ETV Bharat / international

ಲಂಡನ್​ನಲ್ಲಿ ಭಾರತೀಯ ಹೈಕಮಿಷನ್​ನಿಂದ ದೇಶ ವಿಭಜನೆಯ ಕಹಿನೆನಪುಗಳ ಛಾಯಾಚಿತ್ರ ಪ್ರದರ್ಶನ - photograph of bitter memories of partition

ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಅಂದು ನಡೆದ ದೇಶ ವಿಭಜನೆಯ ಕಹಿ ಘಟನೆಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿತ್ತು.

ದೇಶ ವಿಭಜನೆಯ ಕಹಿನೆನಪುಗಳ ಛಾಯಾಚಿತ್ರ ಪ್ರದರ್ಶನ

author img

By

Published : Aug 15, 2023, 12:48 PM IST

ಲಂಡನ್: ಅದು 1947, ಆಗಸ್ಟ್​ 14ರ ಮಧ್ಯರಾತ್ರಿ. 2 ದಶಕಗಳ ಕಾಲ ಅಖಂಡ ಭಾರತವನ್ನಾಳಿದ ಬ್ರಿಟಿಷ್​ ಆಡಳಿತ ದೇಶಕ್ಕೆ ಸ್ವಾತಂತ್ರ್ಯ ಘೋಷಿಸಿತು. ಆದರೆ, ಅದಕ್ಕೂ ಮೊದಲು ಕುತಂತ್ರಿ ಬಿಳಿಯರು ಅವಿಚ್ಛಿನ್ನ ದೇಶವನ್ನು ಭಿನ್ನ ಮಾಡಿ 'ಪಾಕಿಸ್ತಾನ'ವನ್ನು ಸೃಷ್ಟಿಸಿದರು. ಅಂದಿನ ಭಯಾನಕ ವಿದ್ಯಮಾನ ಇತಿಹಾಸದ ಪುಟಗಳಲ್ಲಿ ಎಂದೂ ಅಳಿಯದ ದುರಂತ ಘಟನೆ.

ಇಂದು ನಾವು ಸ್ವಾತಂತ್ರ್ಯೋತ್ಸವದ 77ನೇ ಆಚರಣೆಯಲ್ಲಿದ್ದೇವೆ. 1947 ರ ಭಾರತದ ವಿಭಜನೆಯ ಕಹಿ ಘಟನೆಯ ವಿದ್ಯಮಾನಗಳನ್ನು ಇಂಗ್ಲೆಂಡ್​ನಲ್ಲಿರುವ ಭಾರತ ಹೈಕಮಿಷನರ್​ ಕಚೇರಿ ಛಾಯಾಚಿತ್ರ ಪ್ರದರ್ಶನ ಮೂಲಕ ತೆರೆದಿಟ್ಟಿತು. ವಿಭಜನೆಯ ವೇಳೆ ಜನರ ಗುಳೆ, ಕಷ್ಟ ಕಾರ್ಪಣ್ಯಗಳು, ತ್ಯಾಗವನ್ನು ಸ್ಮರಿಸಲಾಯಿತು. ಭಾರತೀಯ ಸಮುದಾಯದ ಜನರು ಸೇರಿದ ಸಭೆಯಲ್ಲಿ ಅಂದು ನಡೆದ ವಿದ್ಯಮಾನಗಳನ್ನು ನೆನಪಿಸಿಕೊಂಡರು. 77ನೇ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನದ ಮೊದಲು ದೇಶ ವಿಭಜನೆಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಸ್ವಂತಂತ್ರ ದುಃಖ ಮತ್ತು ಸಂತಸದ ಮಿಶ್ರ ಭಾವ: ಇದೇ ವೇಳೆ ಮಾತನಾಡಿದ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ, ಸ್ವಾತಂತ್ರ್ಯ ಸಂಭ್ರಮದಲ್ಲಿರುವ ನಾವು ದುಃಖ ಮತ್ತು ಸಂತಸದ ಮಿಶ್ರ ಭಾವದಲ್ಲಿದ್ದೇವೆ. ಕಾರಣ ಸ್ವತಂತ್ರ ನಮಗೆ ಹಲವರ ತ್ಯಾಗ, ಬಲಿದಾನಗಳಿಂದ ಬಂದಿದೆ. ದೇಶ ವಿಭಜನೆ ಎಂಬ ದೇಹವನ್ನೇ ಸೀಳಿದ ಕಹಿ ಸತ್ಯದ ಮೇಲೆ ಸಂಭ್ರಮಿಸಬೇಕಿದೆ ಎಂದು ಹೇಳಿದರು.

