ಕೀವ್(ಉಕ್ರೇನ್): ಸೋವಿಯತ್ ಒಕ್ಕೂಟದ ಪತನದ ನಡುವೆ ಉಕ್ರೇನ್‌ಗೆ ಸ್ವಾತಂತ್ರ್ಯ ತಂದುಕೊಟ್ಟ ಮತ್ತು ಅದರ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಿಯೊನಿಡ್ ಕ್ರಾವ್ಚುಕ್(88) ಅವರು ಮಂಗಳವಾರ ನಿಧನರಾದರು. ಅಧ್ಯಕ್ಷ ಝೆಲೆನ್ಸ್ಕಿ ಅವರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಕ್ರಾವ್ಚುಕ್ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಉಕ್ರೇನಿಯನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋವಿಯತ್ ಒಕ್ಕೂಟ ಮುರಿದು ಬಿದ್ದ ವರ್ಷಗಳಲ್ಲಿ ಕ್ರಾವ್ಚುಕ್ ಉಕ್ರೇನ್ನಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿ ಮುನ್ನಡೆಸಿದರು. 1991 ರಿಂದ 1994 ರವರೆಗೆ ಉಕ್ರೇನಿಯನ್ ಅಧ್ಯಕ್ಷ ಸ್ಥಾನಕ್ಕೇರುವ ಮೊದಲು ಯುಎಸ್ಎಸ್ಆರ್ನ ಅವನತಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಿಂದ ಇಂಧನ, ಆಹಾರ ಬಿಕ್ಕಟ್ಟು; ಜಾಗತಿಕ ಸಹಕಾರಕ್ಕೆ ಭಾರತ ಕರೆ