಾರ ಭೂಕಂಪ ಸಂಭವಿಸಿದೆ. 6.7 ತೀವ್ರತೆಯ ಭೂಕಂಪವು ದಕ್ಷಿಣ ಫಿಲಿಪೈನ್ಸ್‌ನ ಕೆಲವು ಶಾಪಿಂಗ್ ಮಾಲ್‌ಗಳ ಸೀಲಿಂಗ್‌ಗಳು ಕುಸಿದು ಬಿದ್ದಿವೆ. ಈ ವೇಳೆ ಅನೇಕ ಜನರು ಗಾಯಗೊಂಡಿದ್ದು, ಕೆಲವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾನ್ಮಾರ್‌ನಲ್ಲೂ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಕಂಪನಗಳ ಪರಿಣಾಮ ಚೀನಾ ಮತ್ತು ಥೈಲ್ಯಾಂಡ್‌ನಲ್ಲೂ ಕಂಡುಬಂದಿದೆ.
ಫಿಲಿಪೈನ್ಸ್‌ನಲ್ಲಿ ಭೂಕಂಪ: ಫಿಲಿಪೈನ್ಸ್ ದೇಶ ಮತ್ತೊಮ್ಮೆ ಭಾರೀ ಭೂಕಂಪದಿಂದ ತತ್ತರಿಸಿದೆ. ಶುಕ್ರವಾರ ದಕ್ಷಿಣ ಫಿಲಿಪೈನ್ಸ್‌ನ ಮಿಂಡನಾವೊ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಜರ್ಮನಿಯ ಭೂವಿಜ್ಞಾನ ಸಂಶೋಧನಾ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರಬಿಂದು 10 ಕಿಲೋಮೀಟರ್ ಆಳದಲ್ಲಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಸುನಾಮಿ ಸಂಭವಿಸುವ ಸಾಧ್ಯತೆಯಿಲ್ಲ ಎಂದು ಘೋಷಿಸಿದೆ.
ನಾಪತ್ತೆಯಾಗಿರುವ ಇಬ್ಬರಿಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿರುವಂತೆಯೇ ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ 6.7 ತೀವ್ರತೆಯ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೆ ಏರಿದೆ. ಸ್ಥಳೀಯ ವಿಪತ್ತು ಅಧಿಕಾರಿಗಳು ಶನಿವಾರ ಈ ಮಾಹಿತಿ ನೀಡಿದರು. ಶುಕ್ರವಾರ ಮಧ್ಯಾಹ್ನ ಭೂಕಂಪನವು ಮಿಂಡನಾವೊ ದ್ವೀಪದಿಂದ 60 ಕಿಮೀ (37 ಮೈಲಿಗಳು) ಆಳದಲ್ಲಿ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ತಿಳಿಸಿದೆ.
ಇದು ತಾನು ಕಂಡ ಅತ್ಯಂತ ಪ್ರಬಲ ಭೂಕಂಪ ಎಂದು ಶಿಯಾ ಲೈರಾನ್ ಹೇಳಿದ್ದಾರೆ. ಭೂಕಂಪದಿಂದ ಆತಂಕಗೊಂಡ ಜನರು ಗಾಬರಿಯಿಂದ ಓಡಿಹೋದರು ಎನ್ನಲಾಗಿದೆ. ದಕ್ಷಿಣ ಕೋಟಾಬಾಟೊದ ಜನರಲ್ ಸ್ಯಾಂಟೋಸ್ ಸಿಟಿಯ ರೇಡಿಯೋ ಉದ್ಘೋಷಕ ಲೆನ್ನಿ ಅರನೆಗೊ ಭೂಕಂಪದ ಬಗ್ಗೆ ಪ್ರತಿಕ್ರಿಯಿಸಿ, ಬಲವಾದ ಭೂಕಂಪದಿಂದ ಗೋಡೆಗಳು ಕುಸಿದು ಬಿದ್ದಿದ್ದಾವೆ. ಕಂಪ್ಯೂಟರ್‌ಗಳು ಕೆಳಗೆ ಬಿದ್ದು ಹಾನಿಗೊಂಡಿವೆ ಎಂದು ಹೇಳಿದರು. ಭೂಕಂಪ ಸಂಭವಿಸಿದಾಗ ಜನರಲ್ ಸ್ಯಾಂಟೋಸ್ ಸಿಟಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟಾರ್ಮ್ಯಾಕ್‌ಗೆ ಸ್ಥಳಾಂತರಿಸಲಾಯಿತು ಎಂದು ವಿಮಾನದಲ್ಲಿದ್ದ ಪ್ರಯಾಣಿಕರ ಮೈಕೆಲ್ ರಿಕಾಫೋರ್ಟ್ ಹೇಳಿದ್ದಾರೆ.
ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗಿದೆ ಮತ್ತು ಹೆಚ್ಚಿನ ರಸ್ತೆಗಳು ಸಂಚರಿಸಬಹುದಾಗಿದೆ. ಹೆಚ್ಚಿನ ಮನೆಗಳು ಮತ್ತು ಕಟ್ಟಡಗಳಿಗೆ ಸಣ್ಣ ಪುಟ್ಟ ಹಾನಿಯಾಗಿದೆ ಎಂದು ವಿಪತ್ತು ಅಧಿಕಾರಿಗಳು ತಿಳಿಸಿದ್ದಾರೆ. "ರಿಂಗ್ ಆಫ್ ಫೈರ್" ಉದ್ದಕ್ಕೂ ಇರುವ ಫಿಲಿಪೈನ್ಸ್‌ನಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ. ಇದು ಹೆಚ್ಚು ಭೂಕಂಪನ ಮತ್ತು ಜ್ವಾಲಾಮುಖಿ ಕೇಂದ್ರಬಿಂದುವಾಗಿದೆ. ಇದು ಜಪಾನ್‌ನಿಂದ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶದಾದ್ಯಂತ ವ್ಯಾಪಿಸಿದೆ. ಜೊತೆಗೆ ಕಳೆದ ವಾರ 10 ದಿನಗಳಲ್ಲಿ ಹಲವು ದೇಶಗಳಲ್ಲಿ ಭೂಕಂಪ ಸಂಭವಿಸಿದ್ದು ಗೊತ್ತೇ ಇದೆ.
ಓದಿ: Earthquake shocks: ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ನಡುಗಿದ ಭೂಮಿ.. ಮನೆ ಬಿಟ್ಟು ಓಡಿ ಬಂದ ಜನರು
ಮ್ಯಾನ್ಮಾರ್‌ನಲ್ಲೂ ನಡುಗಿದೆ ಭೂಮಿ: ಮ್ಯಾನ್ಮಾರ್‌ನಲ್ಲೂ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 5.7ರಷ್ಟಿತ್ತು. ಭಾರತೀಯ ಕಾಲಮಾನದ ಪ್ರಕಾರ ಮ್ಯಾನ್ಮಾರ್ನಲ್ಲಿ ಬೆಳಗ್ಗೆ 7.07ಕ್ಕೆ ಈ ಭೂಕಂಪ ಸಂಭವಿಸಿದೆ. ಈ ಭೂಕಂಪವು ಕೆಂಗ್ ತುಂಗ್ ನಗರದ ನೈಋತ್ಯಕ್ಕೆ 76 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಕೂಡ ಮ್ಯಾನ್ಮಾರ್‌ನಲ್ಲಿನ ಈ ಭೂಕಂಪವನ್ನು ದೃಢಪಡಿಸಿದೆ. ಈ ಭೂಕಂಪದ ಕಂಪನವು ಮ್ಯಾನ್ಮಾರ್‌ನ ನೆರೆಯ ದೇಶಗಳಾದ ಥೈಲ್ಯಾಂಡ್ ಮತ್ತು ಲಾವೋಸ್‌ನಲ್ಲೂ ಅನುಭವವಾಗಿದೆ ಎಂದು ತಿಳಿದು ಬಂದಿದೆ.