ಜನರು ಅಂದು ಮಾಡದ ತಪ್ಪಿಗೆ ದೇಶವನ್ನು ತೊರೆಯಬೇಕಾಯಿತು. ಹುಟ್ಟಿದ ಊರು, ಮನೆ, ಜನರನ್ನು ಬಿಟ್ಟರು. ನಿರೀಕ್ಷಿಸದ ನೋವಿಗೆ ಭಾರಿ ಬೆಲೆ ತೆತ್ತು ಜನರು ಗಡಿ ದಾಟಬೇಕಾಯಿತು. ಭಾರತವು ನಿರಾಶ್ರಿತರಾಗಿ ಸ್ವಾತಂತ್ರ್ಯವನ್ನು ಆಚರಿಸಬೇಕಾಯಿತು. ಇದು ಮಾನವ ಇತಿಹಾಸದಲ್ಲಿ ಅತಿದೊಡ್ಡ ವಲಸೆ. ಅತ್ಯಂತ ದುರಂತ ಕಥೆಯಾಗಿದೆ ಎಂದು ಅವರು ನೋವು ವ್ಯಕ್ತಪಡಿಸಿದರು.

ಸಾಮೂಹಿಕ ಸ್ಥಳಾಂತರದ ಕಟು ಇತಿಹಾಸವನ್ನು ಸ್ವಾತಂತ್ರ್ಯೋತ್ಸವ ಆಚರಿಸುವ ಮೊದಲು ನೆನಪಿಸಿಕೊಳ್ಳಲು ಈ ದಿನವನ್ನು ಏರ್ಪಡಿಸಲಾಗಿದೆ. ಇದು ನಮ್ಮದೇ ಚರಿತ್ರೆಯ ಮತ್ತೊಂದು ಮಜಲಾಗಿದೆ ಎಂದು ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಹೇಳಿದರು.

ವಂದೇ ಮಾತರಂನ ಪಿಟೀಲು ವಾದಕ ಮತ್ತು ಬ್ರಿಟಿಷ್ ಭಾರತೀಯ ಚಲನಚಿತ್ರ ನಿರ್ಮಾಪಕ ಲಲಿತ್ ಮೋಹನ್ ಜೋಶಿ ಅವರು ದೇಶ ವಿಭಜನೆಯ ಪೂರ್ವದ ಲೇಖಕರಾದ ಡಾ.ಗೌತಮ್ ಸಚ್‌ದೇವ್ ಅವರ ಕೃತಿಗಳಿಂದ ಕವನ ನಿರೂಪಣೆ ಮಾಡಿದರೆ, ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಡಾ.ಶಕುಂತಲಾ ಕೌಶಲ್ ಮತ್ತು ಬ್ರಿಜ್ ಮೋಹನ್ ಗುಪ್ತಾ ಸೇರಿದಂತೆ ವಿಭಜನೆಯ ವೇಳೆ ಇದ್ದ ಈಗ 90 ರ ವಯಸ್ಸಿನ ವಲಸಿಗ ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.

ವಿಭಜನೆ ಕಹಿ ನೆನಪುಗಳ ಪ್ರದರ್ಶನ: ಲಂಡನ್​ನಲ್ಲಿರುವ ಭಾರತ ಭವನದ ಗಾಂಧಿ ಸಭಾಂಗಣದಲ್ಲಿ ದೇಶ ವಿಭಜನೆ ಕಹಿನೆನಪುಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಅಂದು ನಡೆದ ಘೋರ ದುರಂತಗಳ ಬಗ್ಗೆ ಚಿತ್ರಗಳು ಧ್ವನಿಸುವಂತಿದ್ದವು.

ಇದನ್ನೂ ಓದಿ: Independence day: ಯುವಶಕ್ತಿಯಿಂದ ಭಾರತ ವಿಶ್ವಗುರು: ಪ್ರಧಾನಿ ನರೇಂದ್ರ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.