ETV Bharat / international

ಬೀಜಿಂಗ್​ನ ಎಸ್​​​ಸಿಒ ಪ್ರಧಾನ ಕಚೇರಿಯಲ್ಲಿ 'ನವದೆಹಲಿ ಹಾಲ್​' ಉದ್ಘಾಟನೆ: ಮಿನಿ ಇಂಡಿಯಾ ಎಂದು ಕರೆದ ಸಚಿವ ಜೈಶಂಕರ್ - ಭಾರತದ ಅಧ್ಯಕ್ಷತೆಯಲ್ಲಿ ಎಸ್​​​ಸಿಒ ಶೃಂಗಸಭೆ

ಚೀನಾ ರಾಜಧಾನಿ ಬೀಜಿಂಗ್​ನಲ್ಲಿರುವ ಶಾಂಘೈ ಸಹಕಾರ ಸಂಘಟನೆ ಪ್ರಧಾನ ಕಚೇರಿಯಲ್ಲಿ ಭಾರತದ 'ನವದೆಹಲಿ ಹಾಲ್​' ಅನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ವರ್ಚುವಲ್ ಮೂಲಕ ಉದ್ಘಾಟಿಸಿದರು.

India inaugurates New Delhi Hall at SCO Secretariat in Beijing: EAM Jaishankar says it depicts 'mini India'
ಬೀಜಿಂಗ್​ನ ಎಸ್​​​ಸಿಒ ಪ್ರಧಾನ ಕಚೇರಿಯಲ್ಲಿ 'ನವದೆಹಲಿ ಹಾಲ್​' ಉದ್ಘಾಟನೆ: ಮಿನಿ ಇಂಡಿಯಾವನ್ನು ಬಿಂಬಿಸಲಿದೆ ಎಂದ ಜೈಶಂಕರ್
author img

By

Published : Jun 27, 2023, 4:31 PM IST

ಬೀಜಿಂಗ್ (ಚೀನಾ): ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ಮೊದಲ ಬಾರಿಗೆ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation - SCO)ಯ ಶೃಂಗಸಭೆ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಭಾರತವು ಮಂಗಳವಾರ ಚೀನಾ ರಾಜಧಾನಿ ಬೀಜಿಂಗ್​ನಲ್ಲಿರುವ ಎಸ್​​​ಸಿಒ ಪ್ರಧಾನ ಕಚೇರಿಯಲ್ಲಿ ತನ್ನ 'ನವದೆಹಲಿ ಹಾಲ್' ಉದ್ಘಾಟಿಸಿದೆ. ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾದ ಈ 'ನವದೆಹಲಿ ಹಾಲ್​' ಅನ್ನು ಮಿನಿ ಭಾರತದ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಚೀನಾ, ರಷ್ಯಾ, ಕಜಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡಿರುವ ಶಾಂಘೈ ಸಹಕಾರ ಸಂಘಟನೆಯ ಸಚಿವಾಲಯವು ಬೀಜಿಂಗ್‌ನ ಉನ್ನತ ಮಟ್ಟದ ರಾಜತಾಂತ್ರಿಕ ಪ್ರದೇಶದಲ್ಲಿದೆ. ಈಗಾಗಲೇ ಆರು ಸ್ಥಾಪಕ ಸದಸ್ಯರಾದ ಚೀನಾ, ರಷ್ಯಾ, ಕಜಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ ತಮ್ಮ ಸಂಸ್ಕೃತಿ ಮತ್ತು ವಿಶಿಷ್ಟ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವ ಸಭಾಂಗಣಗಳನ್ನು ಹೊಂದಿವೆ. ಭಾರತವು ತನ್ನದೇ ಆದ 'ನವದೆಹಲಿ ಹಾಲ್' ಅನ್ನು ಮೊದಲ ಬಾರಿಗೆ ಆರಂಭಿಸಿದೆ.

ಈ ಬಾರಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಜುಲೈ 4ರಂದು ವರ್ಚುವಲ್ ಮೂಲಕ ಶೃಂಗಸಭೆ ನಡೆಯಲಿದೆ. ಇದಕ್ಕೂ ಮುನ್ನ ಎಸ್​​​ಸಿಒ ಸಚಿವಾಲಯದಲ್ಲಿ ನವದೆಹಲಿ ಹಾಲ್​ ತೆರೆಯಲಾಗಿದೆ. ಪಾಕಿಸ್ತಾನವು ತನ್ನ ಸಭಾಂಗಣವನ್ನು ಸ್ಥಾಪಿಸಲು ತನ್ನ ಸರದಿಗಾಗಿ ಕಾಯಬೇಕಾಗಿದೆ.

