ETV Bharat / international

ರಷ್ಯಾ-ಉಕ್ರೇನ್‌ ಯುದ್ಧದಿಂದ ಇಂಧನ, ಆಹಾರ ಬಿಕ್ಕಟ್ಟು; ಜಾಗತಿಕ ಸಹಕಾರಕ್ಕೆ ಭಾರತ ಕರೆ - ಅಂತರರಾಷ್ಟ್ರೀಯ ಸಹಕಾರಕ್ಕೆ ಭಾರತ ಕರೆ

ರಷ್ಯಾ ಮತ್ತು ಉಕ್ರೇನ್​ ಯುದ್ಧವು ಪ್ರಾದೇಶಿಕ ಮತ್ತು ಜಾಗತಿಕವಾಗಿ ಹೆಚ್ಚು ಪರಿಣಾಮ ಬೀರುತ್ತಿದೆ. ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಆಹಾರ ಧಾನ್ಯಗಳು, ರಸಗೊಬ್ಬರಗಳ ಕೊರತೆ ಉಂಟಾಗಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಗುರುವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿತು.

ಟಿ.ಎಸ್. ತಿರುಮೂರ್ತಿ
ಟಿ.ಎಸ್. ತಿರುಮೂರ್ತಿ
author img

By

Published : May 6, 2022, 7:34 AM IST

ವಿಶ್ವಸಂಸ್ಥೆ: ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಆಹಾರ ಖರೀದಿಗೆ ಅನುಕೂಲವಾಗಲು ರಫ್ತು ನಿರ್ಬಂಧಗಳಿಂದ ವಿನಾಯಿತಿ ನೀಡುವ ಉನ್ನತ ಮಟ್ಟದ ಯುಎನ್ ಸಮಿತಿಯ ಶಿಫಾರಸು ಸ್ವಾಗತಿಸಿರುವ ಭಾರತ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದ ಉಂಟಾದ ಇಂಧನ ಬಿಕ್ಕಟ್ಟು ಎದುರಿಸಲು ಅಂತರರಾಷ್ಟ್ರೀಯ ಸಹಕಾರಕ್ಕೆ ಕರೆ ನೀಡಿದೆ.

ಗುರುವಾರ ನಡೆದ ಭದ್ರತಾ ಮಂಡಳಿಯ ಮಹತ್ವದ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಮಾತನಾಡಿ, "ಘರ್ಷಣೆಯು ಪ್ರಾದೇಶಿಕ ಮತ್ತು ಜಾಗತಿಕವಾಗಿ ಹೆಚ್ಚು ಪರಿಣಾಮ ಬೀರುತ್ತಿದೆ. ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಆಹಾರ ಧಾನ್ಯಗಳು, ರಸಗೊಬ್ಬರಗಳ ಕೊರತೆ ಉಂಟಾಗಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.

ಇಂಧನ ಕೊರತೆಯೂ ಗಂಭೀರ ಸಮಸ್ಯೆ. ಪರಸ್ಪರ ಅಂತರರಾಷ್ಟ್ರೀಯ ಮಟ್ಟದ ಕಾಳಜಿ ಹಾಗೂ ಸಹಕಾರದಿಂದ ಮಾತ್ರ ಈ ಸಮಸ್ಯೆ ಪರಿಹರಿಸಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ಇದೇ ವೇಳೆ, ಉಕ್ರೇನ್​ನ ಬುಚಾ ಎಂಬಲ್ಲಿ ರಷ್ಯಾ ನಡೆಸಿದೆ ಎನ್ನಲಾದ ನಾಗರಿಕರ ಮಾರಣಹೋಮ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು, ಇದನ್ನು ನಾವು ಖಂಡಿಸುತ್ತೇವೆ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿ ಫ್ರಾನ್ಸ್‌ ಭೇಟಿ: ಮ್ಯಾಕ್ರೋನ್‌ ಜೊತೆ ಉಕ್ರೇನ್​ ಸಂಘರ್ಷ, ಆಫ್ಘನ್​ ಬಿಕ್ಕಟ್ಟು ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.