ETV Bharat / international

ಇಟಲಿ ಜನಸಂಖ್ಯೆ ಕುಸಿತ; 6 ಕೋಟಿಗಿಂತ ಕೆಳಗಿಳಿದ ಜನರ ಸಂಖ್ಯೆ - ನವಜಾತ ಶಿಶುಗಳ

ಇಟಲಿಯ ಜನಸಂಖ್ಯೆ 6 ಕೋಟಿಗಿಂತ ಕೆಳಗಿಳಿದಿದೆ ಎಂದು ದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಟಿಸ್ಟಿಕ್ಸ್ ಸಂಸ್ಥೆ ತಿಳಿಸಿದೆ.

Italy's population drops below 59 mn
Italy's population drops below 59 mn
author img

By ETV Bharat Karnataka Team

Published : Dec 19, 2023, 4:06 PM IST

ರೋಮ್ : ಇಟಲಿಯ ಜನಸಂಖ್ಯೆ ಕುಸಿತ ಮುಂದುವರೆದಿದ್ದು, ಪ್ರಸ್ತುತ ದೇಶದ ಜನಸಂಖ್ಯೆ 59 ದಶಲಕ್ಷಕ್ಕಿಂತ (5 ಕೋಟಿ 90 ಲಕ್ಷಕ್ಕಿಂತ) ಕಡಿಮೆಯಾಗಿದೆ ಎಂದು ಇಟಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಟಿಸ್ಟಿಕ್ಸ್ (ಐಎಸ್​ಟಿಎಟಿ) ಅಂಕಿ ಅಂಶಗಳು ತಿಳಿಸಿವೆ. 2009 ರಲ್ಲಿ ಇಟಲಿಯ ಜನಸಂಖ್ಯೆ ಮೊದಲ ಬಾರಿಗೆ 59 ಮಿಲಿಯನ್ ದಾಟಿತ್ತು. ಅದರ ಮುಂದಿನ ವರ್ಷದಲ್ಲಿ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನಸಂಖ್ಯೆ 60.6 ಮಿಲಿಯನ್ ತಲುಪಿತ್ತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೋಮವಾರ ಬಿಡುಗಡೆಯಾದ ಇತ್ತೀಚಿನ ಜನಗಣತಿ ದತ್ತಾಂಶದ ಪ್ರಕಾರ- ಡಿಸೆಂಬರ್ 31, 2022 ರ ವೇಳೆಗೆ ದೇಶದಲ್ಲಿ 58,997,201 ಜನರು ವಾಸಿಸುತ್ತಿದ್ದಾರೆ. ಇದರ ಪ್ರಕಾರ ದೇಶದ ಜನಸಂಖ್ಯಾ ಬೆಳವಣಿಗೆ ನಕಾರಾತ್ಮಕವಾಗಿದೆ ಎಂದು ಐಎಸ್​ಟಿಎಟಿ ತಿಳಿಸಿದೆ. ದೇಶದಲ್ಲಿ 2022 ರಲ್ಲಿ 3,93,000 ಮಕ್ಕಳ ಜನನವಾಗಿದೆ. ಇದು ಪ್ರತಿ ಸಾವಿರ ಜನಸಂಖ್ಯೆಗೆ 6.7 ಜನನ ಪ್ರಮಾಣಕ್ಕೆ ಸಮನಾಗಿದೆ. ಇದು 2021 ರ ಅಂಕಿ ಅಂಶಕ್ಕಿಂತ ಸುಮಾರು 7,000 ಕಡಿಮೆ ಮತ್ತು 2008 ರ ಅಂಕಿ ಅಂಶಕ್ಕಿಂತ 1,83,000 ಕಡಿಮೆಯಾಗಿದೆ.

ಕಳೆದ ವರ್ಷ ದೇಶದ ಜನಸಂಖ್ಯೆ ಕೊಂಚ ಹೆಚ್ಚಳವಾಗಿತ್ತು. ಇಟಾಲಿಯನ್ ಅಲ್ಲದ ಪೋಷಕರಿಗೆ ಜನಿಸಿದ ಶಿಶುಗಳ ಸಂಖ್ಯೆ 2022 ರಲ್ಲಿ 53,000 ಆಗಿತ್ತು. ಇದು ಎಲ್ಲಾ ನವಜಾತ ಶಿಶುಗಳ ಪೈಕಿ ಶೇಕಡಾ 13.5 ರಷ್ಟಿದೆ. ಜನಗಣತಿ ಅಂಕಿ -ಸಂಖ್ಯೆಗಳು ದೇಶದಲ್ಲಿ ವಾಸಿಸುತ್ತಿರುವ 5.1 ದಶಲಕ್ಷಕ್ಕೂ ಹೆಚ್ಚು ವಿದೇಶಿ ನಿವಾಸಿಗಳನ್ನು ಸಹ ಒಳಗೊಂಡಿವೆ. ಈ ಪ್ರಮಾಣ ವಾರ್ಷಿಕ 1,11,000 ಅಥವಾ 2.2 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಒಟ್ಟಾರೆಯಾಗಿ ವಿದೇಶಿ ಮೂಲದ ನಾಗರಿಕರು ಒಟ್ಟು ನಿವಾಸಿ ಜನಸಂಖ್ಯೆಯ ಶೇಕಡಾ 8.7 ರಷ್ಟಿದ್ದಾರೆ. 2022 ರಲ್ಲಿ ಜನನದ ನಿರೀಕ್ಷಿತ ಜೀವಿತಾವಧಿಯನ್ನು ಪುರುಷರಿಗೆ 80.5 ವರ್ಷಗಳು ಮತ್ತು ಮಹಿಳೆಯರಿಗೆ 84.8 ವರ್ಷಗಳು ಎಂದು ಅಂದಾಜಿಸಲಾಗಿದೆ. 2021 ಕ್ಕೆ ಹೋಲಿಸಿದರೆ ದೇಶದ 7,904 ಪುರಸಭೆಗಳ ಪೈಕಿ ಶೇಕಡಾ 61.3ರಷ್ಟು ಪುರಸಭೆ ವ್ಯಾಪ್ತಿಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ ಎಂದು ಐಎಸ್​ಟಿಎಟಿ ತಿಳಿಸಿದೆ. ಆದಾಗ್ಯೂ, ದೇಶದ 2,936 ದೊಡ್ಡ ಪುರಸಭೆಗಳ ವ್ಯಾಪ್ತಿಯಲ್ಲಿ ಜನಸಂಖ್ಯೆ ಕೊಂಚ ಹೆಚ್ಚಾಗಿದೆ.

ಇಟಾಲಿಯನ್ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಬ್ರದರ್ಸ್ ಆಫ್ ಇಟಲಿ ಪಾರ್ಟಿ ಇದೇ ಡಿಸೆಂಬರ್ 16ರಂದು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಟೆಸ್ಲಾ ಸಿಇಒ ಎಲೋನ್ ಮಸ್ಕ್, ಇಟಲಿ ತನ್ನ ಸಂಸ್ಕೃತಿ ಉಳಿಸಿಕೊಳ್ಳಲು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದ್ದು ಗಮನಾರ್ಹ.

ಇದನ್ನೂ ಓದಿ : ವಿದೇಶಿ ಹಣ ಒಳಹರಿವಿನಲ್ಲಿ ಭಾರತ ಟಾಪ್; 2023ರಲ್ಲಿ ಬಂದಿದ್ದು $125 ಬಿಲಿಯನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.