ಮಿನಿ ಇಂಡಿಯಾದ ಕಲ್ಪನೆ - ಸಚಿವ ಜೈಶಂಕರ್: ಈ ಸಮಾರಂಭ ಉದ್ದೇಶಿಸಿ ವಿಡಿಯೋ ಮೂಲಕ ಭಾಷಣ ಮಾಡಿದ ಎಸ್. ಜೈಶಂಕರ್, ಎಸ್​​ಸಿಒ ಸೆಕ್ರೆಟರಿಯೇಟ್‌ನಲ್ಲಿ ಇಂದು ಸೆಕ್ರೆಟರಿ ಜನರಲ್ ಮತ್ತು ಇತರ ಪ್ರತಿಷ್ಠಿತ ಸಹೋದ್ಯೋಗಿಗಳ ಉಪಸ್ಥಿತಿಯಲ್ಲಿ ನವದೆಹಲಿ ಸಭಾಂಗಣವನ್ನು ಉದ್ಘಾಟಿಸಲು ನನಗೆ ಸಂತೋಷವಾಗಿದೆ. ಎಸ್​ಸಿಒ ಶೃಂಗಸಭೆಯೊಂದಿಗೆ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿರುವ ಭಾರತದ ಮೊದಲ ಅಧ್ಯಕ್ಷತೆಯಲ್ಲಿ ಹಾಲ್​ ಆರಂಭಿಸಿರುವುದು ನನಗೆ ವಿಶೇಷವಾಗಿ ಸಂತೋಷವಾಗಿದೆ ಎಂದು ತಿಳಿಸಿದರು.

ಈ ನವದೆಹಲಿ ಹಾಲ್​ನಲ್ಲಿ ಮಿನಿ ಇಂಡಿಯಾದ ಕಲ್ಪನೆಯಲ್ಲಿ ಬಿಂಬಿಸಲಾಗಿದೆ. ಇದರಲ್ಲಿ ಭಾರತೀಯ ಸಂಸ್ಕೃತಿಯ ವಿವಿಧ ಪ್ರಕಾರಗಳನ್ನು ಚಿತ್ರಿಸಲಾಗಿದೆ. ಭಾರತದ ಕಲಾತ್ಮಕ ಸಂಪ್ರದಾಯ ಮತ್ತು ಸಾಂಸ್ಕೃತಿಕಯ ಆಳವನ್ನು ದೃಶ್ಯೀಕರಿಸುವಂತೆ ಮಾಡಲು ಭಾರತದಾದ್ಯಂತ ಕಂಡುಬರುವ ಶ್ರೀಮಂತ ವಾಸ್ತುಶಿಲ್ಪದ ಕುಶಲತೆಯನ್ನು ಪ್ರತಿನಿಧಿಸುವ ಸೊಗಸಾದ ಮಾದರಿಗಳು ಮತ್ತು ಲಕ್ಷಣಗಳೊಂದಿಗೆ ಸಭಾಂಗಣವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

ಮುಂದುವರೆದು, ಸಭಾಂಗಣವು ಅದರ ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಭೌತಿಕ ಮತ್ತು ವರ್ಚುವಲ್ ಸ್ವರೂಪಗಳಲ್ಲಿ ಸಭೆಗಳನ್ನು ಸುಗಮಗೊಳಿಸಲು ಆಧುನಿಕ ತಂತ್ರಜ್ಞಾನಗಳನ್ನು ಸಹ ಹೊಂದಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಚಿವಾಲಯದ ಚಟುವಟಿಕೆಗಳು ಹಾಗೂ ಸಭೆಗಳನ್ನು ನಡೆಸಲು ಸಭಾಂಗಣ ಉಪಯುಕ್ತವಾಗಲಿದೆ ಎಂದರು.

ಇದರ ಜೊತೆಗೆ ಇದು ಸೆಕ್ರೆಟರಿಯೇಟ್‌ನ ಬಹುಸಂಸ್ಕೃತಿಯ ಮತ್ತು ಬಹುರಾಷ್ಟ್ರೀಯ ಪಾತ್ರಕ್ಕೆ ಭಾರತೀಯ ಬಣ್ಣಗಳು ಮತ್ತು ಘಮಲು ಹೆಚ್ಚಿಸುತ್ತದೆ. 'ವಸುಧೈವ ಕುಟುಂಬಕಂ’ ಅಂದರೆ 'ಜಗತ್ತೇ ಒಂದು ಕುಟುಂಬ' ಎಂಬ ಸಾರವನ್ನು ಪೋಷಿಸುವ ಭಾರತದ ಬದ್ಧತೆಗೆ ಸಭಾಂಗಣ ಸಾಕ್ಷಿಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು.

ಇದನ್ನೂ ಓದಿ: SCO ಶೃಂಗಸಭೆಯಲ್ಲಿ ಭಾಗವಹಿಸಲು ಪಾಕ್ ಸಿದ್ಧವಿದೆ.. ಆದರೆ ಭಾರತ ವರ್ಚುಯಲ್ ಸಭೆ ಆಯೋಜಿಸಿದೆ: ಬಿಲಾವಲ್ ಭುಟ್ಟೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.